Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 9 ದಿನಗಳ ಬಳಿಕ ಶ್ರೀಕಾಂತ್‌ ಪೂಜಾರಿ ಜೈಲಿನಿಂದ ಬಿಡುಗಡೆ – ‘ಭಾರತ್‌ ಮಾತಾ ಕೀ ಜೈ’ ಎಂದ ಕಾರ್ಯಕರ್ತರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | 9 ದಿನಗಳ ಬಳಿಕ ಶ್ರೀಕಾಂತ್‌ ಪೂಜಾರಿ ಜೈಲಿನಿಂದ ಬಿಡುಗಡೆ – ‘ಭಾರತ್‌ ಮಾತಾ ಕೀ ಜೈ’ ಎಂದ ಕಾರ್ಯಕರ್ತರು

Dharwad

9 ದಿನಗಳ ಬಳಿಕ ಶ್ರೀಕಾಂತ್‌ ಪೂಜಾರಿ ಜೈಲಿನಿಂದ ಬಿಡುಗಡೆ – ‘ಭಾರತ್‌ ಮಾತಾ ಕೀ ಜೈ’ ಎಂದ ಕಾರ್ಯಕರ್ತರು

Public TV
Last updated: January 6, 2024 5:57 pm
Public TV
Share
2 Min Read
srikanth poojari
SHARE

ಹುಬ್ಬಳ್ಳಿ: 9 ದಿನಗಳ ಬಳಿಕ ಕರಸೇವಕ ಶ್ರೀಕಾಂತ್‌ ಪೂಜಾರಿ (Srikanth Poojari) ಜೈಲಿನಿಂದ ಶನಿವಾರ ಬಿಡುಗಡೆಯಾದರು. ಹೊರಗಡೆ ಕಾದು ನಿಂತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೂಜಾರಿಯನ್ನು ಸನ್ಮಾನಿಸಿ ಶ್ರೀರಾಮನ ಭಾವಚಿತ್ರ ನೀಡಿ ಸಂಭ್ರಮಿಸಿದರು.

ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಹುಬ್ಬಳ್ಳಿಯ ಸಬ್‌ ಜೈಲಿನಲ್ಲಿದ್ದ ಪೂಜಾರಿಯನ್ನು ಇಂದು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

srikanth poojari 1

ಶ್ರೀಕಾಂತ್‌ ಪೂಜಾರಿ ಸ್ವಾಗತಿಸಲು ಹಿಂದೂ ಕಾರ್ಯಕರ್ತರು ನೆರದಿದ್ದರು. ಪೂಜಾರಿ ಜೈಲಿನಿಂದ ಹೊರಬರುತ್ತಿದ್ದಂತೆ ಹೂಮಾಲೆ ಹಾಕಿ ಸ್ವಾಗತ ಕೋರಿದರು. ಅಲ್ಲದೇ ಶ್ರೀರಾಮನ ಭಕ್ತ ಶ್ರೀಕಾಂತ್‌ಗೆ ಶ್ರೀರಾಮಚಂದ್ರ ಹಾಗೂ ಸೀತಾಮಾತೆ ಭಾವಚಿತ್ರ ಕೊಡುಗೆಯಾಗಿ ನೀಡಿದರು. ಈ ವೇಳೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಇದ್ದರು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸದಸ್ಯರು, ಶಾಸಕರು, ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ 31 ವರ್ಷದ ಬಳಿಕ ಶ್ರೀಕಾಂತ್‌ ಪೂಜಾರಿ ಬಂಧನವಾಗಿತ್ತು. ಕರಸೇವಕನ ಬಂಧನ ಖಂಡಿಸಿ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಶ್ರೀಕಾಂತ್‌ ಪೂಜಾರಿ ಬಂಧನ ವಿವಾದ ಸ್ವರೂಪ ಪಡೆದುಕೊಂಡಿತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

Srikanth Poojari

ಪ್ರಕರಣ ಕೋರ್ಟ್‌ ಮೆಟ್ಟಿಲೇರಿತು. ಬಳಿಕ ಶ್ರೀಕಾಂತ್‌ಗೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಇಂದು ಕರಸೇವಕನ ಬಿಡುಗಡೆಯಾಗಿದೆ.

ಡಿಸೆಂಬರ್29 ರಂದು ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್‌ ಪೂಜಾರಿ ಬಂಧನವನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

ಏನಿದು ಪ್ರಕರಣ?
ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದರು.

ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ: ದಿನೇಶ್ ಗುಂಡೂರಾವ್

TAGGED:hubballiSrikanth Poojariಶ್ರೀಕಾಂತ್‌ ಪೂಜಾರಿಹುಬ್ಬಳ್ಳಿ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Iranian Crude Oil
Latest

ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

Public TV
By Public TV
40 minutes ago
Raw Bitumen Karwar
Latest

ಕಾರವಾರ| ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್

Public TV
By Public TV
1 hour ago
Induction Stove
Bengaluru City

ಇಂಡಕ್ಷನ್‌ ಸ್ಟವ್‌ ಖರೀದಿ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

Public TV
By Public TV
1 hour ago
Hubli Love Jihad
Dharwad

ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್‌ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ

Public TV
By Public TV
1 hour ago
Sameer
Latest

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌ | ಸಮೀರ್ ನನ್ನ ಮಗಳ ತಲೆ ಕೆಡಿಸಿದ್ದಾನೆ: ಯುವತಿ ತಾಯಿ ಆಕ್ರೋಶ

Public TV
By Public TV
1 hour ago
pralhad joshi
Latest

ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದ್ದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಸೂಚಕ: ಜೋಶಿ ಟೀಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?