– ಗಲ್ಫ್ ರಾಷ್ಟ್ರದಿಂದ ಬರುತ್ತಿದ್ದ ಡೀಸೆಲ್‌ಗೂ ಸಂಕಷ್ಟ
ಕಾರವಾರ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಕರ್ನಾಟಕದ ಕರಾವಳಿಯ ವಾಣಿಜ್ಯ ಬಂದರಿಗೆ ದೊಡ್ಡ ಹೊಡೆತ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ವಾಣಿಜ್ಯ ಬಂದರಿನಲ್ಲಿ ಇರಾಕ್ ಹಾಗೂ ಮಧ್ಯಪ್ರಾಚ್ಯ ದೇಶದಿಂದ ಬರುವ ಕಚ್ಚಾ ಡಾಂಬರ್ (Bitumen), ಡಿಸೇಲ್, ಪಾಮ್ ಆಯಿಲ್‌ಗಳ ಸರಬರಾಜು ಬಂದ್ ಆಗಿವೆ. ವಾಣಿಜ್ಯ ಬಂದರಿನಲ್ಲಿ ಶಿಪ್‌ಗಳಿಲ್ಲದೇ ಬಿಕೋ ಎನ್ನುತಿದ್ದು, ನಷ್ಟ ತಂದೊಡ್ಡಿದೆ.
ಇರಾಕ್‌ನಿಂದ ಪ್ರತಿ ತಿಂಗಳು ಕಾರವಾರದ ಬಂದರಿಗೆ ಕಚ್ಚಾ ಡಾಂಬರ್ ಬರುತ್ತಿತ್ತು. ಗಲ್ಫ್ ರಾಷ್ಟ್ರದಿಂದ ಬರುತ್ತಿದ್ದ ಡೀಸೆಲ್‌ಗೂ ಸಂಕಷ್ಟ ಎದುರಾಗಿದೆ. ಹಡಗುಗಳಿಲ್ಲದೇ ಕಾರವಾರ ವಾಣಿಜ್ಯ ಬಂದರು ಬಿಕೋ ಎನ್ನುತ್ತಿದೆ. ಇದನ್ನೂ ಓದಿ: US-Israel-Iran War: ಕಚ್ಚಾತೈಲ ಬೆಲೆ ಏರಿಕೆ – ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದ ಬೆಲೆ
ಪ್ರತಿ ತಿಂಗಳು 70 ರಿಂದ 80 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕಾರವಾರದ ವಾಣಿಜ್ಯ ಬಂದರಿನಲ್ಲಿ ಡಾಂಬರ್ ಲಾರಿಗಳು ಸಾಲುಗಟ್ಟಿ ನಿಂತಿವೆ. ನೌಕಾ ನೆಲೆಗೆ ಸರಬರಾಜಾಗುವ ಡೀಸೆಲ್‌ಗೂ ಸಂಕಷ್ಟ ಎದುರಾಗಿದೆ.
ಮುಂಬೈನಿಂದ ನೌಕಾನೆಲೆಗೆ ಕಾರವಾರ ಕದಂಬ ನೌಕಾ ನೆಲೆ ಡೀಸೆಲ್ ತರಿಸಿಕೊಳ್ಳುತ್ತಿದೆ. ಬಂದರು ವಾಣಿಜ್ಯ ಚಟುವಟಿಕೆ ನಂಬಿದ ಲಾರಿ ಮಾಲೀಕರಿಗೂ ತೊಂದರೆಯಾಗಿದೆ. ಕಳೆದ 10 ದಿನದಿಂದ ಕೆಲಸವಿಲ್ಲದೇ ಡಾಂಬರ್ ಲಾರಿಗಳು ಬಂದ್ ಬಿದ್ದಿವೆ. ಇದನ್ನೂ ಓದಿ: ಇರಾನ್ ಯುದ್ಧದಿಂದ ಭಾರತಕ್ಕೆ ಸಂಕಷ್ಟ – ಅಕ್ಕಿ ವರ್ತಕರಿಗೆ ರೈಸ್ ಮಿಲ್ ಮುಚ್ಚುವ ಭೀತಿ

