– ಸಂಖ್ಯಾ ಸಿದ್ಧಾಂತಕ್ಕಾಗಿ ಲಭಿಸಿದ ಗೌರವ
ನವದೆಹಲಿ: ಭಾರತದ ಯುವ ಗಣಿತಜ್ಞ ಪ್ರೊ.ಮಹೇಶ್ ಕಾಕಡೆ (Mahesh Kakde) ಅವರು ರಾಮಾನುಜನ್ ಪ್ರಶಸ್ತಿಗೆ (Ramanujan Prize) ಭಾಜನರಾಗಿದ್ದಾರೆ.
ಪ್ರಸ್ತುತ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಐಐಎಸ್‌ಸಿ) ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಕಾಕಡೆ ಅವರು `ಸಂಖ್ಯಾ ಸಿದ್ಧಾಂತ’ಕ್ಕೆ ನೀಡಿರುವ ಮಹತ್ವದ ಕೊಡುಗೆಗಾಗಿ 2026ನೇ ಸಾಲಿನ ರಾಮಾನುಜನ್ ಪ್ರಶಸ್ತಿ ನೀಡಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಯುವ ಗಣಿತಜ್ಞರಿಗಾಗಿ ಮೀಸಲಾದ ವಿಭಾಗದಲ್ಲಿ ಗೌರವ ಸಂದಿದೆ. ಇದನ್ನೂ ಓದಿ: ಚೆನ್ನೈಯಲ್ಲಿ 12 ಕೋಟಿ ಮೌಲ್ಯದ ಚೈನೀಸ್ ಪಟಾಕಿ ವಶ
ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಫಿಸಿಕ್ಸ್ ಮತ್ತು ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್ ಸಂಸ್ಥೆಗಳು ಸೇರಿ ಜಂಟಿಯಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಕೆಲಸ ಮಾಡುತ್ತಾ, ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನೆ ನಡೆಸುವ 45 ವರ್ಷದೊಳಗಿನ ಯುವ ಗಣಿತಜ್ಞರಿಗೆ ಈ ಪ್ರಶಸ್ತಿಯನ್ನು ನೀಡುತ್ತವೆ.
ಸಂಖ್ಯೆಗಳು ಹೇಗೆ ವರ್ತಿಸುತ್ತವೆ ಮತ್ತು ಬೇರೆ ಬೇರೆ ಗಣಿತದ ಸೂತ್ರಗಳು ಅಥವಾ ರಚನೆಗಳು ಒಂದಕ್ಕೊಂದು ಹೇಗೆ ಜೋಡಿಸಲ್ಪಟ್ಟಿವೆ ಎಂಬುದನ್ನು ಕಂಡುಕೊಳ್ಳುವಲ್ಲಿ ಕಾಕಡೆ ಅವರು ಪ್ರಮುಖ ಕೆಲಸ ಮಾಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ರಾಮಾನುಜನ್ ಪ್ರಶಸ್ತಿ ಲಭಿಸಿದೆ.ಇದನ್ನೂ ಓದಿ: ಜಿಪಂ, ತಾಪಂ ಚುನಾವಣಾ ಮೀಸಲಾತಿ ಪ್ರಕಟ

