ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ (BBK 12) ತೆರೆ ಬೀಳಲು ಕೌಂಟ್ಡೌನ್ ಶುರುವಾದ ಈ ಹೊತ್ತಲ್ಲೇ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ. ಗೆಲ್ಲುವ ಸ್ಪರ್ಧಿಗೆ ಶುಕ್ರವಾರ 12 ಗಂಟೆವರೆಗಿನ ಲೆಕ್ಕಚಾರದಲ್ಲಿ ಭರ್ತಿ 370000000 ಮತಗಳನ್ನ ಗಳಿಸಿರುವುದು ರಿವೀಲ್ ಆಗಿದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಎರಡನೇ ಸ್ಥಾನದಲ್ಲಿರುವ ಸ್ಪರ್ಧಿ ಈ ಮತಬೇಟೆ ಲೆಕ್ಕದ ಹತ್ತಿರದಲ್ಲೇ ಇದ್ದಾರೆ ಅನ್ನೋದು ಮಾಹಿತಿಯೂ ಹೊರಬಿದ್ದಿದೆ.
ಇದೇ ಭಾನುವಾರ ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಹೊತ್ತಲ್ಲಿ ದಾಖಲೆಯ ಮತಗಳಿಕೆಯಾಗಿರುವುದು ಗಮನಾರ್ಹ. ಯಾರಿಗೆ ಇಷ್ಟೊಂದು ಮತ ಬಂದಿರಬಹುದು ಅನ್ನೋ ಚರ್ಚೆ ಜೋರಾಗಿದ್ದು ಗಿಲ್ಲಿಯಾ, ಅಶ್ವಿನಿಯಾ ಎಂಬ ಮಾತುಕತೆ ಜೋರಾಗಿದೆ. ಇನ್ನು ಕಳೆದ ಸೀಸನ್ನಲ್ಲಿ ವಿನ್ನರ್ ಹನುಮಂತ 5+ ಕೋಟಿ ಮತವನ್ನ ಗಳಿಸಿ ದಾಖಲೆ ಬರೆದಿದ್ದರು. ಈ ಸೀಸನ್ನಲ್ಲಿ ವಿನ್ ಆಗುವ ಸ್ಪರ್ಧಿ ಅದಕ್ಕಿಂತ 10 ಪಟ್ಟು ಮತ ಗಳಿಸುವ ಸೂಚನೆ ಕಂಡುಬರುತ್ತಿದೆ.
ಭಾನುವಾರ ಬೆಳಗ್ಗೆ 10 ಗಂಟೆವರೆಗೂ ವೋಟ್ ಮಾಡಲು ಅವಕಾಶ ಇರುತ್ತದೆ. ಅಂದಹಾಗೆ ಅಖಾಡದಲ್ಲಿರುವ 6 ಸ್ಪರ್ಧಿಗಳಲ್ಲಿ ಕಡಿಮೆ ಮತವೇ 94 ಲಕ್ಷ ದಾಟಿದೆ. ಗೆಲ್ಲುವ ಸ್ಪರ್ಧಿ ಹಿಂದಿನ ಎಲ್ಲಾ ಸೀಸನ್ ದಾಖಲೆಯನ್ನ ಮುರಿದಿದ್ದಾರೆ. ಸದ್ಯಕ್ಕೀಗ ಬಿಗ್ಬಾಸ್ ಮನೆಯಲ್ಲಿ ಗಿಲ್ಲಿನಟ, ಅಶ್ವಿನಿ ಗೌಡ, ಕಾವ್ಯ, ಮ್ಯೂಟಂಟ್ ರಘು, ರಕ್ಷಿತಾ ಹಾಗೂ ಧನುಷ್ ಇದ್ದಾರೆ. ಈ ಆ ಸ್ಪರ್ಧಿಗಳಲ್ಲಿ ಈ ಸೀಸನ್ ಕಪ್ನ್ನ ಯಾರು ತಮ್ಮದಾಗಿಸಿಕೊಳ್ಳುತ್ತಾರೆ ಅಂತ ನೋಡೋಕೆ ಕುತೂಹಲ ಜೋರಾಗಿದೆ.

