Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಧಿಪತ್ರದ ವಿಲಕ್ಷಣ ಪಾತ್ರಧಾರಿ ಎಂ.ಕೆ ಮಠ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಅಧಿಪತ್ರದ ವಿಲಕ್ಷಣ ಪಾತ್ರಧಾರಿ ಎಂ.ಕೆ ಮಠ!

Cinema

ಅಧಿಪತ್ರದ ವಿಲಕ್ಷಣ ಪಾತ್ರಧಾರಿ ಎಂ.ಕೆ ಮಠ!

Public TV
Last updated: February 6, 2025 1:45 pm
Public TV
Share
2 Min Read
m k mata
SHARE

ಚಯನ್ ಶೆಟ್ಟಿ ನಿರ್ದೇಶನದ ‘ಅಧಿಪತ್ರ’ ಚಿತ್ರ ಫೆ. 7ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ 9ರ ವಿನ್ನರ್ ಆದ ಬಳಿಕ ನಾಯಕನಾಗಿ ನಟಿಸಿರುವ ಮೊದಲ ಕನ್ನಡ ಚಿತ್ರವಾಗಿಯೂ ‘ಅಧಿಪತ್ರ’ ಗಮನ ಸೆಳೆದುಕೊಂಡಿದೆ. ಈವರೆಗೂ ಟೈಟಲ್‌ನಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡು ಗೆದ್ದು ಬೀಗಿದ ಸಿನಿಮಾಗಳ ಸಂಖ್ಯೆ ಸಾಕಷ್ಟಿದೆ. ‘ಅಧಿಪತ್ರ’ (Adhipatra) ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಯಾಕೆಂದರೆ, ಈ ಸಿನಿಮಾ ಆರಂಭದ ಹಂತದಲ್ಲಿ ಸದ್ದು ಮಾಡಿದ್ದದ್ದು ಟೈಟಲ್‌ನ ಕಾರಣದಿಂದಲೇ. ಆಂಗ್ಲ ಭಾಷೆಯ ಟೈಟಲ್ ಇಡುವ ಟ್ರೆಂಡು ಚಾಲ್ತಿಯಲ್ಲಿರುವಾಗಲೇ, ಅರ್ಥವತ್ತಾದ, ಇಡೀ ಕಥೆಯ ಸಾರ ಬಚ್ಚಿಟ್ಟುಕೊಂಡಿರುವ ಟೈಟಲ್ ಅನ್ನು ನಿರ್ದೇಶಕರು ಅನ್ವೇಷಿಸಿದ್ದಾರೆ. ಈ ಚಿತ್ರದಲ್ಲಿ ಅನುಭವಿ ನಟರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ, ಥರ ಥರದ ಪಾತ್ರಗಳನ್ನು ನಿರ್ವಹಿಸಿರುವ ಎಂ.ಕೆ ಮಠ ಕೂಡ ಇಲ್ಲಿ ವಿಶೇಷ, ವಿಲಕ್ಷಣ ಚಹರೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

Adhipatra Trailer released Roopesh Shetty Jhanvi Kannnada Cinema 3

ನಿರ್ದೇಶಕ ಚಯನ್ ಶೆಟ್ಟಿ ಕಥೆ ಸೃಷ್ಟಿಸುವ ಹಂತದಲ್ಲಿಯೇ ಈ ಪಾತ್ರಕ್ಕೆ ಎಂ.ಕೆ ಮಠ (M. K Mata) ಸೂಕ್ತ ಎಂಬಂಥಾ ನಿರ್ಧಾರಕ್ಕೆ ಬಂದಿದ್ದರು. ಕಥೆಯೆಲ್ಲ ಸಿದ್ಧವಾದ ನಂತರ ಎಂ.ಕೆ ಮಠ ಅವರನ್ನು ಸಂಪರ್ಕಿಸಿದ್ದ ಚಯನ್ ಶೆಟ್ಟಿ ಎಲ್ಲವನ್ನೂ ವಿವರಿಸಿದ್ದರು. ಸದಾ ಹೊಸತನದ ಪಾತ್ರಗಳಿಗಷ್ಟೇ ತುಡಿಯುವ ಮನಃಸ್ಥಿತಿ ಹೊಂದಿರುವವರು ಮಠ. ಇಂಥಾದ್ದೇ ಪಾತ್ರವಿರಬೇಕು, ಅದಕ್ಕೆ ಪ್ರಾಧಾನ್ಯತೆ ಇರಲೇಬೇಕು ಎಂಬಂಥಾ ಯಾವ ಬೇಡಿಕೆಗಳೂ ಇಲ್ಲದೇ, ಪಾತ್ರ ಯಾವುದಿದ್ದರೂ ಪ್ರೇಕ್ಷಕರ ಮನಸಲ್ಲುಳಿಯುವಂತಿರಬೇಕು ಎಂಬುದು ಎಂ.ಕೆ ಮಠರ ಮೊದಲ ಆದ್ಯತೆ. ಅವರ ಪಾಲಿಗೆ ಚಯನ್ ವಿವರಿಸಿದ್ದ ಆ ಪಾತ್ರ ಒಂದೇ ಸಲಕ್ಕೆ ಇಷ್ಟವಾಗಿ ಹೋಗಿತ್ತು. ಈ ಕಾರಣದಿಂದಲೇ ಮರು ಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರು. ಇದನ್ನೂ ಓದಿ:ಅಧಿಪತ್ರಕ್ಕಾಗಿ ಟಿಪಿಕಲ್ ಪತ್ರಕರ್ತರಾದ್ರು ಪ್ರಶಾಂತ್ ನಟನಾ!

Adhipatra Trailer released Roopesh Shetty Jhanvi Kannnada Cinema 2

ಆ ನಂತರದಲ್ಲಿ ಕಡಲ ತಡಿಯಲ್ಲಿ ನಡೆದ ಚಿತ್ರೀಕರಣದ ಅಷ್ಟೂ ಅನುಭವ ಮಠ ಅವರ ಪಾಲಿಗೆ ಹೊಸಾ ಜಗತ್ತನ್ನೇ ತರೆದಿಟ್ಟಿತ್ತು. ಇಲ್ಲಿ ಕಡಲ ಕಿನಾರೆಯ ಕಥನವಿದೆ. ಈವರೆಗೂ ಕಡಲೂರಿನಿಂದ ಕದಲಿಕೊಳ್ಳುವ ಒಂದಷ್ಟು ಸಿನಿಮಾಗಳು ಬಂದಿವೆ. ಸ್ವತಃ ಎಂ.ಕೆ ಮಠ ಅಂಥಾ ಸಿನಿಮಾಗಳಲ್ಲಿ ಪಾತ್ರವಾಗಿದ್ದಾರೆ. ಆದರೆ, ನವ ನಿರ್ದೇಶಕ ಚಯನ್ ಶೆಟ್ಟಿ ಈ ಕಥೆಯನ್ನು ರೂಪಿಸಿರುವ ರೀತಿ, ಸೃಷ್ಟಿಸಿರುವ ಪಾತ್ರಗಳು, ಕಲಾವಿದರಿಂದ ಕೆಲಸ ತೆಗೆಸಿಕೊಳ್ಳುವ ಬಗೆ, ಹೊಸಬರೆಂಬುದನ್ನೇ ಮರೆಸುವಂಥಾ ಕಸುಬುದಾರಿಕೆಯೆಲ್ಲ ಮಠ ಅವರ ಮನಸೆಳೆದಿದೆ. ಜೊತೆಗೆ ಈ ಸಿನಿಮಾದ ನಾಯಕ ರೂಪೇಶ್ ಶೆಟ್ಟಿಯವರ ಸ್ನೇಹಶೀಲ ಗುಣವೂ ಎಂ.ಕೆ ಮಠರನ್ನು ಮತ್ತೆ ತಾಕಿದೆ. ಈ ಚಿತ್ರದಲ್ಲಿ ವಿಲಕ್ಷಣ ಛಾಯೆಯಿರುವ ಪಾತ್ರ ಮಠರಿಗೆ ಸಿಕ್ಕಿದೆ. ಆ ಪಾತ್ರದ ಗುಣಲಕ್ಷಣಗಳೇನೆಂಬುದು ದಿನದೊಪ್ಪತ್ತಿನಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

Adhipatra Trailer released Roopesh Shetty Jhanvi Kannnada Cinema 1

ಹೀಗೆ ಸಿದ್ಧಗೊಂಡಿರುವ ಈ ಸಿನಿಮಾ ಒಂದು ಅಪರೂಪದ ಅನುಭೂತಿಯನ್ನು ಪ್ರೇಕ್ಷಕರಿಗೆಲ್ಲ ಕೊಡಮಾಡಲಿದೆ ಎಂಬ ತುಂಬು ನಂಬಿಕೆ ಎಂ.ಕೆ ಮಠ ಅವರಲ್ಲಿದೆ. ಹೀಗೆ ಪಾತ್ರವಾದ ಪ್ರತೀ ಕಲಾವಿದರೊಳಗೂ ಭಿನ್ನ ಅನುಭವ, ಗೆಲುವಿನ ಭರವಸೆ ತುಂಬಿರುವ ಈ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

TAGGED:Adhipatram k mataroopesh shettysandalwoodಅಧಿಪತ್ರಎಂ.ಕೆ ಮಠರೂಪೇಶ್ ಶೆಟ್ಟಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Yogesh Gowda Wife Mallamma
Dharwad

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Public TV
By Public TV
44 minutes ago
Rahul Gandhi 1
Latest

ನನಗೂ, ಮೋದಿಯವರಿಗೂ ʻಹೆಂಡ್ತಿʼ ಚಿಂತೆ ಇಲ್ಲ!, ಆದ್ರಿಂದ ನಮ್ಗೆ ಆ ಮಾಹಿತಿ ಸಿಗಲ್ಲ: ರಾಗಾ ಹಾಸ್ಯ

Public TV
By Public TV
45 minutes ago
DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
1 hour ago
DK Shivakumar 1 1
Latest

ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Public TV
By Public TV
1 hour ago
SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
2 hours ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?