ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ದಾಖಲೆಯ 4,48,004 ಕೋಟಿ ರೂ. ಗಾತ್ರದ ಬಜೆಟ್ (Karnataka) ಮಂಡನೆ ಮಾಡಿದ್ದು, ಈ ಪೈಕಿ ಕಾಂಗ್ರೆಸ್ 4 ಗ್ಯಾರಂಟಿ (Congress Guarantee) ಯೋಜನೆಗಳಿಗೆ 50,686 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
ಯಾವ ಗ್ಯಾರಂಟಿಗೆ ಎಷ್ಟು?
ಕಾಂಗ್ರೆಸ್ಸಿನ 5 ಗ್ಯಾರಂಟಿಗಳ ಪೈಕಿ ಯುವ ನಿಧಿಯ ಹಂಚಿಕೆಯನ್ನು ತೋರಿಸಿಲ್ಲ. ಉಳಿದ ನಾಲ್ಕು ಗ್ಯಾರಂಟಿಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಗೃಹಲಕ್ಷ್ಮಿ 28,608 ಕೋಟಿ ರೂ., ಗೃಹ ಜ್ಯೋತಿ 10,578 ಕೋಟಿ ರೂ., ಅನ್ನ ಭಾಗ್ಯ 6,200 ಕೋಟಿ ರೂ., ಮಹಿಳೆಯರ ಉಚಿತ ಪ್ರಯಾಣ ಒದಗಿಸುವ ಶಕ್ತಿಗೆ 5,300 ಕೋಟಿ ರೂ. ಅನುದಾನವನ್ನು ಕೊಡಲಾಗಿದೆ. ಅಂದರೆ ಒಟ್ಟು ಬಜೆಟ್‌ನ ಸುಮಾರು 11.37% ಪಾಲು ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ.
ಇತರೆ ವಲಯಗಳು 1,72,757 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು ಇದರಲ್ಲಿ ಯಾವುದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಕಲ್ಯಾಣದ ನಿಧಿ ಬಳಸುತ್ತಿರುವುದಕ್ಕೆ ಈಗಾಗಲೇ ಆ ಸಮಾಜದ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. 2023–24ರಲ್ಲಿ 11,144 ಕೋಟಿ ರೂ., 2024–25ರಲ್ಲಿ 14,282 ಕೋಟಿ ರೂ. ಹಾಗೂ 2025–26ರಲ್ಲಿ ಈತನಕ 13,433 ಕೋಟಿ ರೂ. ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿದೆ. 3 ವರ್ಷಗಳಲ್ಲಿ ಎಸ್ಸಿಎಸ್ಪಿ, ಟಿಎಸ್ಪಿಗೆ ಮೀಸಲಿಟ್ಟಿದ್ದ 39,859 ಕೋಟಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಬಿಜೆಪಿ ಈಗಾಗಲೇ ಟೀಕಿಸಿದೆ.
ಇದನ್ನೂ ಓದಿ: ಬಜೆಟ್ 2026 – UNESCO ಸಹಮತಿಯೊಂದಿಗೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ
ಯಾವ ಇಲಾಖೆಗೆ ಎಷ್ಟು?
ಶಿಕ್ಷಣ: 47,224 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,929 ಕೋಟಿ ರೂ.
ಇಂಧನ: 29,947 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 26,559 ಕೋಟಿ ರೂ.
ಲೋಕೋಪಯೋಗಿ ಮತ್ತು ಸಾರಿಗೆ: 23,100 ಕೋಟಿ ರೂ.
ನೀರಾವರಿ: 22,436 ಕೋಟಿ ರೂ.
ನಗರಾಭಿವೃದ್ಧಿ ಮತ್ತು ವಸತಿ: 22,203 ಕೋಟಿ ರೂ.
ಕಂದಾಯ: 19,843 ಕೋಟಿ ರೂ.
ಸಮಾಜ ಕಲ್ಯಾಣ: 18,612 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 17,817 ಕೋಟಿ ರೂ.
ಒಳಾಡಳಿತ (ಗೃಹ): 11,424 ಕೋಟಿ ರೂ.
ಕೃಷಿ ಮತ್ತು ತೋಟಗಾರಿಕೆ: 8,373 ಕೋಟಿ ರೂ.
ಆಹಾರ ಮತ್ತು ನಾಗರಿಕ ಸರಬರಾಜು: 7,942 ಕೋಟಿ ರೂ.
ಪಶುಸಂಗೋಪನೆ ಮತ್ತು ಮೀನುಗಾರಿಕೆ: 4,084 ಕೋಟಿ ರೂ.
ಇತರೆ ವಲಯಗಳು: 1,72,757 ಕೋಟಿ ರೂ. ಇದನ್ನೂ ಓದಿ: ಈ ವರ್ಷ1.32 ಲಕ್ಷ ಕೋಟಿ ಸಾಲ| ಸಾಲಗಾರ ಸಿದ್ದರಾಮಯ್ಯ – ಬಿಜೆಪಿ ಟೀಕೆ

