ಕಿರುತೆರೆಯ ನಟಿ ರಾಧಿಕಾ ರಾವ್ (Radhika Rao) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕೆಲ ತಿಂಗಳುಗಳ ಹಿಂದೆ ರಾಧಿಕಾ, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮುದ್ದಾದ ಮಗುವಿಗೆ ರಾಧಿಕಾ ನಾಮಕರಣ ಮಾಡಿದ್ದಾರೆ. ಚೆಂದದ ಫೋಟೋಶೂಟ್ ಶೇರ್ ಮಾಡಿಕೊಳ್ಳುವ ಮೂಲಕ ಮಗನ ಹೆಸರನ್ನ ನಟಿ ರಿವೀಲ್ ಮಾಡಿದ್ದಾರೆ.


‘ಮಂಗಳೂರ್ ಹುಡ್ಗಿ ಹುಬ್ಬಳ್ಳಿ ಹುಡ್ಗ’, ರಾಧಾ ಕಲ್ಯಾಣ (Radha Kalyana) ಸೀರಿಯಲ್, ಸಾಕಷ್ಟು ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ಮದುವೆ, ಸಂಸಾರ ಎಂದು ಬಣ್ಣದ ಲೋಕದಿಂದ ದೂರ ಸರಿದಿದ್ದ ನಟಿ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ. ಸೂಕ್ತ ಕಥೆ ಸಿಕ್ಕರೆ ಯಾವ ಭಾಷೆಯಾದ್ರೂ ನಟಿಸೋದಾಗಿ ತಿಳಿಸಿದ್ದಾರೆ.

