ಕನ್ನಡದ ಕಿಸ್ ನಟಿ ಶ್ರೀಲೀಲಾ (Sreeleela) ತೆಲುಗು ಹಾಗೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ ಕಿಸ್ಸಿಸ್ ಹಾಡಿನ ಸಕ್ಸಸ್ ಹಾಗೂ ‘ರಾಬಿನ್‌ಹುಡ್’ ಚಿತ್ರದ ಬಳಿಕ ಮತ್ತೊಂದು ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಗಡ್ ಅವತಾರ ತಾಳಿರೋ ಅಖಿಲ್ (Akhil Akkineni) ಜೊತೆ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಟೈಟಲ್ ಸಮೇತ ಫಸ್ಟ್ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಏ.16ರಿಂದ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭ- ಅಪ್‌ಡೇಟ್ ಕೊಟ್ರು ಕಿಚ್ಚ
ಹೆಚ್ಚು ಗ್ಲ್ಯಾಮರಸ್ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಶ್ರೀಲೀಲಾ ‘ಭಗವಂತ ಕೇಸರಿ’ ಚಿತ್ರದ ಬಳಿಕ ಮತ್ತೊಮ್ಮೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಸಿನಿಮಾದಲ್ಲಿ ಖಡಕ್ ಆಗಿ ಡೈಲಾಗ್ ಹೊಡೆದು ರಗಡ್ ಅವತಾರ ತಾಳಿರೋ ಅಖಿಲ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಸಿನಿಮಾಗೆ ‘ಲೆನಿನ್’ (Lenin) ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಮೊದಲ ಝಲಕ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಹಿನ್ನೆಲೆ ಪ್ರಭಾಸ್ ಚಿತ್ರದಿಂದ ರಶ್ಮಿಕಾ ಮಂದಣ್ಣ ಔಟ್?
View this post on Instagram
ಈ ಸಿನಿಮಾವನ್ನು ಮುರುಳಿ ಕಿಶೋರ್ ಅಬ್ಬರು ನಿರ್ದೇಶನ ಮಾಡುತ್ತಿದ್ದಾರೆ. ಸಿತಾರಾ ಸಂಸ್ಥೆ ಜೊತೆ ಅನ್ನಪೂರ್ಣ ಸ್ಟುಡಿಯೋ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಅಂದಹಾಗೆ, ಉಸ್ತಾದ್ ಭಗತ್ ಸಿಂಗ್, ಆಶಿಕಿ 3, ಮಾಸ್ ಜಾತ್ರಾ, ಜ್ಯೂನಿಯರ್ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.