Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ

Latest

ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ

Public TV
Last updated: July 29, 2024 5:03 pm
Public TV
Share
2 Min Read
Rahul Gandhi
SHARE

– ಲೋಕಸಭೆಯಲ್ಲಿ ʻಕುರುಕ್ಷೇತ್ರʼ ನೆನಪಿಸಿದ ರಾಹುಲ್‌ ಗಾಂಧಿ

ನವದೆಹಲಿ: 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ (Chakravyuh) ರೂಪುಗೊಂಡಿದೆ. ಅದು ಕಮಲದ ರೂಪದಲ್ಲಿಯೇ ಇದೆ. ಅಂದು ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗುತ್ತಿದೆ. ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆತಂಕ ಹೊರಹಾಕಿದ್ದಾರೆ.

ಲೋಕಸಭೆಯಲ್ಲಿಂದು (Lok Sabha) 2024-25ನೇ ಸಾಲಿನ ಬಜೆಟ್‌ (Union Budget 2024-25) ಮೇಲಿನ ಚರ್ಚೆ ಮೇಲೆ ರಾಹುಲ್‌ ಗಾಂಧಿ ಮಾತನಾಡಿದರು. ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯವು ನಮ್ಮ ದೇಶದ ಪ್ರತಿಯೊಂದು ಅಂಶವನ್ನು ವ್ಯಾಪಿಸಿದೆ. ಅಗ್ನೀವೀರರಿಗೆ ಪಿಂಚಣಿಗಾಗಿ ಒಂದು ರೂಪಾಯಿ ಬಜೆಟ್‌ನಲ್ಲಿ ಇಟ್ಟಿಲ್ಲ. ರೈತರಿಗೆ ಬೆಂಬಲ ಬೆಲೆ ಖಾತ್ರಿಪಡಿಸಿಲ್ಲ ಎಂದು ಹೇಳಿದ್ದಾರೆ.

ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು (Abhimanyu) ಆರು ಜನ ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದಿದ್ದರು. ನಾನು ಈ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಚಕ್ರವ್ಯೂಹಕ್ಕೆ ʻಪದ್ಮವ್ಯೂಹʼ ಎಂಬ ಹೆಸರೂ ಇದೆ. ಪದ್ಮವ್ಯೂಹ ಅಂದರೆ ಕಮಲ ರಚನೆ ಎಂಬುದು ನನಗೆ ತಿಳಿಯಿತು. ಚಕ್ರವ್ಯೂಹ ಕಮಲದ ಆಕಾರದಲ್ಲಿದೆ. ಅಂದ್ರೆ 21ನೇ ಶತಮಾನದಲ್ಲಿ, ಹೊಸ ಚಕ್ರವ್ಯೂಹ ರೂಪುಗೊಂಡಿದೆ. ಈ ಹೊಸ ಚಕ್ರವ್ಯೂಹ ಸಹ ಕಮಲದ ರೂಪದಲ್ಲಿಯೇ ಇದೆ. ಪ್ರಧಾನ ಮಂತ್ರಿ ತಮ್ಮ ಎದೆಯ ಮೇಲೆ ಅದರ ಚಿಹ್ನೆಯನ್ನು ಸಹ ಧರಿಸುತ್ತಾರೆ. ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

RAHUL GANDHI NARENDRA MODI

ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದೂ ಸಹ ಚಕ್ರವ್ಯೂಹ ಇದೆ, ಕೇಂದ್ರದ ಚಕ್ರವ್ಯೂದಲ್ಲಿ ಆರು ಜನರಿದ್ದಾರೆ. ಇಂದಿಗೂ ಸಹ ಈ ಆರು ಜನರು ದೇಶವನ್ನ ನಿಯಂತ್ರಣ ಮಾಡ್ತಾ ಇದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ (Gautam Adani). ಈ 6 ಜನ ಇಂದಿನ ಚಕ್ರವ್ಯೂದಲ್ಲಿರುವವರು ಎಂದು ಲೇವಡಿ ಮಾಡಿದರು.

Rahul Gandhi 2

ಭಾರತವನ್ನು ವಶಪಡಿಸಿಕೊಂಡ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಏಕಸ್ವಾಮ್ಯ ಬಂಡವಾಳದ ಕಲ್ಪನೆ. ಅಂದ್ರೆ ದೇಶದಲ್ಲಿರುವ ಕೇವಲ ಇಬ್ಬರಿಗೆ ಮಾತ್ರ ಸಂಪೂರ್ಣ ಭಾರತೀಯ ಸಂಪತ್ತನ್ನು ಹೊಂದಲು ಅವಕಾಶ ನೀಡಬೇಕು. ಎರಡನೇ ಶಕ್ತಿ ಈ ರಾಷ್ಟ್ರದ ಸಂಸ್ಥೆಗಳಾಗಿರುವ ಸಿಬಿಐ, ಇಡಿ ಹಾಗೂ ಐಟಿ ತನಿಖಾ ಏಜೆನ್ಸಿಗಳು ಹಾಗೂ 3ನೇ ಶಕ್ತಿಯಾದ ರಾಜಕೀಯ ಕಾರ್ಯನಿರ್ವಾಹಕ ಸಾರಾಂಶ. ಈ ಅಂಶಗಳನ್ನು ಚಕ್ರವ್ಯೂಹ ಒಳಗೊಂಡಿದೆ. ಈ ಚಕ್ರವ್ಯೂಹವು ಕೆಲವರ ಹೃದಯಭಾಗದಲ್ಲಿದೆ. ಈ ವ್ಯೂಹದ ಮೂಲಕ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಆತಂಕ ಹೊರಹಾಕಿದರು. ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಮುಂದುವರಿದು ಮಾತನಾಡಿದ ರಾಗಾ, ಈ ಬಾರಿಯ ಬಜೆಟ್ ಚಕ್ರವ್ಯೂಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿದ್ದೆ. ಈ ದೇಶದ ರೈತರಿಗೆ ಸಹಾಯ ಮಾಡುತ್ತದೆ. ಈ ದೇಶದ ಯುವಕರಿಗೆ ಸಹಾಯ ಮಾಡುತ್ತದೆ, ಈ ದೇಶದ ಕಾರ್ಮಿಕರು, ಸಣ್ಣ ಉದ್ಯಮಗಳಿಗೆ ಸಹಾಯ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ಚಕ್ರವ್ಯೂಹದ ಚೌಕಟ್ಟನ್ನು ಬಲಪಡಿಸುವುದು ಈ ಬಜೆಟ್‌ನ ಏಕೈಕ ಗುರಿಯಾಗಿದೆ. ಪ್ರಜಾಪ್ರಭುತ್ವದ ರಚನೆ ಮತ್ತು ಕೆಲ ರಾಜ್ಯ ಹಾಗೂ ಏಜೆನ್ಸಿಗಳನ್ನು ನಾಶಪಡಿಸುವ ರಾಜಕೀಯ ದುರುದ್ದೇಶ ಇದರಲ್ಲಿದೆ ಎಂದು ಕೆಂಡಕಾರಿದರು.

TAGGED:AbhimanyuChakravyuhlok sabhalotusMahabharatanarendra modiRahul Gandhiಅಭಿಮನ್ಯುಕೇಂದ್ರ ಬಜೆಟ್ಚಕ್ರವ್ಯೂಹನರೇಂದ್ರ ಮೋದಿನವದೆಹಲಿರಾಹುಲ್ ಗಾಂಧಿಲೋಕಸಭೆ
Share This Article
Facebook Whatsapp Whatsapp Telegram

Cinema news

nora fatehi gets into an accident suffered a concussion after a drunk driver rammed into her car
ನೋರಾ ಫತೇಹಿ ಕಾರಿಗೆ ಡಿಕ್ಕಿ – ಅಪಾಯದಿಂದ ನಟಿ ಪಾರು
Cinema Latest South cinema
Rashmika Mandanna and Vijay Deverakondas Wedding AI Photos
ಶ್ರೀವಲ್ಲಿ ಮದ್ವೇಲಿ ಪ್ರಭಾಸ್, ಪ್ರಿನ್ಸ್; ವೈರಲ್ ಹಿಂದಿನ ಅಸಲಿಯತ್ತೇನು?
Cinema Latest South cinema Top Stories
Prabhas 2
ದಿ ಸ್ಕ್ರಿಪ್ಟ್ ಕ್ರಾಫ್ಟ್ ಕಿರುಚಿತ್ರೋತ್ಸವಕ್ಕೆ ಪ್ರಭಾಸ್ ಚಾಲನೆ
Cinema Latest South cinema
Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories

You Might Also Like

Rajanna DK Shivakumar
Bengaluru City

ಡಿಕೆಶಿ ಏನೇ ಮಾಡಿದ್ರೂ ನನ್ನ ಸ್ಟ್ಯಾಡ್‌ ಬದಲಾಗಲ್ಲ, ನಾನು ಸಿದ್ದರಾಮಯ್ಯ ಪರವೇ: ಕೆ.ಎನ್‌ ರಾಜಣ್ಣ

Public TV
By Public TV
16 minutes ago
arehalli gram panchayat takes new steps to prevent crime
Districts

ಬೇಲೂರು | ಅಪರಾಧ ಪ್ರಕರಣ ಹೆಚ್ಚಳ – ಅನ್ಯ ರಾಜ್ಯದವ್ರನ್ನ ಬಾಡಿಗೆ ಮನೆಯಿಂದ ಹೊರಹಾಕಲು ನೋಟಿಸ್‌

Public TV
By Public TV
42 minutes ago
Egg
Latest

ಮೊಟ್ಟೆ ತಿಂದ್ರೆ ಕ್ಯಾನ್ಸರ್‌ ಅಪಾಯ ಇಲ್ಲ – ಕೇಂದ್ರದಿಂದ ಸ್ಪಷ್ಟನೆ

Public TV
By Public TV
1 hour ago
Muhammad Yunus
Latest

ಸಕಲ ಸರ್ಕಾರಿ ಗೌರವಗಳೊಂದಿಗೆ ಉಸ್ಮಾನ್‌ ಹಾದಿ ಅಂತ್ಯಕ್ರಿಯೆ

Public TV
By Public TV
1 hour ago
Droupadi Murmu
Bengaluru City

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಲ್ಲಿ ವಿಡಿಯೋ ʻಡೀಪ್‌ ಫೇಕ್‌ʼ – ಎಫ್‌ಐಆರ್‌ ದಾಖಲು

Public TV
By Public TV
2 hours ago
GBA Dog
Bengaluru City

ಬೀದಿ ನಾಯಿಗಳ ಹೆಸ್ರಲ್ಲಿ ಲೂಟಿ ಮಾಡ್ತಿದ್ಯಾ ಜಿಬಿಎ? – ಶೆಡ್‌ ನಿರ್ಮಾಣಕ್ಕೆ 50 ಲಕ್ಷದ ಟೆಂಡರ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?