Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್‌ ಆಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್‌ ಆಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ

Bengaluru City

ಕಾಂಗ್ರೆಸ್‌ ಆಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ

Public TV
Last updated: November 2, 2024 5:36 pm
Public TV
Share
3 Min Read
Tejasvi Surya 1
SHARE

– ಇಡೀ ಸಮಸ್ಯೆಯ ಮೂಲವೇ ಈ ವಕ್ಫ್ ಅದಾಲತ್
– ಮುಸ್ಲಿಂ ಮತ ಬ್ಯಾಂಕ್‌ಗೆ 1995, 2013 ರಲ್ಲಿ ವಕ್ಫ್‌ಬೋರ್ಡ್‌ಗೆ ಪರಮಾಧಿಕಾರ

ಬೆಂಗಳೂರು: ಕಾಂಗ್ರೆಸ್‌ (Congress) ಆಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ ದೇವಸ್ಥಾನ (Dharmasthala), ಶೃಂಗೇರಿ ಮಠಗಳೂ (Sringeri Mutt) ಉಳಿಯುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.

ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಿದ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಉಚಿತ ಬಸ್ಸು ಇದೆ ಎಂದು ಶೃಂಗೇರಿ, ಧರ್ಮಸ್ಥಳ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡುತ್ತಾರೆ ಎಂದು ಕಾಂಗ್ರೆಸ್‌ಗೆ ಮತ ಹಾಕಿದರೆ ಮುಂದಿನ ದಿನಗಳಲ್ಲಿ ಉಚಿತ  ಬಸ್ಸೂ ಇರುವುದಿಲ್ಲ. ನೋಡಲು ಧರ್ಮಸ್ಥಳ ಶೃಂಗೇರಿಯೂ ಇರುವುದಿಲ್ಲ. ಅದು ವಕ್ಫ್ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು.

ವಕ್ಫ್ ಸಭೆಯ ನಡಾವಳಿಯಲ್ಲಿ ಸಿಎಂ ಸೂಚನೆ ಎಂದೇ ಉಲ್ಲೇಖಿಸಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದ್ಯಾ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ (Siddaramaiah) ಸರ್ಕಾರದ ಸಂಶೋಧನೆ. ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಅದಕ್ಕೂ ಮುನ್ನ ಸಾವಿರಾರು ಎಕ್ರೆ ಜಾಗವನ್ನು ವಕ್ಫ್‌ಗೆ ಕೊಡಲು ಈ ಹುನ್ನಾರ ನಡೆದಿದೆ. ಇವರಿಗೆ ವಕ್ಫ್ ಅದಾಲತ್ ನಡೆಸಲು ಅಧಿಕಾರ ಇಲ್ಲ, ಕಾನೂನಿನಲ್ಲೂ ಅವಕಾಶ ಇಲ್ಲ. ಇಡೀ ಸಮಸ್ಯೆಯ ಮೂಲವೇ ಈ ವಕ್ಫ್ ಅದಾಲತ್ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

ನಮ್ಮ ಸರ್ಕಾರ ಅವಧಿಯಲ್ಲೂ ನೋಟಿಸ್‌ ಹೋಗಿದೆ. ಆದರೆ ಅದು ವಕ್ಫ್‌ ಬೋರ್ಡ್‌ನಿಂದ ಹೋಗಿದೆ.  ಆದರೆ ವಕ್ಫ್‌ ಅದಾಲತ್‌ ನಡೆಸಲು ನಮ್ಮ ಸರ್ಕಾರ ಸೂಚನೆ ನೀಡಿಲ್ಲ. ಹಿಂದೆ ಅಕ್ಬರ್‌, ಔರಾಂಗಜೇಬ್‌, ಟಿಪ್ಪು ಸುಲ್ತಾನ್‌ ಅವಧಿಯಲ್ಲಿ ದೇವಸ್ಥಾನ ಒಡೆಯಲು ಮತ್ತು ಮತಾಂತರ ಮಾಡಲು ಟಾರ್ಗೆಟ್‌ ನೀಡಲಾಗಿತ್ತು. ಇದು ನಾನು ಹೇಳುತ್ತಿಲ್ಲ. ಅಂದಿನ ಇತಿಹಾಸಕಾರರೇ ಪುಸ್ತಕಗಳಲ್ಲಿ ದಾಖಲೆ ನೀಡಿದ್ದಾರೆ. ಈಗ ಅದೇ ರೀತಿಯಾಗಿ ಹಿಂದೂಗಳ ಆಸ್ತಿ ಒಡೆಯಲು  ಸಿದ್ದರಾಮಯ್ಯ ಸರ್ಕಾರ ವಕ್ಫ್‌ ಅದಾಲತ್‌ ನಡೆಸಿ ಟಾರ್ಗೆಟ್‌ ನೀಡಿದೆ ಎಂದು ಆಕ್ರೋಶ ಹೊರಹಾಕಿದರು.

 

ವಕ್ಫ್ ವಿಚಾರದಲ್ಲಿ ಈಗ ಸಾಕಷ್ಟು ವಿಚಾರಗಳು ಹೊರಗೆ ಬರುತ್ತಿವೆ. ಈಗಾಗಲೇ ನಮ್ಮ ಪಕ್ಷದ ನಿಯೋಗ ವಿಜಯಪುರ ಭೇಟಿ ಮಾಡಿ ಪರಿಶೀಲಿಸಿದೆ. ಬೇರೆಲ್ಲ ಜಿಲ್ಲೆಗಳಿಗೂ ವಕ್ಫ್ ನೋಟಿಸ್, ಪಹಣಿ ದಾಖಲು ಹಬ್ಬಿದೆ. ರಾಜ್ಯದಲ್ಲಿ ನಮಗೆ ಸಿಕ್ಕ ಮಾಹಿತಿ ಪ್ರಕಾರ 50 ಸಾವಿರ ಎಕರೆ ಭೂಮಿಯನ್ನು ವಕ್ಫ್ ತನ್ನದು ಎಂದು ಹೇಳಿಕೊಂಡಿದೆ. ಯಾವ ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ, ಮ್ಯೂಟೇಷನ್, ಪಹಣಿಗಳನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಜಮೀನು ಪತ್ರಗಳನ್ನು ಆದಷ್ಟು ಬೇಗ ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಮನವಿ ಮಡಿದರು. ಇದನ್ನೂ ಓದಿ: Waqf Land Row | ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್ : ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ಮುಸ್ಲಿಂ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದ ವಕ್ಫ್‌ಬೋರ್ಡ್‌ಗೆ 1995 ಮತ್ತು 2013 ರಲ್ಲಿ ಕಾಂಗ್ರೆಸ್‌ ಪರಮಾಧಿಕಾರ ನೀಡಿತು. 1995 ರಲ್ಲೂ ವಕ್ಫ್ ಟ್ರಿಬ್ಯೂನಲ್‌ಗಳನ್ನು ಶುರು ಮಾಡಿದರು. ಅದಕ್ಕೂ ಮುನ್ನ ವಕ್ಫ್ ತಕರಾರು ಪ್ರಶ್ನಿಸಿ ಜನ ಸಿವಿಲ್ ಕೋರ್ಟಿಗೆ ಹೋಗಬಹುದಿತ್ತು. ಆದರೆ 1995 ರಲ್ಲಿ ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಗಿಫ್ಟ್ ಕೊಡಲು ವಕ್ಫ್ ಟ್ರಿಬ್ಯೂನಲ್ ರಚನೆಗೆ ಅವಕಾಶ ನೀಡಿತು. 2013 ರಲ್ಲಿ ವಕ್ಫ್ ಕಾಯ್ದೆಗೆ ಕಾಂಗ್ರೆಸ್ ಸೆಕ್ಷನ್40 ಸೇರಿಸಿತು. ಇದರ ಪ್ರಕಾರ ವಕ್ಫ್ ತೋರಿಸಿದ ಜಾಗಕ್ಕೆ ಗೆಜೆಟ್ ನೊಟಿಫಿಕೇಷನ್ ಹೊರಡಿಸುವ ಅಧಿಕಾರ ನೀಡಿತು. ಈಗ ಕಾಂಗ್ರೆಸ್ ನವರ ಆಮಿಷಕ್ಕೆ ಬಲಿಯಾದರೆ ನಮ್ಮ ಜಮೀನು, ಮಠ, ದೇವಸ್ಥಾನದ ಜಾಗಗಳನ್ನೆಲ್ಲ ಮುಸಲ್ಮಾನರಿಗೆ ಕೊಡುತ್ತಾರೆ ಎಂದು ಕಿಡಿಕಾರಿದರು.

ಜೆಪಿಸಿ ಅಧ್ಯಕ್ಷ ಜಗದಂಬಿಕ ಪಾಲ್ ಅವರು ರಾಜ್ಯಕ್ಕೆ ಬರಬೇಕೆಂದು ನಾನು ಮನವಿ ಮಾಡಿಕೊಂಡಿದ್ದೇನೆ. ಇದರ ಬಗ್ಗೆ ಪತ್ರವನ್ನೂ ಬರೆದಿದ್ದೇನೆ. ನವೆಂಬರ್ 6 ಅಥವಾ 7 ರಂದು ಅವರು ರಾಜ್ಯಕ್ಕೆ ಪ್ರವಾಸ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು.

 

TAGGED:bjpcongresskarnatakapoliticssiddaramaiahTejasvi SuryaWaqf Boardಕರ್ನಾಟಕಕಾಂಗ್ರೆಸ್ತೇಜಸ್ವಿ ಸೂರ್ಯಬಿಜೆಪಿವಕ್ಫ್ ಬೋರ್ಡ್ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

Accident 2 1
Bengaluru City

ಹೊಸಕೋಟೆ ಬಳಿ ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸ್ಥಳದಲ್ಲೇ ದುರ್ಮರಣ

Public TV
By Public TV
15 minutes ago
Wild elephant captured in Moleyur Range of Saraguru taluk
Districts

ಮೈಸೂರು | ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

Public TV
By Public TV
21 minutes ago
ICC Mens T20 World Cup ind vs Namibia Jasprit Bumrahs stunning catch Axar Patel shocked
Cricket

ಬುಮ್ರಾ ಸ್ಟನ್ನಿಂಗ್‌ ಕ್ಯಾಚ್‌ – ಅಕ್ಷರ್‌ ಪಟೇಲ್‌ ಶಾಕ್‌!

Public TV
By Public TV
8 hours ago
kids died accident
Districts

ಶಾಲಾ ಬಸ್ ಹರಿದು ಮಕ್ಕಳು ಸಾವು – ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

Public TV
By Public TV
9 hours ago
Ishan Kishan Hardik Pandya
Cricket

ಕಿಶನ್‌ ದಾಖಲೆಯ ಫಿಫ್ಟಿ, ಪಾಂಡ್ಯ ಆಲ್‌ರೌಂಡರ್‌ ಆಟ – ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ

Public TV
By Public TV
9 hours ago
DK Shivakumar Rahul Gandhi Sonia Gandhi 1 1
Bengaluru City

ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು – ಸೋನಿಯಾ, ರಾಹುಲ್‌ ಕೊಟ್ಟ ಅಭಯವೇನು?

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?