Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ – ಸಿಎಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ – ಸಿಎಂ

Dharwad

ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ – ಸಿಎಂ

Public TV
Last updated: April 6, 2023 6:07 pm
Public TV
Share
2 Min Read
Basavaraj Bommai 2
SHARE

ಹುಬ್ಬಳ್ಳಿ: ದಲಿತರನ್ನ (Dalits) ಎದುರುಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ (SC Reservation) ಜಾರಿಗೊಳಿಸಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ (Hubballi) ನಡೆದ ಅಭಿನಂದನಾ ಸಮಾರಂಭದಲ್ಲಿ ಸಿಎಂ ವೀರಾವೇಶದ ಭಾಷಣ ಮಾಡಿದರು. ಇದೇ ವೇಳೆ ಕೇಂದ್ರಕ್ಕೆ ನೀಡಿದ ಮೀಸಲಾತಿ ಶಿಫಾರಸ್ಸಿನ ಪ್ರತಿಯನ್ನೂ ಪ್ರದರ್ಶನ ಮಾಡಿದರು. ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ

Basavaraj Bommai 1 1

ಬಳಿಕ ಭಾಷಣ ಮುಂದುವರಿಸಿದ ಸಿಎಂ, ನಾನು ಬೇರೆ ಮುಖ್ಯಮಂತ್ರಿಗಳಂತಲ್ಲ, ಕೆಲಸ ಮಾಡಿ ಮಾತನಾಡುವ ಮುಖ್ಯಮಂತ್ರಿ. ನಾವು ಯಾರಿಗೂ, ಯಾವ ಸಮುದಾಯದಕ್ಕೂ ಅನ್ಯಾಯ ಮಾಡಿಲ್ಲ. ಯಡಿಯೂರಪ್ಪ ತಾಂಡ ಅಭಿವೃದ್ಧಿ ಮಾಡಿದ್ರು, ಆಗ ಮಾತನಾಡಿಲ್ಲ. ಈಗ ಅವರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ. ತಾಂಡಗಳಿಗೆ ಹಕ್ಕುಪತ್ರ ಕೊಟ್ಟಿದ್ದು ನಾವು. ನಾವು ಇನ್ನೊಬ್ಬರಿಗೆ ನೋವಾಗದಂತೆ ಮೀಸಲಾತಿ ನೀಡಿದ್ದವೆ. ದಲಿತರನ್ನ ಎದುರು ಹಾಕಿಕೊಂಡು ಯಾವ ಸರ್ಕಾರವೂ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಇನ್ನೂ ಕಾಂಗ್ರೆಸ್ ಅಧಿಕಾರ ಬರೋದು ಕನಸು ಎಂದು ಕುಟುಕಿದರು.

Basavaraj Bommai 3

ಒಳ ಮೀಸಲಾತಿಯನ್ನ ಮುಟ್ಟಿದ್ರೆ ಕ್ರಾಂತಿಯಾಗುತ್ತದೆ ಅಂತಾ ಕಾಂಗ್ರೆಸ್‌ನವರು ಹೇಳುತ್ತಿದ್ದರು. ಆದರೆ ಅಸಾಧ್ಯವಾದುದನ್ನ ಸಾಧ್ಯ ಮಾಡಿ ತೋರಿಸಿದ್ದವೆ. ಇದು ಸಾಮಾಜಿಕ, ಸಮಾನತೆ ಇರುವ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ತತ್ವಾದರ್ಶಗಳನ್ನಿಟ್ಟುಕೊಂಡು ಮಾಡಿರುವ ಕಾನೂನು ನನಗೆ ಭರವಸೆಯಿದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಪ್ರೀಥಮ್ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

ಆಕಸ್ಮಿಕವಾಗಿ ಬಡವರಾಗಿ ಹುಟ್ಟಬಹುದು. ಆದರೆ ಬಡವರಾಗಿ ಸಾಯಬೇಕು ಅಂತಾ ಯಾವ ಕಾನೂನಲ್ಲೂ ಹೇಳಿಲ್ಲ. ನಮ್ಮ ದುಡಿಮೆ, ಶ್ರಮ, ನಮ್ಮ ಬುದ್ಧಿವಂತಿಕೆಯಿಂದ ಮುಂದೆ ಬರುತ್ತೇವೆ ಅನ್ನೋರಿಗೆ ಅವಕಾಶ ಮಾಡಿಕೊಡದಿದ್ದ ಮೇಲೆ ಇದೆಂತಾ ವ್ಯವಸ್ಥೆ, ಈ ಅವ್ಯವಸ್ಥೆಗಳನ್ನ ನಾವಿಂದು ಪ್ರಶ್ನಿಸುತ್ತಿದ್ದೇವೆ. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಎಸ್ಸಿ-ಎಸ್ಟಿಯನ್ನ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಆದ್ರೆ ಸಾಮಾಜಿಕ ನ್ಯಾಯ ಕೊಡ್ತೀವಿ ಅಂದವರು ಮುಂದೆ ಹೋಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಕಿಡಿ ಕಾರಿದರು.

ಸಿದ್ದು ವಿರುದ್ಧ ಸಿಎಂ ಕಿಡಿ:
ಇದೇ ವೇಲೆ ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ ಸಿಎಂ, ಸಿದ್ದರಾಮಯ್ಯ ನಿಮಗೆ ತಾಕತ್ತಿದ್ದರೆ ನೀವು ಮೀಸಲಾತಿ, ಒಳ ಮೀಸಲಾತಿ ಪರವಾಗಿದ್ದರೋ ವಿರೋಧವಾಗಿದ್ದರೋ ಎಂಬ ಸ್ಪಷ್ಟ ಚಿತ್ರಣ ನೀಡಿ. ಒಳ ಮೀಸಲಾತಿ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಒಳ ಮೀಸಲಾತಿಯನ್ನ ಯಾರು ಮಾಡುತ್ತಾರೆ ಅವರು ಭಸ್ಮವಾಗುತ್ತಾರೆ ಅಂತಾ ಕಾಂಗ್ರೆಸ್‌ನವರು ಹೇಳುತ್ತಿದ್ದರು. ನಾನು ಆ ಕೆಲಸ ಮಾಡಿ, ನಿಮ್ಮ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದೇನೆ ಅದೇ ನನಗೆ ಸಾಕು ಎಂದು ಬೊಮ್ಮಾಯಿ ತಿಳಿಸಿದರು.

TAGGED:Basavaraj BommaibjpcongressKarnataka assembly electionSC Reservationsiddaramaiahಎಸ್ಸಿ ಮೀಸಲಾತಿಕಾಂಗ್ರೆಸ್ಬಸವರಾಜ ಬೊಮ್ಮಾಯಿಬಿಜೆಪಿಹುಬ್ಬಳ್ಳಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

UP Man Kills Twin Daughters In kanpur
Crime

ಉತ್ತರ ಪ್ರದೇಶದಲ್ಲಿ ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ತಂದೆ

Public TV
By Public TV
18 seconds ago
Modi 1
Latest

ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Public TV
By Public TV
19 minutes ago
italy police
Crime

ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

Public TV
By Public TV
24 minutes ago
vinay kulkarni daughters
Dharwad

ಜೈಲಲ್ಲಿರೋ ತಂದೆ ವಿನಯ್‌ ಕುಲಕರ್ಣಿ ನೆನೆದು ಫೋಟೊ ಜೊತೆ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮಕ್ಕಳು

Public TV
By Public TV
51 minutes ago
Chamarajanagara
Chamarajanagar

ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರ ಹೋರಾಟಕ್ಕೆ ಜಯ – 21 ಮಂದಿಗೆ ಸರ್ಕಾರಿ ಕೆಲಸ

Public TV
By Public TV
2 hours ago
stop rape
Crime

ಕಾಡಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‌ ಆರೋಪ – ಧರ್ಮಸ್ಥಳ ಪೊಲೀಸರಿಂದ ಇಬ್ಬರ ಬಂಧನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?