Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನನ್ನ ಖಾತೆ ಬದಲಾವಣೆ ಮಾಡಿ ಅಂತ ಮುಖ್ಯಮಂತ್ರಿಗಳ ಬಳಿ ಕೇಳಿಲ್ಲ: ಪರಮೇಶ್ವರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನನ್ನ ಖಾತೆ ಬದಲಾವಣೆ ಮಾಡಿ ಅಂತ ಮುಖ್ಯಮಂತ್ರಿಗಳ ಬಳಿ ಕೇಳಿಲ್ಲ: ಪರಮೇಶ್ವರ್

Bengaluru City

ನನ್ನ ಖಾತೆ ಬದಲಾವಣೆ ಮಾಡಿ ಅಂತ ಮುಖ್ಯಮಂತ್ರಿಗಳ ಬಳಿ ಕೇಳಿಲ್ಲ: ಪರಮೇಶ್ವರ್

Public TV
Last updated: June 9, 2025 11:46 am
Public TV
Share
2 Min Read
G Parameshwar
SHARE

ಬೆಂಗಳೂರು: ನಾನು ಗೃಹ ಇಲಾಖೆ (Home Department) ಖಾತೆ ಬದಲಾವಣೆ ಮಾಡಿ ಎಂದು ಸಿಎಂ ಬಳಿ ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಸುಳ್ಳು ಸುದ್ದಿ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾರು ನಿಮಗೆ ಹೇಳಿದ್ರು ಹೇಳಿ. ನಿಮ್ಮ ಮೂಲ ಹೇಳಿ. ತಿಮ್ಮೇಗೌಡನೂ ಹೇಳೋದೆ ಬೊಮ್ಮೇಗೌಡನೂ ಹೇಳೋದೆ. ಯಾರು ಹೇಳಿದ್ರು ನಿಮಗೆ? ನಿಮಗೆ ಮಾಹಿತಿ ಬಂದರೆ ನನ್ನ ಬಳಿಯೇ ಕೇಳಬಹುದಿತ್ತು. ಮಾಧ್ಯಮಗಳಲ್ಲಿ ಹಾಕಿ ನಮ್ಮ ಕೊಲೆ ಮಾಡೋ ಬದಲು ನನ್ನನ್ನೇ ನೇರವಾಗಿ ಕೇಳಬಹುದಿತ್ತು ಅಲ್ಲವಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಆರೋಪ – ಓಯೋ ರೂಮಿನಲ್ಲಿ ಪ್ರಿಯತಮೆ ಹತ್ಯೆಗೈದ ಟೆಕ್ಕಿ

ಮಾಧ್ಯಮಗಳ ಬಳಿ ನಾನು 30 ವರ್ಷಗಳಿಂದ ಸಂಯಮದಿಂದ ನಡೆದುಕೊಂಡಿದ್ದೇನೆ. ಒಬ್ಬರ ವ್ಯಕ್ತಿತ್ವವನ್ನು ಕೊಲೆ ಮಾಡೋದು ನಿಮಗೆ ಸರಿ ಅನ್ನಿಸಲ್ಲ, ಶೋಭೆ ತರೋದಿಲ್ಲ. ನನ್ನ ಹೆಂಡತಿ ಬಳಿಯೇ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ. ನೀವು ಆಪ್ತರು ಹತ್ರ ಹೇಳಿದ್ರು ಖಾತೆ ಬದಲಾವಣೆ ಮಾಡಿ ಅಂತ ಸಿಎಂಗೆ ಕೇಳಿದ್ರು, ಸಿಎಂ ಆಗಲ್ಲ ಅಂದರು ಅದೆಲ್ಲ ಸುಳ್ಳು. ಇದೆಲ್ಲ ಯಾರು ನಿಮಗೆ ಹೇಳಿದ್ದು? ಮಾಧ್ಯಮಗಳಲ್ಲಿ ವಿಷಯ ಹಾಕಿ ಅದ್ವಾನ ಮಾಡಿದ ಮೇಲೆ ಈಗ ಯಾಕೆ ಸ್ಪಷ್ಟನೆ ಕೇಳುತ್ತೀರಿ ಎಂದು ಗರಂ ಆದರು. ಇದನ್ನೂ ಓದಿ: ಕಾಲ್ತುಳಿತಕ್ಕೆ ಮನೋಜ್ ಬಲಿ – ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೊನೆಯುಸಿರು

ನಿಮ್ಮನ್ನ ಕೈ ಮುಗಿದು ಕೇಳಿಕೊಳ್ತೀನಿ, ಹೀಗೆ ಮಾಡಬೇಡಿ. ಜನ ನಮ್ಮನ್ನು ಫಾಲೋ ಮಾಡೋರು, ಮತದಾರರು ಇದ್ದಾರೆ. ಜನ ಏನು ಅಂದುಕೊಳ್ಳುತ್ತಾರೆ. ಮುಂದೆಯಾದರೂ ನನ್ನನ್ನು ಕೇಳಿ. ನಾನು ಯಾವತ್ತೂ ಸಿಎಂ ಅವರಿಗೆ ಇಂತಹ ಖಾತೆ ಬೇಕು ಅಂತ ಕೇಳಿಲ್ಲ. ಬೆಂಗಳೂರಿನಲ್ಲಿ ಘಟನೆ ಆಗಿದೆ, ಅದು ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂತಹ ಘಟನೆ ಆಗಬಾರದು. ನಾವು ನೋವು ತಿನ್ನುತ್ತಿದ್ದೇವೆ. ಈ ಸಮಯದಲ್ಲಿ ಖಾತೆ ಬದಲಾವಣೆ ಆಗಲಿ ಅಂತ ಕೇಳಿದ್ದೆ ಅನ್ನೋದು ಸರಿಯಲ್ಲ. ಇದು ಸವಾಲು, ಇದನ್ನ ಎದುರಿಸಬೇಕು. ಖಾತೆ ಬದಲಾವಣೆ ಕೇಳಿದ್ದೀನಿ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಇದು ಸುಳ್ಳು ಎಂದರು. ಇದನ್ನೂ ಓದಿ: ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

TAGGED:bengalurucongressG Parameshwarhome departmentಕಾಂಗ್ರೆಸ್ಗೃಹ ಇಲಾಖೆಜಿ.ಪರಮೇಶ್ವರ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

Chandru Lamani
Bengaluru City

ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

Public TV
By Public TV
10 seconds ago
Iqbal Hussain
Districts

ಸಚಿವರ ಬದಲಾವಣೆಗಾಗಿ ಹೈಕಮಾಂಡ್‌ಗೆ ಪತ್ರ ಬರೆದಿರೋದು ನಿಜ: ಇಕ್ಬಾಲ್ ಹುಸೇನ್

Public TV
By Public TV
17 minutes ago
Margaret Alva
Bengaluru City

ಶಿಸ್ತು, ಜವಾಬ್ದಾರಿ ಇರಬೇಕು – ಅರೆ ಬೆತ್ತಲೆ ಪ್ರತಿಭಟನೆಯನ್ನು ಖಂಡಿಸಿದ ಕೈ ನಾಯಕಿ ಮಾರ್ಗರೇಟ್‌ ಆಳ್ವ

Public TV
By Public TV
17 minutes ago
Shoaib Jamai
Cricket

ಮುಸ್ಲಿಂ ಆಟಗಾರರಿಲ್ಲದ್ದಕ್ಕೆ ಟೀಂ ಇಂಡಿಯಾ ಸೋತಿದೆ – ಧರ್ಮದ ಲೇಪನ ಹಚ್ಚಿದ ಓವೈಸಿ ಪಕ್ಷದ ನಾಯಕ

Public TV
By Public TV
27 minutes ago
kea
Bengaluru City

ಎಂ.ಫಾರ್ಮಾ ಅಂತಿಮ ಸುತ್ತಿನ ಸೀಟು ಹಂಚಿಕೆ: ಕೆಇಎ

Public TV
By Public TV
40 minutes ago
31 Karnataka Congress MLAs Write To High Command Demanding Cabinet Expansion Letter Goes Viral
Bengaluru City

ಕುರ್ಚಿ ಕದನದ ಮಧ್ಯೆ ಹೊಸಬರಿಗೆ ಮಂತ್ರಿ ಸ್ಥಾನಕ್ಕೆ ಬೇಡಿಕೆ – ಪತ್ರ ಬರೆದ 31 ಶಾಸಕರು ಯಾರು?

Public TV
By Public TV
54 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?