ಬೆಂಗಳೂರು: ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Bannerghatta) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೇಳೆ ನಿರ್ಮಿಸಿರುವ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು (Lorry) ಕೆರೆಗೆ ಪಲ್ಟಿಯಾಗಿದೆ.
ಲಾರಿ ಹೊರುಳುತ್ತಿದ್ದಂತೆ ಚಾಲಕ ಜಿಗಿದು ಅಪಾಯದಿಂದ ಪಾರಾಗಿದ್ದಾನೆ. ಬಿಲ್ವರದನಹಳ್ಳಿ ಕೆರೆ ಅಭಿವೃದ್ಧಿ ಪಡಿಸಿ ಏರಿಯ ಎರಡು ಬದಿಗಳಲ್ಲಿ ಮಣ್ಣು ಹಾಕಲಾಗಿದೆ. ಆದರೆ ಲಾರಿ ಬರುತ್ತಿದ್ದಂತೆ ಮಣ್ಣು ಕುಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಎರಡು ತಾಸು ಸ್ಥಳೀಯರು ಹರಸಾಹಸ ಪಟ್ಟು ಲಾರಿಯನ್ನು ಮೇಲಕ್ಕೆತ್ತಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ಬಸ್ಗಳಿಗೆ ಕೊನೆಗೂ ಡೀಸೆಲ್ ಭಾಗ್ಯ – 100 ಕೋಟಿ ಅನುದಾನ ಬಿಡುಗಡೆ
ಕಂಪನಿಯೊಂದರ ಸಿಎಸ್ಆರ್ ಅನುದಾನದಡಿಯಲ್ಲಿ ನಡೆಸಿದ ಕಾಮಗಾರಿಯಲ್ಲಿ ಕೆರೆಯ ಬದಿಯಲ್ಲಿ ಮಣ್ಣನ್ನು ಅವೈಜ್ಞಾನಿಕವಾಗಿ ತುಂಬಲಾಗಿದೆ. ಇದರಿಂದಾಗಿ ವಾಹನಗಳು ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಕೆರೆಗೆ ತಡೆಗೋಡೆ ಇಲ್ಲದೇ ಇರುವುದರಿಂದ ವಾಹನಗಳು ಕೆರೆಯತ್ತ ವಾಲಿತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಮೂವರು ಮಾಜಿ ಸಿಎಂ ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ವಶಕ್ಕೆ

