Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲೆಕ್ಟ್ರಾನಿಕ್‌ ಸಿಟಿ ಟೆಕ್ಕಿಗಳಿಗೆ ಮತ್ತೆ ನಿರಾಸೆ – ಹಳದಿ ಮಾರ್ಗ ಮೆಟ್ರೋಗೆ ಕಾಯಬೇಕು ಇನ್ನೂ 6 ತಿಂಗಳು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಎಲೆಕ್ಟ್ರಾನಿಕ್‌ ಸಿಟಿ ಟೆಕ್ಕಿಗಳಿಗೆ ಮತ್ತೆ ನಿರಾಸೆ – ಹಳದಿ ಮಾರ್ಗ ಮೆಟ್ರೋಗೆ ಕಾಯಬೇಕು ಇನ್ನೂ 6 ತಿಂಗಳು!

Bengaluru City

ಎಲೆಕ್ಟ್ರಾನಿಕ್‌ ಸಿಟಿ ಟೆಕ್ಕಿಗಳಿಗೆ ಮತ್ತೆ ನಿರಾಸೆ – ಹಳದಿ ಮಾರ್ಗ ಮೆಟ್ರೋಗೆ ಕಾಯಬೇಕು ಇನ್ನೂ 6 ತಿಂಗಳು!

Public TV
Last updated: January 6, 2024 12:24 pm
Public TV
Share
2 Min Read
NAMMA METRO 5
SHARE

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಗೆ (Electronic City) ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ (Namma Metro) ಸಂಚಾರ ಮತ್ತೆ ವಿಳಂಬವಾಗಲಿದೆ. ಬಹು ನಿರೀಕ್ಷಿತ ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರ (Bommasandra) ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪೈಲೆಟ್‌ಲೆಸ್ ಸಂಚಾರಕ್ಕೆ ಇನ್ನೂ ಆರು ತಿಂಗಳು ಕಾಯಬೇಕಿದೆ. ಚೀನಾದಿಂದ ಬರಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ಮತ್ತೆ ತಡವಾಗುತ್ತಿದೆ.

ಹಿಂದೆ ಹಳದಿ ಮಾರ್ಗವನ್ನು ಫೆಬ್ರವರಿಯಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದಿದ್ದ ಬಿಎಂಆರ್‌ಸಿಎಲ್‌ (BMRCL) ಈಗ ಜುಲೈನಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. ಇಲ್ಲಿ ಸಿವಿಲ್ ಕಾಮಗಾರಿ ಬಹುತೇಕ ಮುಗಿದಿದ್ದರೂ ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿಯಿಂದ 2 ಪ್ರೋಟೋ ರೈಲು ಜೊತೆ ಎಂಜಿನಿಯರ್‌ ಬರಬೇಕಿದೆ.

ಚೀನಾದಿಂದ ಇನ್ನೂ ಅನುಮತಿ ಸಿಗದ ಕಾರಣ ಅಲ್ಲಿಂದ ಬೋಗಿಗಳು ಇನ್ನೂ ಬಂದಿಲ್ಲ. ಕೋಲ್ಕತ್ತಾದ ತೀತಾಘರ್‌ ವ್ಯಾಗನ್‌ ಕಂಪನಿಯು ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು ಇದು ಸಹ ಇನ್ನೂ ಕಾರ್ಯಚರಣೆಯಲ್ಲಿದೆ. ಚೀನಾದಿಂದ ಈ ತಿಂಗಳಾಂತ್ಯಕ್ಕೆ ಅಲ್ಲಿನ ಸಿಬ್ಬಂದಿ ಬರಲಿದ್ದಾರೆ.

ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಆದರೆ ಚೀನಾದ 2 ಪ್ರೋಟೋ ಟ್ರೈನ್ ಗಳು ಭಾರತಕ್ಕೆ ಬರಲು ಮುಹೂರ್ತ ನಿಗದಿಯಾಗಿಲ್ಲ. ಮೊದಲು ಹಡಗಿನ ಮೂಲಕ ಪ್ರೋಟೊ ಟ್ರೈನ್ ಚೆನ್ನೈ ಬಂದರನ್ನು ತಲುಪಬೇಕು. ನಂತರ ಅಲ್ಲಿಂದ ರಸ್ತೆಯ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು ತಲುಪುತ್ತವೆ. ಅತ್ತ ತೀತಾಘರ್‌ ವ್ಯಾಗನ್‌ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು. ತೀತಾಘರ್‌ ಉತ್ಪಾದನಾ ಘಟಕದಲ್ಲಿ ಚೀನಾ ರೈಲ್ವೈ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕೋಚ್ ನಿರ್ಮಿಸುತ್ತಿದ್ದು ಟ್ರೈನ್ ಬಂದ ಮೇಲೆ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಅನುಮೋದನೆ ಪಡೆಯಬೇಕು. ಇದನ್ನೂ ಓದಿ: ಗೃಹಲಕ್ಷ್ಮಿ ಹಣ, ಸರ್ಕಾರದಿಂದ ಚಿಟ್‌ ಫಂಡ್‌ – ಏನಿದು ಹೊಸ ಪ್ಲ್ಯಾನ್‌?

 

ಹಲವು ಹಂತದಲ್ಲಿ ಮೂರು ತಿಂಗಳು ಪ್ರಾಯೋಗಿಕ ಪರೀಕ್ಷೆ ಮಾಡಿದ ನಂತರ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷಿಸಿ ಅನುಮೋದನೆ ನೀಡಬೇಕು. ಈ ಹಂತಗಳು ಪೂರ್ಣವಾಗಲು ಜೂನ್-ಜುಲೈ ಆಗಬಹುದು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಣ್ ಹೇಳಿದ್ದಾರೆ

2019 ರಲ್ಲಿ ಚೈನಾ ರೈಲ್ವೇ ರೋಲಿಂಗ್‌ ಸ್ಟಾಕ್‌ ಕಾರ್ಪೋರೆಷನ್‌ (ಸಿಆರ್‌ಆರ್‌ಸಿ) ಜೊತೆ ಬೋಗಿ ಖರೀದಿ ಸಂಬಂಧ ನಮ್ಮ ಮೆಟ್ರೋ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ 173 ವಾರಗಳಲ್ಲಿ 216 ಬೋಗಿ ಪೂರೈಸಬೇಕಿತ್ತು. ಕೋವಿಡ್ ಹಾಗೂ ವಿದೇಶಿ ನೇರ ಹೂಡಿಕೆ ನೀತಿ, ವ್ಯಾಪಾರ ನಿರ್ಬಂಧ, ಉಪಗುತ್ತಿಗೆ ಕಂಪನಿಯ ಹುಡುಕಾಟ ಕಾರಣ ನೀಡಿ ಸಿಆರ್‌ಆರ್‌ಸಿ ಬೋಗಿಗಳ ಪೂರೈಕೆ ವಿಳಂಬ ಮಾಡಿದೆ.

ಎಲ್ಲವೂ ನಿಗದಿ ಪ್ರಕಾರ ನಡೆದಿದ್ದರೆ 18.2 ಕಿ.ಮೀ. ಈ ಮಾರ್ಗದಲ್ಲಿ ಡಿಸೆಂಬರ್‌ನಲ್ಲಿ ಮೆಟ್ರೋ ಸೇವೆ ಶುರುವಾಗಬೇಕಿತ್ತು. 2021ರಿಂದ ಹಳದಿ ಮಾರ್ಗ ಕಾರ್ಯಾರಂಭ ನಿಗದಿತ ಅವಧಿ ಮುಂದೂಡಿಕೆ ಆಗುತ್ತಲೇ ಇದ್ದು, ಈಗ ಮತ್ತೊಮ್ಮೆ ಡೆಡ್‌ಲೈನ್‌ ತಪ್ಪಿದೆ.

2019ರಲ್ಲಿ ಸಿಆರ್‌ಆರ್‌ಸಿ ನಾನ್ಜಿಂಗ್‌ ಪುಜೆನ್‌ ಕಂಪನಿ ಜೊತೆಗೆ ನಮ್ಮ ಮೆಟ್ರೋ 216 ಬೋಗಿಗಳ (36 ರೈಲು) ಪೂರೈಸುವ ಒಪ್ಪಂದ ನಡೆದಿತ್ತು. ಮೂಲ ಮಾದರಿಯ ಆರು ಬೋಗಿಗಳ ಎರಡು ಸೆಟ್‌ನ್ನು ಚೀನಾ ಕಳುಹಿಸಿದ ಬಳಿಕ ಸಿಆರ್‌ಆರ್‌ಸಿಯಿಂದ ಉಪಗುತ್ತಿಗೆ ಪಡೆದ ಕೋಲ್ಕತ್ತಾದ ಉತ್ತರಪುರ ಬಳಿಯ ತೀತಾಘರ್‌ ವ್ಯಾಗನ್‌ ಕಂಪನಿಯು 204 ಬೋಗಿಗಳನ್ನು ಅದೇ ಮಾದರಿಯಲ್ಲಿ ನಿರ್ಮಿಸಿ ಮೆಟ್ರೋಗೆ ನೀಡಬೇಕಿದೆ.

 

TAGGED:BMRCLbommasandraelectronic citynamma metroRV Roadಎಲೆಕ್ಟ್ರಾನಿಕ್ ಸಿಟಿನಮ್ಮ ಮೆಟ್ರೋಹಳದಿ ಮಾರ್ಗ
Share This Article
Facebook Whatsapp Whatsapp Telegram

Cinema news

Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema

You Might Also Like

Donald Trump
Latest

ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ: ಇರಾನಿಗೆ ಟ್ರಂಪ್‌ ವಾರ್ನಿಂಗ್‌

Public TV
By Public TV
11 minutes ago
Basangouda Patil Yatnal 2
Bagalkot

ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ ಬರಲಿದ್ದಾರೆ ಯತ್ನಾಳ್‌ : ರಮೇಶ್‌ ಜಾರಕಿಹೊಳಿ

Public TV
By Public TV
32 minutes ago
Delhi Assembly Masked man arrested
Court

ದೆಹಲಿ ವಿಧಾನಸೌಧದಲ್ಲಿ ಭದ್ರತಾಲೋಪ ಕೇಸ್ – ಆರೋಪಿಯನ್ನ 8 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

Public TV
By Public TV
48 minutes ago
sergio gor and donald trump
Latest

ಇರಾನ್‌ ಡೆಡ್‌ಲೈನ್‌| ಅಮೆರಿಕದ ಭಾರತೀಯ ರಾಯಭಾರಿಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ ಟ್ರಂಪ್‌

Public TV
By Public TV
1 hour ago
Hubballi Gym Trainer Arrest
Crime

ಯುವತಿಯರು, ಮಹಿಳೆಯರಿಗೆ ಬ್ಯಾಡ್ ಟಚ್ ಮಾಡ್ತಿದ್ದ ಜಿಮ್ ಟ್ರೇನರ್ ಅರೆಸ್ಟ್

Public TV
By Public TV
2 hours ago
Goa Car Accident 1
Crime

ಉದ್ಯಮಿಯ ಮಗನ ಶೋಕಿಗೆ ಬಿತ್ತು ಹೆಣ –  ಬೈಕ್‌ಗೆ ಮಿನಿ ಕೂಪರ್‌ ಡಿಕ್ಕಿಯಾಗಿ ಯುವತಿ ಸಾವು, ಚಾಲಕ ಅರೆಸ್ಟ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?