ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರ ಪತ್ನಿ ಆಲಿಯಾ (Aaliya) ಅವರು ಬಿಗ್ ಬಾಸ್ ಹಿಂದಿ ಒಟಿಟಿ 2ಗೆ (Bigg Boss Ott2) ಕಾಲಿಟ್ಟಿದ್ದರು. ಜೂನ್ 17ಕ್ಕೆ ಆರಂಭವಾದ ಈ ಶೋ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ. ಬಿಗ್ ಬಾಸ್ ಒಟಿಟಿಯಲ್ಲಿನ ಆಲಿಯಾ ಸಿದ್ಧಿಕಿ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ. ದೊಡ್ಮನೆಗೆ ಕಾಲಿಟ್ಟ 2ನೇ ವಾರಕ್ಕೆ ಆಲಿಯಾ ಔಟ್ ಆಗಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್
ಹಿಂದಿ ಸಿನಿಮಾರಂಗದ ಪ್ರತಿಭಾನ್ವಿತ ನಟ ನವಾಜುದ್ದೀನ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಿಂತ ಪತ್ನಿ ಆಲಿಯಾ ಜೊತೆಗಿನ ಸಂಸಾರದ ಗಲಾಟೆ ಮೂಲಕವೇ ಸುದ್ದಿಯಲ್ಲಿದ್ರು. ನವಾಜುದ್ದೀನ್ ತಮಗೆ ಹಿಂಸೆ ಮಾಡುತ್ತಾರೆ. ಮನೆಯಿಂದ ಹೊರ ದಬ್ಬಿದ್ದಾರೆ ಎಂದು ನಟನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಗೋಗರೆದಿದ್ರು. ಡಿವೋರ್ಸ್ ಆಗುವ ಹಂತದಲ್ಲಿದೆ ಎಂದು ಹೇಳಾಗುತ್ತಿದೆ. ಇದೀಗ ಬಿಗ್ ಬಾಸ್ ಶೋಗೆ ಬಂದು ಏನೋ ಸಾಬೀತು ಮಾಡಲು ಹೋಗಿ ಆಲಿಯಾ ಮುಖಭಂಗ ಅನುಭವಿಸಿದ್ದಾರೆ.
ಆಲಿಯಾ ಸಿದ್ಧಿಕಿ ಅವರು ನಿರ್ಮಾಪಕಿ ಕೂಡ ಹೌದು. ಆದರೆ ಅವರಿಗೆ ತಮ್ಮದೇ ಆದಂತಹ ಐಡೆಂಟಿಟಿ ಇರಲಿಲ್ಲ. ಕೇವಲ ಸ್ಟಾರ್ ನಟನ ಪತ್ನಿ ಎಂದು ಅವರನ್ನು ಗುರುತಿಸಲಾಗಿತ್ತು. ಅಲ್ಲದೇ ಗಂಡನ ಜೊತೆ ಕಿರಿಕ್ ಮಾಡಿಕೊಂಡ ಬಳಿಕ ಅವರಿಗೆ ಬೇರೆ ಐಡೆಂಟಿಟಿ ಪಡೆಯುವುದು ಅನಿವಾರ್ಯ ಆಗಿತ್ತು. ಆ ಕಾರಣಕ್ಕಾಗಿ ಅವರು ಬಿಗ್ ಬಾಸ್ ಒಟಿಟಿ 2 ಶೋಗೆ ಬಂದಿದ್ದರು. ಈ ವೇದಿಕೆಯಲ್ಲಿ ತಮ್ಮ ಜೀವನದ ವಿವರಗಳನ್ನು ಜನರಿಗೆ ತಿಳಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಈಗ ಆಲಿಯಾ ಮಿಡ್ ಮೀಕ್‌ನಲ್ಲಿ ಎಲಿಮಿನೇಟ್ (Elimination) ಆಗಿದ್ದಾರೆ. ಹಾಗಾಗಿ ಅವರ ಯೋಜನೆಗೆ ಬ್ರೇಕ್ ಬಿದ್ದಿದೆ.
ನವಾಜುದ್ದೀನ್ ಜೊತೆಗಿನ ಮನಸ್ತಾಪದ ನಂತರ ಹೊಸ ಬಾಯ್‌ಫ್ರೆಂಡ್ ಜೊತೆ ಆಲಿಯಾ ಎಂಗೇಜ್ ಆಗುತ್ತಿದ್ದಾರೆ. ನವಾಜುದ್ದೀನ್ ಜೊತೆಗಿನ ದಾಂಪತ್ಯಕ್ಕೆ ಡಿವೋರ್ಸ್ ಸಿಕ್ಕ ಮೇಲೆ ಬಾಯ್‌ಫ್ರೆಂಡ್ ಜೊತೆ ಆಲಿಯಾ ಮದುವೆ ಎಂದು ಹೇಳಲಾಗುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]