Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮತದಾರರ ಗೌಪ್ಯತೆ & ಭದ್ರತೆ ಮೇಲೆ ಪರಿಣಾಮ: ಮತದಾನದ ದೃಶ್ಯಗಳ ಬೇಡಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮತದಾರರ ಗೌಪ್ಯತೆ & ಭದ್ರತೆ ಮೇಲೆ ಪರಿಣಾಮ: ಮತದಾನದ ದೃಶ್ಯಗಳ ಬೇಡಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

Latest

ಮತದಾರರ ಗೌಪ್ಯತೆ & ಭದ್ರತೆ ಮೇಲೆ ಪರಿಣಾಮ: ಮತದಾನದ ದೃಶ್ಯಗಳ ಬೇಡಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ

Public TV
Last updated: June 21, 2025 4:41 pm
Public TV
Share
2 Min Read
ELECTION COMMISSION OF INDIA
SHARE

– ಚುನಾವಣೆಯ ಫೋಟೊ, ವೀಡಿಯೋಗಳನ್ನ 45 ದಿನಗಳಲ್ಲಿ ನಾಶಪಡಿಸಲಾಗುತ್ತೆ ಎಂದಿದ್ದ ರಾಹುಲ್‌ ಗಾಂಧಿ

ನವದೆಹಲಿ: ಮತಗಟ್ಟೆಗಳ ದೃಶ್ಯಾವಳಿಗಳನ್ನು 45 ದಿನಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಬೇಕೆಂಬ ಬೇಡಿಕೆಗೆ ಚುನಾವಣಾ ಆಯೋಗ (Poll Body) ಮೂಲಗಳು ಪ್ರತಿಕ್ರಿಯಿಸಿವೆ. ಮೇಲ್ನೋಟಕ್ಕೆ ಅದು ಸಮಂಜಸವೆಂದು ತೋರುತ್ತದೆಯಾದರೂ, ಮತದಾರರ ಗೌಪ್ಯತೆ ಮತ್ತು ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಸ್ಪಷ್ಟಪಡಿಸಿವೆ.

ಮಹಾರಾಷ್ಟ್ರದ ಚುನಾವಣೆ ಸಂದರ್ಭದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್‌ ರೀತಿಯಲ್ಲೇ ಬಿಹಾರ ಚುನಾವಣೆಯಲ್ಲೂ ಆಗಲಿದೆ. ಬಿಜೆಪಿ ತಾನು ಸೋಲುವ ಎಲ್ಲಾ ಕಡೆಯೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಳ್ಳುತ್ತದೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಿಸಿದ್ದರು. 45 ದಿನಗಳಲ್ಲಿ ಮತದಾನದ ವೀಡಿಯೋಗಳನ್ನು ಅಳಿಸುವ ನಿಯಮವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ ಸಿಎಂ ನಿತೀಶ್‌ ಕುಮಾರ್‌ ಮಹತ್ವದ ಘೋಷಣೆ – ಮಾಸಿಕ ಪಿಂಚಣಿ 1,100 ರೂ.ಗೆ ಹೆಚ್ಚಳ

Rahul Gandhi 4

‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಉತ್ತರಗಳನ್ನು ನೀಡುವ ಜವಾಬ್ದಾರಿಯುತ ಸಂಸ್ಥೆಯು ಸಾಕ್ಷ್ಯಗಳನ್ನು ಅಳಿಸುತ್ತಿದೆ ಎಂದು ಆರೋಪಿಸಿದ್ದರು.

ಸಿಸಿಟಿವಿ ದೃಶ್ಯಾವಳಿ? ಕಾನೂನನ್ನು ಬದಲಾಯಿಸುವ ಮೂಲಕ ಅದನ್ನು ಮರೆಮಾಡಲಾಗಿದೆ. ಚುನಾವಣೆಯ ಫೋಟೋ-ವಿಡಿಯೋ? 1 ವರ್ಷದಲ್ಲಿ ಅಲ್ಲ, ನಾವು ಅದನ್ನು 45 ದಿನಗಳಲ್ಲಿ ನಾಶಪಡಿಸುತ್ತೇವೆ. ಉತ್ತರಗಳು ಬೇಕಾದವರು ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದಾರೆ. ಇದು ಮ್ಯಾಚ್‌ ಫಿಕ್ಸಿಂಗ್‌ ಎಂಬುದು ಎಂಬುದು ಸ್ಪಷ್ಟವಾಗಿದೆ. ನಿಗದಿತ ಚುನಾವಣೆಯು ಪ್ರಜಾಪ್ರಭುತ್ವಕ್ಕೆ ವಿಷವಾಗಿದೆ ಎಂದು ರಾಹುಲ್‌ ಗಾಂಧಿ ಬರೆದುಕೊಂಡಿದ್ದರು. ಇದನ್ನೂ ಓದಿ: ಸಂಘರ್ಷ ತಾಂಡವ ಆಡ್ತಿರೋ ಜಗತ್ತಲ್ಲಿ ಯೋಗ ಶಾಂತಿ ತರಬಹುದು: ಮೋದಿ

ಯಾವುದೇ ಗುಂಪು ಅಥವಾ ವ್ಯಕ್ತಿಯಿಂದ ಮತದಾರರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ದೃಶ್ಯಾವಳಿಗಳನ್ನು ಹಂಚಿಕೊಳ್ಳುವುದರಿಂದ, ಮತ ಚಲಾಯಿಸಿದ ಮತದಾರರು ಮತ್ತು ಮತ ಚಲಾಯಿಸದವರು ಇಬ್ಬರೂ ಸಾಮಾಜಿಕ ವಿರೋಧಿ ಅಂಶಗಳಿಂದ ಒತ್ತಡ, ತಾರತಮ್ಯ ಮತ್ತು ಬೆದರಿಕೆಗೆ ಗುರಿಯಾಗುತ್ತಾರೆ. ಉದಾಹರಣೆಗೆ, ಒಂದು ನಿರ್ದಿಷ್ಟ ರಾಜಕೀಯ ಪಕ್ಷವು ನಿರ್ದಿಷ್ಟ ಮತಗಟ್ಟೆಯಲ್ಲಿ ಕಡಿಮೆ ಸಂಖ್ಯೆಯ ಮತಗಳನ್ನು ಪಡೆದರೆ, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಯಾವ ಮತದಾರರು ಮತ ಚಲಾಯಿಸಿದ್ದಾರೆ ಮತ್ತು ಯಾವ ಮತದಾರರು ಮತ ಚಲಾಯಿಸಿಲ್ಲ ಎಂಬುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ . ನಂತರ ಮತದಾರರಿಗೆ ಕಿರುಕುಳ ಮತ್ತು ಬೆದರಿಕೆ ಒಡ್ಡಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

TAGGED:Poll BodyRahul GandhiVoting Footageಚುನಾವಣಾ ಆಯೋಗರಾಹುಲ್ ಗಾಂಧಿ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories
Zee Short Film Contest
ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಜೀ ಕಿರುಚಿತ್ರ ಸ್ಪರ್ಧೆ
Cinema Latest Top Stories
Krishna Vamshi serial
ಕೃಷ್ಣವಂಶಿ: ನಾಚಿಕೆ ಕೃಷ್ಣನ ಜೊತೆ ವಂಶಿ ಡೇಟ್ ಫಿಕ್ಸ್
Cinema Latest Sandalwood Top Stories
Whispers of the River
ವಿಸ್ಪರ್ಸ್ ಆಫ್ ದಿ ರಿವರ್: ಸ್ಯಾಂಡಲ್‌ವುಡ್‌ನಲ್ಲೊಂದು ವಿಭಿನ್ನ ಪ್ರಯತ್ನ
Cinema Latest Sandalwood Top Stories

You Might Also Like

Air Ambulance Crash
Latest

ಜಾರ್ಖಂಡ್‌ನಲ್ಲಿ ಏರ್ ಅಂಬುಲೆನ್ಸ್ ಪತನ – ವಿಮಾನದಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ, ಹವಾಮಾನ ರೇಡಾರ್ ಪರಿಶೀಲನೆ

Public TV
By Public TV
11 minutes ago
Turkish Air Force
Latest

Video Viral | ಅಮೆರಿಕ ನಿರ್ಮಿತ ಎಫ್‌-16 ಯುದ್ಧ ವಿಮಾನ ಪತನ – ಪೈಲಟ್‌ ಸಾವು

Public TV
By Public TV
43 minutes ago
Vishwakarma Mahasamsthana Mutt 2
Bengaluru City

ವಿಶ್ವಕರ್ಮ ಮಹಾಸಂಸ್ಥಾನ ಮಠದಲ್ಲಿ ಸನ್ಯಾಸ ದೀಕ್ಷೆ, ಶಿಷ್ಯ ಸ್ವೀಕಾರ ಸಮಾರಂಭ

Public TV
By Public TV
1 hour ago
Ramanagar Robbery
Districts

ಮನೆ ಬೀಗ ಮುರಿದು ಅರ್ಧ ಕೆ.ಜಿ ಚಿನ್ನ ದರೋಡೆ – ಖದೀಮರು ಎಸ್ಕೇಪ್

Public TV
By Public TV
2 hours ago
Madikeri Accident 2
Crime

ಮಡಿಕೇರಿ | 20 ಅಡಿ ಆಳದ ಗದ್ದೆಗೆ ಉರುಳಿದ ಕಾರು; ತಾಯಿ – ಮಗ ಸೇಫ್‌

Public TV
By Public TV
2 hours ago
Assam Gang Rape
Crime

ಗೆಳೆಯನ ಮುಂದೆಯೇ 28 ರ ಮಹಿಳೆ ಮೇಲೆ 7 ಕಾಮುಕರಿಂದ ಗ್ಯಾಂಗ್‌ ರೇಪ್‌ – 10 ಸಾವಿರ ಕಸಿದು ಎಸ್ಕೇಪ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?