– ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ವಿಪಕ್ಷಗಳ ಅಸಮಾಧಾನ
ನವದೆಹಲಿ: ಓಂ ಬಿರ್ಲಾ (Om Birla) ಅವರನ್ನ ಲೋಕಸಭಾ ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ವಿಪಕ್ಷಗಳು ಚಾಲನೆ ನೀಡಿವೆ. ಹೀಗಾಗಿ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ (No confidence Motion) ಕುರಿತು ಮಾರ್ಚ್ 9 ರಂದು ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Lok Sabha Speaker Om Birla decided on moral grounds that he will not attend the proceedings of House till disposal of notice: Sources
— ANI (@ANI) February 10, 2026
ವಿಪಕ್ಷ ಸಂಸದರು ಪ್ರಧಾನಿ ಮೋದಿ (PM Modi) ವಿರುದ್ಧ ಅನಿರೀಕ್ಷಿತ ಕೃತ್ಯ ಎಸಗಲು ಸಂಚು ರೂಪಿಸಿದ ಹಾಗೂ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷದವರಿಗೆ ಮಾತನಾಡಲು ಅವಕಾಶ ಕೊಡ್ತಿಲ್ಲ ಅನ್ನೋದು ಇಂಡಿ (INDIA) ಕೂಟದ ಆರೋಪವಾಗಿದೆ. ಸ್ಪೀಕರ್ ವಿರುದ್ಧ ಪಕ್ಷಪಾತಿ ಆರೋಪ ಹೊರಿಸಿರುವ ವಿಪಕ್ಷಗಳು, ಕಲಾಪಗಳಲ್ಲಿ ಆಡಳಿತ ಪಕ್ಷಕ್ಕೆ ಉದ್ದೇಶಪೂರ್ವಕವಾಗಿ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತಿದ್ದಾರೆ ಎಂದೂ ಆರೋಪಿಸಿವೆ. ಇದನ್ನೂ ಓದಿ: ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ
ಅಲ್ಲದೇ ಅವಿಶ್ವಾಸ ನಿರ್ಣಯ ನಿರ್ಧಾರವಾಗುವವರೆಗೂ ಕಲಾಪದ ಅಧ್ಯಕ್ಷತೆಯಿಂದ ಹಿಂದೆ ಸರಿಯುವಂತೆಯೂ ಒತ್ತಾಯಿಸಿವೆ. ಈ ಮಧ್ಯೆ ಓಂ ಬಿರ್ಲಾ ಅವರು ತಮ್ಮ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಇತ್ಯರ್ಥವಾಗುವವರೆಗೆ, ಲೋಕಸಭೆ ಸ್ಪೀಕರ್ ಕುರ್ಚಿಯಲ್ಲಿ ಕುಳಿತುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಬಜೆಟ್ ಅಧಿವೇಶನದ 2ನೇ ಹಂತದ ಮೊದಲ ದಿನ ಚರ್ಚೆ ನಡೆಸುವ ಸಾಧ್ಯತೆಯಿದೆ. ಕಾಂಗ್ರೆಸ್ ಮಂಗಳವಾರ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ನಿರ್ಣಯಕ್ಕೆ 118 ಸಂಸದರು ಸಹಿ ಹಾಕಿದ್ದಾರೆ. ಮಾ.9 ರಂದು ಈ ಬಗ್ಗೆ ಚರ್ಚೆ ನಡೆಯಲಿದೆ. ಇದನ್ನೂ ಓದಿ: ಮೇಜರ್ ನರವಣೆ ʻಅಪ್ರಕಟಿತ ಆತ್ಮಚರಿತ್ರೆʼ ಎಬ್ಬಿಸಿದ ಬಿರುಗಾಳಿ – 2020 ಆಗಸ್ಟ್ 31ರ ರಾತ್ರಿಗೂ ಮುನ್ನ ಏನಾಯ್ತು?
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ವಿರೋಧ ವ್ಯಕ್ತಪಡಿಸಿದೆ. ಇದರ ನಡುವೆಯೂ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ನೊಟೀಸ್ ನೀಡಿವೆ.


