ಬಹುಭಾಷಾ ನಟಿ ಮೀರಾ ಜಾಸ್ಮಿನ್ (Meera Jasmine) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಸುಳಿವು ನೀಡುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಹೃದಯಂ’ ಚಿತ್ರದ ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್
View this post on Instagram
ಕನ್ನಡದ ಮೌರ್ಯ (Mourya), ಅರಸು (Arasu)ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ಗೆ ನಾಯಕಿಯಾಗುವ ಗಮನ ಸೆಳೆದ ನಟಿ ಮೀರಾ ಜಾಸ್ಮಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನ ಅಂತಾ ಬ್ಯುಸಿಯಿದ್ದ ನಟಿ ಈಗ 10 ವರ್ಷಗಳ ನಂತರ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈಗ ನಟಿ ಮತ್ತಷ್ಟು ಫಿಟ್ ಮತ್ತು ಗ್ಲ್ಯಾಮರಸ್ ಆಗಿ ಹೊಸ ಬಗೆಯ ಫೋಟೋಗಳ ಮೂಲಕ ಆಗಾಗ ಮಿಂಚ್ತಿರುತ್ತಾರೆ.
ಸಿನಿಮಾದಲ್ಲಿ ಮತ್ತಷ್ಟು ಆಕ್ಟೀವ್ ಆಗಲು ನಿರ್ಧರಿಸಿದ್ದಾರೆ. 2022ರಲ್ಲಿ ಮಲಯಾಳಂನ `ಮಕಲ್’ ಚಿತ್ರದ ಮೂಲಕ ಜಯರಾಮ್ಗೆ ನಾಯಕಿಯಾಗಿ ನಟಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಡಬ್ಬಿಂಗ್ನಲ್ಲಿ ತೊಡಗಿರುವ ಫೋಟೋ ಶೇರ್ ಮಾಡಿ ಹೊಸ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.
View this post on Instagram
ಸದ್ಯ ರಾಮ್-ಬೋಪಪತಿ ಶ್ರೀನು ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಮೀರಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k