Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

Bengaluru City

ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

Public TV
Last updated: June 8, 2025 7:41 am
Public TV
Share
2 Min Read
Chinnaswamy Stamped Compensation For Injured
SHARE

– ನಮಗೂ ಪರಿಹಾರ ನೀಡಿ ಎಂದು ಮನವಿ

ಬೆಂಗಳೂರು: ಆರ್‌ಸಿಬಿ (RCB) ಸಂಭ್ರಮಾಚರಣೆಯಲ್ಲಿನ ಭೀಕರ ಕಾಲ್ತುಳಿತ (Chinnaswamy Stampede) ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಸೇರಿ ಒಟ್ಟು 40 ಲಕ್ಷ ಪರಿಹಾರ ಘೋಷಿಸಲಾಗಿದೆ. ಆದರೆ ಗಂಭೀರ ಗಾಯಗೊಂಡವರಿಗೆ ಯಾವುದೇ ಪರಿಹಾರ (Compensation) ಘೋಷಣೆ ಮಾಡಿಲ್ಲ. ಇದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದೆ.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಿಗಷ್ಟೇ ಪರಿಹಾರ ಘೋಷಣೆ ಮಾಡಿರುವ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಗಾಯಗೊಂಡವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಅಂದ್ರು, ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು. ಡಿಸ್ಚಾರ್ಜ್ ಆದ್ರೂ ಕನಿಷ್ಟ ಮೂರು ತಿಂಗಳು ಚಿಕಿತ್ಸೆ ಪಡೀಬೇಕು. ಜೊತೆಗೆ ಏನೂ ಕೆಲಸ ಮಾಡಲಾರದ ಪರಿಸ್ಥಿತಿ ಇದೆ. ನಮಗೂ ಪರಿಹಾರ ನೀಡಿ ಎಂದು ಗಾಯಾಳುಗಳು ಮನವಿ ಮಾಡುತ್ತಿದ್ದಾರೆ.

stampede in bengaluru rcb fans

ಇನ್ನು ಗಾಯಾಳುಗಳ ಪರಿಸ್ಥಿತಿ ಕೇಳೋರಿಲ್ಲ. ಬರೀ ಘಟನೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ಮುಂದಿನ ಪರಿಸ್ಥಿತಿ ಬಗ್ಗೆ ನೆನೆಸಿಕೊಂಡರೆ ಆತಂಕವಾಗುತ್ತದೆ. ಕೇವಲ ಸರ್ಕಾರ ಸತ್ತವರಿಗಷ್ಟೇ ಪರಿಹಾರದ ಹಣ ಘೋಷಣೆ ಮಾಡಿದ್ದಾರೆ. ನಮ್ಮ ಜೀವಕ್ಕೆ ಬೆಲೆ ಇಲ್ವಾ? ಕೇವಲ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದರೆ, ನಂತರದ ಚಿಕಿತ್ಸೆಗಳಿಗೆ ತುಂಬಾ ಕಷ್ಟ ಆಗುತ್ತದೆ. ದಯಮಾಡಿ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್‌ಸಿಎನವರು ನಮಗೂ ಸಹ ಪರಿಹಾರ ಕೊಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಮೂರು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರೆ. ಆದರೆ ನಾವು ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದೆವು. ಆದ್ರೆ ಮೂರು ತಿಂಗಳು ಕೆಲಸ ಇಲ್ಲದೆ ಜೀವನ ಸಾಗಿಸೋದು ತುಂಬಾ ಕಷ್ಟ. ಮೆಡಿಸಿನ್‌ಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಆಗುತ್ತೆ ಎಂದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೋವಿನ ಮಾತನ್ನು ಆಡಿದ್ದಾರೆ.‌

ಇನ್ನು ಕ್ಯಾಮೆರಾ ಮುಂದೆ ಮಾತನಾಡಿದ್ರೆ ನಮ್ಮ ಜೀವನ ಎಲ್ಲಿ ಹಾಳಾಗುತ್ತೆ, ಸಂಬಂಧಿಕರು ಏನು ತಿಳಿದುಕೊಳ್ಳುತ್ತಾರೆ, ನಮಗೆ ಮುಂದೆ ಕೆಲಸ ಸಿಗುತ್ತಾ? ನಮ್ಮನ್ನ ಯಾರು ಮದುವೆ ಆಗ್ತಾರೆ? ಹೀಗೆ ನಾನಾ ಪ್ರಶ್ನೆಗಳು ಗಾಯಾಳುಗಳನ್ನ ಕಾಡುತ್ತಿದೆ. ಹೀಗಾಗಿ ಕ್ಯಾಮೆರಾ ಮುಂದೆ ಮಾತನಾಡಲು ಗಾಯಾಳುಗಳು ಹಾಗೂ ಅವರ ಕುಟುಂಬದವರು ಹಿಂದೇಟು ಹಾಕುತ್ತಿದ್ದಾರೆ.

TAGGED:bengaluruChinnaswamy Stampedecompensationrcbಆರ್‍ಸಿಬಿಚಿನ್ನಸ್ವಾಮಿ ಕಾಲ್ತುಳಿತಪರಿಹಾರಬೆಂಗಳೂರು
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

congress mlas surjewala
Bengaluru City

ಸುರ್ಜೇವಾಲಾ ವಾರ್ನಿಂಗ್‌ಗೂ ಡೋಂಟ್‌ಕೇರ್ – ಕಾಂಗ್ರೆಸ್ ಶಾಸಕರ ಫಾರಿನ್ ಟೂರ್ ಫಿಕ್ಸ್

Public TV
By Public TV
1 hour ago
DK Shivakumar and siddaramaiah 2
Bengaluru City

ಕುರ್ಚಿ ಕದನ | ಹೈಕಮಾಂಡ್‌ ಹೇಳಿದ್ರೆ ನಾನೂ ಕೇಳ್ಬೇಕು, ಡಿಕೆಶಿನೂ ಕೇಳ್ಬೇಕು: ಸಿದ್ದರಾಮಯ್ಯ

Public TV
By Public TV
2 hours ago
male madappa devotees
Latest

ಮಾದಪ್ಪನ ದರ್ಶನಕ್ಕೆ 2ನೇ ದಿನವೂ ಸಾವಿರಾರು ಭಕ್ತರ ಪಾದಯಾತ್ರೆ – ಹಗ್ಗಕಟ್ಟಿ ನದಿ ದಾಟಿಸಿದ SDRF ತಂಡ

Public TV
By Public TV
2 hours ago
RCB 3
Cricket

RCB ಗೆ ಬಿಗ್‌ ಶಾಕ್‌ – ಎನ್‌ಒಸಿ ನಿರಾಕರಿಸಿದ ಎಂಸಿಎ; ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ ಫಿಕ್ಸಾ?

Public TV
By Public TV
2 hours ago
manhole delhi
Latest

ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದು ಕಾರ್ಮಿಕ ಸಾವು

Public TV
By Public TV
2 hours ago
G Parameshwar
Bengaluru City

ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್‌ ನಾಪತ್ತೆ ಕೇಸ್‌ – ತನಿಖೆಗೆ ಪರಂ ಆದೇಶ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?