ಬೆಂಗಳೂರು: ಆರ್ಸಿಬಿ ಅಭಿಮಾನಿಗಳ (RCB Fans) ಪಾಲಿಗಿಂದು ಬಿಗ್ ಡೇ… ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ಭವಿಷ್ಯ ನಿರ್ಧಾರವಾಗಲಿದ್ದು, ಸರ್ಕಾರ ಇಂದು ಪಂದ್ಯ ಆಯೋಜನೆ ಸಂಬಂಧ ಅಧಿಕೃತ ನಿರ್ಧಾರ ತಿಳಿಸಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ಕ್ರಿಕೆಟ್ ಅಭಿಮಾನಿಗಳ ಎಮೋಷನಲ್ ಸೆಂಟರ್. 18 ವರ್ಷಗಳಿಂದ ಕಪ್ ಗಾಗಿ ಕಾದಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕಪ್ ಗೆದ್ದ ಖುಷಿ, ಕೆಲವೇ ಗಂಟೆಗಳಲ್ಲಿ ಮಾಸಿಹೋಗಿತ್ತು. ಕಾಲ್ತುಳಿತ ದುರಂತದ ಬಳಿಕ ಬೆಂಗಳೂರು ಮೈದಾನದಿಂದ ದೂರವಾಗಿರುವ ಪಂದ್ಯಗಳನ್ನ ವಾಪಸ್ ತರುವ ನಿಟ್ಟಿನಲ್ಲಿ ಕೆಎಸ್ಸಿಎ (KSCA) ಹಲವು ಪ್ರಯತ್ನಗಳ ಮಾಡಿದ್ದು, ಈ ಸಂಬಂಧ ಸರ್ಕಾರ ಇಂದು ಅಧಿಕೃತ ನಿರ್ಧಾರ ಪ್ರಕಟಿಸಲಿದೆ. ಸರ್ಕಾರದ ನಿರ್ಧಾರದ ಮೇಲೆ ಮುಂದೆ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯಬೇಕಾ? ಬೇಡವಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: T20 World Cup | ಥ್ರಿಲ್ಲಿಂಗ್ ಮ್ಯಾಚ್, ಆಫ್ರಿಕಾಗೆ ಸೂಪರ್ ಸೂಪರ್ ಜಯ; ಹೋರಾಡಿ ಸೋತ ಅಫ್ಘಾನ್

ಹೌದು. ಕಾಲ್ತುಳಿತ ದುರಂತದ ಬಳಿಕ ಘಟನೆಗೆ ಕಾರಣಗಳನ್ನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸರ್ಕಾರ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ಒಂದನ್ನ ರಚಿಸಿತು. ಸಮಿತಿ, ಮೈದಾನದಲ್ಲಿ ಇನ್ಮುಂದೆ ಪಂದ್ಯಗಳ ಆಯೋಜನೆ ಮಾಡಬೇಕಾದ್ರೆ, ಘಟನೆಗೆ ಕಾರಣವಾದ ಅಂಶಗಳನ್ನ ಸರಿಪಡಿಸಲೇಬೇಕೆಂದು ಕೆಎಸ್ಸಿಎಗೆ ಸೂಚನೆ ನೀಡಿತ್ತು. ಅದರಂತೆ ವೇಗವಾಗಿ ಕ್ರಮಗಳನ್ನ ಕೈಗೊಂಡ ಆಡಳಿತ ಮಂಡಳಿ ತುರ್ತಾಗಿ ಆಗಬೇಕಿದ್ದ ಕ್ರಮಗಳನ್ನ ಪೂರ್ಣಗೊಳಿಸಿದೆ. ಪೂರ್ಣಗೊಂಡ ಕ್ರಮಗಳ ಸಂಬಂಧ ಗೃಹ ಇಲಾಖೆ ನೇಮಕ ಮಾಡಿದ್ದ ಜಿಬಿಎ ಮುಖ್ಯ ಆಯುಕ್ತರ ನೇತೃತ್ವದ ಕಮಿಟಿ, ಮೈದಾನಕ್ಕೆ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಡಳಿತ ಮಂಡಳಿ ಕೈಗೊಂಡಿರೋ ಕ್ರಮಗಳ ಬಗ್ಗೆ ವರದಿ ಸಿದ್ದಪಡಿಸಿದೆ. ಇಂದು ಗೃಹಸಚಿವರಿಗೆ ಈ ವರದಿ ಸಲ್ಲಿಕೆ ಮಾಡಲಿದ್ದು, ಇಲ್ಲಿತನಕ ಮೈದಾನದಲ್ಲಿ ಆಗಿರುವ ಕ್ರಮಗಳು ಜೊತೆಗೆ ಮುಂದೆ ಆಗಬೇಕಿರೋ ಸಿದ್ದತೆ ಬಗ್ಗೆ ಸರ್ಕಾರಕ್ಕೆ ಕಮಿಟಿ ಮಾಹಿತಿ ನೀಡಲಿದೆ. ಈ ಎಲ್ಲಾ ಅಂಶಗಳನ್ನ ಬಗ್ಗೆ ಕೆಎಸ್ಸಿಎ ಮತ್ತು ಆರ್ಸಿಬಿ ನಿಯೋಗದ ಜೊತೆಯೂ ಸರ್ಕಾರ ಇಂದೇ ಚರ್ಚಿಸಿ ಪಂದ್ಯ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಘಟನೆಗಳ ಕುರಿತು ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಸಮಿತಿ ಮಹತ್ವದ ವರದಿ ಪ್ರಕಾರ ಸ್ಟೇಡಿಯಂನಲ್ಲಿ ಜನಸಂದಣಿ ನಿಯಂತ್ರಣದಲ್ಲಿ ಗಂಭೀರ ಕೊರತೆ ಕಂಡುಬಂದಿದೆ. ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: RCB ಗೆ ಬಿಗ್ ಶಾಕ್ – ಎನ್ಒಸಿ ನಿರಾಕರಿಸಿದ ಎಂಸಿಎ; ಬೆಂಗಳೂರಲ್ಲೇ ಐಪಿಎಲ್ ಉದ್ಘಾಟನೆ ಫಿಕ್ಸಾ?
ಪಂದ್ಯ ಹಾಗೂ ಸಂಭ್ರಮದ ವೇಳೆ ತುರ್ತು ಪರಿಸ್ಥಿತಿಗೆ ಸ್ಪಷ್ಟ ಕಾರ್ಯಯೋಜನೆ ಇರಲಿಲ್ಲ ಎನ್ನಲಾಗಿದೆ. ಅಭಿಮಾನಿಗಳ ಸುರಕ್ಷತೆಗಾಗಿ ಹೆಚ್ಚುವರಿ ಸಿಸಿಟಿವಿ, ಭದ್ರತಾ ತಪಾಸಣೆ ಮತ್ತು ವೈದ್ಯಕೀಯ ತುರ್ತು ಸೇವೆ ಬಲಪಡಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ತುರ್ತಾಗಿ ಮಾಡಬೇಕಿದ್ದ ಎಂಟ್ರಿ ಎಕ್ಸಿಟ್ ದ್ವಾರಗಳ ಅಗಲೀಕರಣ, ಅಗ್ನಿಶಾಮಕದಳ ಓಡಾಟಕ್ಕೆ ಅವಕಾಶ, ತುರ್ತು ಸೇವೆ ವಾಹನಗಳ ಓಡಾಟಕ್ಕೆ ಅವಕಾಶ ಕಾಮಗಾರಿಗಳನ್ನ ವೇಗವಾಗಿ ಮಾಡಲಾಗುತ್ತಿದ್ದು ಬಹುತೇಕ ಈ ತಿಂಗಳ ಅಂತ್ಯದೊಳಗೆ ಈ ಎಲ್ಲಾವು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಪಾಕ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

ತುರ್ತಾಗಿ ಕೈಗೊಂಡ ಕ್ರಮಗಳೇನು?
– ಎಂಟ್ರಿ, ಎಕ್ಸಿಟ್ ಗೇಟ್ಗಳ ಅಗಲೀಕರಣ
– ಮೈದಾನದೊಳಗೆ ಆಂಬ್ಯುಲೆನ್ಸ್ಗಳ ಸರಾಗ ಪ್ರವೇಶಕ್ಕೆ ಅವಕಾಶ
– ತುರ್ತು ಅಗ್ನಿನಿರೋಧಕ ವ್ಯವಸ್ಥೆ
– ಎಲ್ಲಾ ಗೇಟ್ಗಳಲ್ಲೂ ಪ್ರವೇಶಕ್ಕೆ ಅವಕಾಶ
– ಟಿಕೆಟ್ ನಿರ್ವಹಣೆಯಲ್ಲಿ ಪಾರದರ್ಶಕತೆ
– ಸ್ಟೇಡಿಯಂ ಮೂಲಸೌಕರ್ಯ ಅಭಿವೃದ್ಧಿ
– ಅಭಿಮಾನಿಗಳ ಸುರಕ್ಷತೆಗೆ ಕ್ಲಬ್, ಆಯೋಜಕರ ಹೊಣೆಗಾರಿಕೆ
– ಪೊಲೀಸ್, ಖಾಸಗಿ ಭದ್ರತಾ ಸಿಬ್ಬಂದಿ ಹೆಚ್ಚುವರಿ ನಿಯೋಜನೆ

ಹೀಗೆ ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಯ್ತು. ಇನ್ನು ಈ ಎಲ್ಲಾ ಕಾರ್ಯಗಳೊಂದಿಗೆ ಕಳೆದ ಬಾರಿ ಚಾಂಪಿಯನ್ ಆಗಿರುವ ಆರ್ಸಿಬಿ ನಿಯಮದಂತೆ ಬೆಂಗಳೂರಿನಲ್ಲೇ ಉದ್ಘಾಟನೆ ಪಂದ್ಯ ಆಡಬೇಕು. ಆದರೆ ಉದ್ಘಾಟನಾ ಪಂದ್ಯಕ್ಕೆ ಸದ್ಯ ಬೆಂಗಳೂರು ಮೈದಾನ ಸಿದ್ದವಾಗಿದೀಯಾ? ಅನ್ನೋದೆ ಸದ್ಯಕ್ಕಿರುವ ಪ್ರಶ್ನೆ. ಕಾರಣ ಉದ್ಘಾಟನಾ ಪಂದ್ಯದ ವೇಳೆ, ಮೈದಾನದಲ್ಲಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತೆ. ಈ ವೇಳೆ ಹೆಚ್ಚು ಜನ ಸೇರುವ ನೀರಿಕ್ಷೆ ಇದೆ. ಕಳೆದ ಬಾರಿಯ ದುರಂತದ ಕಾರಣ ಮತ್ತೆ ಅಂತಹ ಕಾರ್ಯಕ್ರಮಗಳ ಸಂಧರ್ಭದಲ್ಲಿ ಮತ್ತೆ ಸರ್ಕಾರ, ಕೆಎಸ್ಸಿಎ ಮತ್ತು ಆರ್ಸಿಬಿ ರಿಸ್ಕ್ ತೆಗೆದುಕೊಳ್ಳೋ ನಿರ್ಧಾರಕ್ಕೆ ಮುಂದಾಗುತ್ತಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ. ಹೀಗಾಗಿ ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ಒಮ್ಮತದ ನಿರ್ಧಾರದ ಆಧಾರದ ಮೇಲೆ ಪಂದ್ಯ ಆಯೋಜನೆ ಜೊತೆಗೆ ಉದ್ಘಾಟನೆ ಪಂದ್ಯದ ಭವಿಷ್ಯವು ನಿರ್ಧಾರ ಆಗಲಿದೆ.

