Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!

Cinema

ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!

Public TV
Last updated: March 4, 2024 1:08 pm
Public TV
Share
2 Min Read
Kailasa Kasidre
SHARE

ವರ್ಷಾಂತರಗಳ ಹಿಂದೆ ‘ತಾರಕಾಸುರ’ ಎಂಬ ಚಿತ್ರದ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ರವಿ. ಮೊದಲ ಚಿತ್ರದಲ್ಲಿಯೇ ರವಿ (Ravi)  ಪಾತ್ರವನ್ನು ನಿಭಾಯಿಸಿದ್ದ ರೀತಿಗೆ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಈ ಸಂಬಂಧವಾಗಿ ರವಿ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದರು. ಅಂಥಾದ್ದೊಂದು ಸವಾಲಿನ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ನಂತರ ಅದೇಕೋ ಸುದೀರ್ಘ ಕಾಲಾವಧಿಯವರೆಗೆ ರವಿ ಮರೆಯಾದಂತಿದ್ದರು. ಇದೀಗ ಅವರು ನಾಗ್ ವೆಂಕಟ್ ನಿರ್ದೇಶನದ ‘ಕೈಲಾಸ ಕಾಸಿದ್ರೆ’ (Kailasa Kasidre) ಚಿತ್ರದ ಮೂಲಕ ಹೊಸ ಗೆಟಪ್‌ನಲ್ಲಿ ಮತ್ತೆ ಮರಳಿದ್ದಾರೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ವಿವರಗಳನ್ನು ಹರವುತ್ತಲೇ, ತಾವು ಬ್ರೇಕ್ ತೆಗೆದುಕೊಂಡಿದ್ದರ ಹಿಂದಿನ ಕೆಲ ರಹಸ್ಯ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ.

Kailasa Kasidre 1

ಸಾಮಾನ್ಯವಾಗಿ, ಒಂದು ಬಗೆಯ ಸಿನಿಮಾ ಗೆದ್ದರೆ ಆ ನಂತರ ಅಂಥಾದ್ದೇ ಧಾಟಿಯ ಮತ್ತೊಂದಷ್ಟು ಸಿನಿಮಾಗಳು ರೂಪುಗೊಳ್ಳುತ್ತವೆ. ಓರ್ವ ನಾಯಕ ನಟ ಒಂದು ಬಗೆಯ ಪಾತ್ರದ ಮೂಲಕ ಜನರನ್ನು ಸೆಳೆದುಕೊಂಡರೆ, ಆತನಿಗಾಗಿ ಅಂಥಾದ್ದೇ ಶೇಡ್ ಹೊಂದಿರುವ ಪಾತ್ರಗಳು ಅರಸಿ ಬರುತ್ತವೆ. ‘ತಾರಕಾಸುರ’ ಚಿತ್ರದಲ್ಲಿನ ರಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರವಿಯ ಮುಂದೆ ಅಂಥಾದ್ದೇ ಶೇಡಿನ ಅದೆಷ್ಟೋ ಕಥೆಗಳು ಕುಣಿದಾಡಿದ್ದವಂತೆ.

Kailasa Kasidre 4

ಆದರೆ ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ರವಿ ಅವರ ಇಂಗಿತವಾಗಿತ್ತು. ಬಂದ ಅವಕಾಶಗಳನ್ನೆಲ್ಲ ನಿರಾಕರಿಸಿ, ಹೊಸಾ ಬಗೆಯ ಪಾತ್ರಕ್ಕಾಗಿ ಅರಸುತ್ತಿದ್ದಾಗ ಎದುರುಗೊಂಡಿದ್ದ ಸಿನಿಮಾ ಕೈಲಾಸ ಕಾಸಿದ್ರೆ.

Kailasa Kasidre 2

‘ತಾರಕಾಸುರ’ ಚಿತ್ರದ ನಂತರದಲ್ಲಿ ಒಂದೇ ಒಂದು ಲವ್ ಸ್ಟೋರಿಯನ್ನೂ ರವಿ ಕೇಳಿಸಿಕೊಂಡಿರಲಿಲ್ಲವಂತೆ. ನಿರ್ದೇಶಕ ನಾಗ್ ವೆಂಕಟ್ ಈ ಕಥೆ ಹೇಳಿದಾಗ, ನಾಯಕನ ಪಾತ್ರದ ಬಗ್ಗೆ ವಿವರಿಸಿದಾಗ ಒಂದೇ ಸಲಕ್ಕೆ ರವಿ ಒಪ್ಪಿಗೆ ಸೂಚಿಸಿದ್ದರಂತೆ. ಇಲ್ಲಿ ಯುವ ಆವೇಗದ ಕಥೆ ಇದೆ. ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸಕ್ಕಾಗಿ ಅರಸುವ ಘಟ್ಟದ ಯುವಕನ ಪಾತ್ರವನ್ನಿಲ್ಲಿ ರವಿ ಆವಾಹಿಸಿಕೊಂಡಿದ್ದಾರೆ. ಈ ಹಂತದಲ್ಲಿ ಆ ಯುವಕ ಪ್ರೀತಿಗಾಗಿ ಏನೇನು ಮಾಡುತ್ತಾನೆ, ಈ ನಡುವೆ ಅಡ್ಡದಾರಿ ಹಿಡಿದಾಗ ಏನೇನಾಗುತ್ತೆ ಎಂಬುದರ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ.

Kailasa Kasidre 3

ಒಟ್ಟಾರೆಯಾಗಿ ಒಂದು ಬದಲಾವಣೆಗಾಗಿ ಹಂಬಲಿಸುತ್ತಿದ್ದ ರವಿ ಇಲ್ಲಿ ಲವರ್ ಬಾಯ್ ಆಗಿ, ನಾನಾ ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಹಾಡುಗಳು ಮತ್ತು ಟ್ರೈಲರ್ ಮೂಲಕ ರವಿ ನಿಭಾಯಿಸಿರುವ ಪಾತ್ರದ ಚಹರೆಗಳು ಜಾಹೀರಾಗಿವೆ. ಈ ಸಿನಿಮಾ ‘ತಾರಕಾಸುರ’ ನಂತರದಲ್ಲಿ ತನಗೆ ಮತ್ತೊಂದು ತೆರನಾದ ಇಮೇಜು ಕಟ್ಟಿಕೊಟ್ಟು, ಮತ್ತೊಂದು ಬ್ರೇಕ್ ನೀಡಲಿದೆ ಎಂಬ ಭರವಸೆಯೂ ರವಿ ಅವರಲ್ಲಿದೆ. ರಾ ಲುಕ್ಕು, ನಾನಾ ಅವತಾರದಿಂದ ಆಚೆ ಬರಬೇಕೆಂಬ ರವಿಯ ಹಂಬಲ ಕೈಲಾಸದ ಮೂಲಕ ಈಡೇರಿದೆ. ಟ್ರಾನ್ಸ್ ಸಾಂಗ್ ಮುಂತಾದ ಒಂದಷ್ಟು ಅಂಶಗಳು ಮತ್ತು ಅದಕ್ಕೆ ಸಿಕ್ಕಿರುವ ಪ್ರೇಕ್ಷಕರ ಬೆಂಬಲ ರವಿ ಪಾಲಿಗೆ ಭರವಸೆಯನ್ನು ಕಟ್ಟಿ ಕೊಟ್ಟಿದೆ.

ರವಿಗೆ (Ravi) ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‌ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅಂದಹಾಗೆ, ಈ ಚಿತ್ರ ಇದೇ ತಿಂಗಳ 8ರಂದು ತೆರೆಗಾಣಲಿದೆ.

TAGGED:kailasa kasidresandalwoodTarakasuraತಾರಕಾಸುರರವಿ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

Nikhil Kumaraswamy
Bengaluru City

ಹಣೆಬರಹದಲ್ಲಿ ಎಲ್ಲಿ ಬರೆದಿದ್ಯೋ ಅಲ್ಲಿಂದ ಮುಂದಿನ ಚುನಾವಣೆಗೆ ಸ್ಪರ್ಧೆ – ನಿಖಿಲ್ ಕುಮಾರಸ್ವಾಮಿ

Public TV
By Public TV
5 minutes ago
zameer ahmed
Bengaluru City

ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

Public TV
By Public TV
25 minutes ago
Kamal Kaur Bhabhi Murder Case
Crime

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕೊಲೆ ಕೇಸ್‌ – ದೆಹಲಿ ಏರ್‌ಪೋರ್ಟ್‌ನಲ್ಲಿ ಆರೋಪಿ ಬಂಧನ

Public TV
By Public TV
32 minutes ago
school children22
Bagalkot

1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿ – ರಾಜ್ಯ ಸರ್ಕಾರ ಅಧಿಕೃತ ಆದೇಶ

Public TV
By Public TV
45 minutes ago
Hulikal Ghat Cm Compensation
Districts

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
1 hour ago
murder case accused karwar
Latest

ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯ ಕೊಲೆ ಕೇಸ್‌ – ಮೂವರಿಗೆ ಜೀವಾವಧಿ ಶಿಕ್ಷೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?