ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ನಡುವಿನ ಮುನಿಸು ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಬ್ಬರು ನಾಯಕರ ನಡುವಿನ ಅಸಮಾಧಾನವನ್ನ ದೂರ ಮಾಡಲು ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಮುಂದಾಗಿದ್ದಾರೆ.
ರಾಜಕೀಯದಲ್ಲಿ ಮುನಿಸು ಸಹಜ.. ಆದರೆ ಆ ಮುನಿಸು ಯಾವಾಗ ಶಮನವಾಗುತ್ತೆ ಅನ್ನೋದೇ ಕುತೂಹಲ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಅಸಮಾಧಾನ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಇಬ್ಬರು ನಾಯಕರ ನಡುವಿನ ಅಂತರವನ್ನ ಕಡಿಮೆ ಮಾಡುವ ಪ್ರಯತ್ನಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಮುಂದಾಗಿದ್ದಾರೆ.
ತಂದೆ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ, ಸಮಸ್ಯೆಗಳಿದ್ದರೆ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಯತೀಂದ್ರ ಮಹಾದೇವಪ್ಪ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ದಶಕಗಳಿಂದ ರಾಜಕೀಯ ಒಡನಾಟ ಹೊಂದಿರುವ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಬೀಳುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ. ಇಬ್ಬರು ನಾಯಕರ ನಡುವಿನ ಅಂತರ ಕಡಿಮೆಯಾಗುತ್ತಾ? ಮತ್ತೆ ಒಂದಾಗ್ತಾರಾ ಸಿದ್ದರಾಮಯ್ಯ ಮತ್ತು ಮಹದೇವಪ್ಪ? ಯತೀಂದ್ರ ನಡೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಹೆಚ್.ಸಿ. ಮಹದೇವಪ್ಪ. ಇಬ್ಬರ ನಡುವಿನ ರಾಜಕೀಯ ಒಡನಾಟಕ್ಕೆ ಮಹತ್ವವಿದೆ. ಹೀಗಾಗಿ ಈ ಮುನಿಸು ಶಮನಕ್ಕೆ ಯತೀಂದ್ರ ನಡೆಸುತ್ತಿರುವ ಪ್ರಯತ್ನ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದೇ ಕ್ಷಣದ ಕುತೂಹಲ.

