Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ

Bengaluru City

ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ

Public TV
Last updated: January 25, 2023 9:10 pm
Public TV
Share
2 Min Read
AMITSHAH 3
SHARE

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬೆಳಗಾವಿ ರಾಜಕಾರಣಕ್ಕೆ ಅದರದ್ದೇ ಆದ ವಿಶೇಷ ಸ್ಥಾನ‌ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಬೆಳಗಾವಿ (Belagavi) ಪ್ರತ್ಯೇಕ ಅಧ್ಯಾಯದಂತೆ. ಇಂತಹ ಬೆಳಗಾವಿ ರಾಜಕಾರಣದಲ್ಲಿ ಸದಾ ಸಂಘರ್ಷ, ಕಚ್ಚಾಟ, ಪ್ರತಿಷ್ಠೆ, ಮೇಲಾಟಗಳದ್ದೇ ಆರ್ಭಟ ಇರುತ್ತೆ. ಇದೀಗ ಬಿಜೆಪಿ (BJP) ನಾಯಕರಿಗೆ ಬೆಳಗಾವಿ ಬಣ ರಾಜಕಾರಣ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ.

18 ವಿಧಾನಸಭೆ ಕ್ಷೇತ್ರಗಳಿರುವ ಕುಂದಾ ನಗರಿಯಲ್ಲಿ ಈ ಬಾರಿ ಒಗ್ಗಟ್ಟೇ ಬಲ ತಂದುಕೊಡುವ ರಾಜಮಾರ್ಗವಾಗಿದೆ.‌ ಆದರೆ ಬೆಳಗಾವಿ ನೆಲದಲ್ಲಿ ಒಗ್ಗಟ್ಟು ಅಂದ್ರೆ ಒಂದು ರೀತಿಯಲ್ಲಿ ವರ್ಜ್ಯ. ಹೀಗಾಗಿ ಒಟ್ಟಾಗಿ ಹೋಗದೇ ಇದ್ದರೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಭೀತಿ ಕಮಲ ಪಡೆಗೆ ಕಾಡುತ್ತಿದೆ.

BJP FLAG

ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟು ತರುವ, ಬಣ ರಾಜಕೀಯ ಕೊನೆಗಾಣಿಸುವ ರಾಜ್ಯ ನಾಯಕರ ಇದುವರಿಗಿನ ಪ್ರಯತ್ನಗಳು ಕೈಗೂಡಿಲ್ಲ. ಹೀಗಾಗಿ ಇದೀಗ ಬೆಳಗಾವಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಬೆಳಗಾವಿ ಬ್ಯಾಟಲ್ ಟ್ಯಾಕಲ್ ಮಾಡುವುದಕ್ಕೆ ಖುದ್ದು ಬಿಜೆಪಿಯ ಚಾಣಕ್ಯ ಅಮಿತ್ ಶಾ (amit shah) ಎಂಟ್ರಿ ಕೊಡುತ್ತಿದ್ದಾರೆ. ಇದೇ ತಿಂಗಳ 27, 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

28 ರಂದು ಬೆಳಗಾವಿಗೆ ಭೇಟಿ ಕೊಟ್ಟು ನಾಯಕರ ಜತೆ ಮಹತ್ವದ ಸಭೆಯನ್ನು ಅಮಿತ್ ಶಾ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಉಂಟಾಗಿರುವ ಬಣ ರಾಜಕಾರಣಕ್ಕೆ ತೆರೆ ಎಳೆಯಲು ಅಮಿತ್ ಶಾ ನಿರ್ಧರಿಸಿದ್ದಾರೆ. ಈಗಾಗಲೇ ಬೆಳಗಾವಿ ಬಣ ಸಂಘರ್ಷದ ಬಗ್ಗೆ ರಾಜ್ಯ ಬಿಜೆಪಿ ಘಟಕವು ವರಿಷ್ಠರ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಪಕ್ಕಾ ಪ್ಲಾನ್ ಜತೆಯೇ ಬರುತ್ತಿದ್ದಾರೆ ಎನ್ನಲಾಗಿದೆ.

ramesh jarakiholi

ಕಳೆದ ವರ್ಷ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಡಬಲ್ ಸೋಲು ಎದುರಾಯ್ತು. ಪಕ್ಷದ ಅರುಣ್ ಷಹಾಪೂರ, ಮಹಾಂತೇಶ್ ಕವಟಗಿಮಠ ಇಬ್ಬರು ಪರಿಷತ್ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಈ ಡಬಲ್ ಸೋಲಿಗೆ ಬಣ ಕಚ್ಚಾಟವೇ ಮೇನ್ ರೀಸನ್ ಅಂತ ವಿಮರ್ಶಿಸಲಾಗಿದೆ. ಈ ಎರಡು ಸೋಲುಗಳಿಂದ ಇದೀಗ ಎಚ್ಚೆತ್ತ ಬಿಜೆಪಿಯು ವಿಧಾನಸಭೆ ಚುನಾವಣೆಗೂ ಮುನ್ನವೇ ಸಮಸ್ಯೆ ಸರಿಪಡಿಸಲು ಮುಂದಾಗಿದೆ. ಇದನ್ನೂ ಓದಿ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಕ್ಷತ್ರಿಯರು – ಜ.29ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ

laxman savadi

ಬೆಳಗಾವಿ ಬಿಜೆಪಿ ನಾಯಕರ ಮಧ್ಯೆ ಪ್ರತಿಷ್ಠೆ ಸಮರ ಮೊದಲಿಂದಲೂ ಇದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಬ್ರದರ್ಸ್ ಮತ್ತು ಲಕ್ಷ್ಮಣ ಸವದಿ (Laxman Savadi), ಸಚಿವೆ ಜೊಲ್ಲೆ, ರಮೇಶ್ ಕತ್ತಿ ಟೀಮ್ ನಡುವೆ ಸಂಘರ್ಷ ಮನೆ ಮಾಡಿದೆ. ಇದುವರೆಗೂ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಯಾವ ಸಂದರ್ಭದಲ್ಲೂ ಒಟ್ಟಾಗಿ ಹೋಗಿಲ್ಲ. ಕಳೆದ ವರ್ಷ ಮಾಜಿ ಸಿಎಂ ಯಡಿಯೂರಪ್ಪ (BS Yediyurappa)  ಮತ್ತು‌ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎರಡೂ ಬಣಗಳ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಇದೀಗ ಬೆಳಗಾವಿ ಬ್ಯಾಟಲ್‌ಗೆ ಅಮಿತ್ ಶಾ ಪರಿಹಾರ ಸೂತ್ರ ಏನು ಅನ್ನುವ ಕುತೂಹಲ ಕೆರಳಿದೆ. ಅಮಿತ್ ಶಾ ಬಳಿ ಇರೋದು ಸಂಧಾನ ಸೂತ್ರವೋ, ಅಥವಾ ವಾರ್ನಿಂಗ್ ಸೂತ್ರವೋ ಅಥವಾ ತಾತ್ಕಾಲಿಕ ಮುಲಾಮು ಹಚ್ಚಿ ಹೋಗುವ ಕಸರತ್ತೋ ಅನ್ನೋದು ಅವರು ಬಂದ ಮೇಲಷ್ಟೇ ಸ್ಪಷ್ಟವಾಗಲಿದೆ. ಇದನ್ನೂ ಓದಿ: 3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:Amit ShahbelagaviLaxman Savadiಅಮಿತ್ ಶಾಬೆಳಗಾವಿರಮೇಶ್ ಜಾರಕಿಹೊಳಿಲಕ್ಷ್ಮಣ್ ಸವದಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

BJP MLA Dheeraj Muniraj
Bengaluru City

ನಿಮ್ಮ ದಬ್ಬಾಳಿಕೆಗೆ ನಾವು ಹೆದರಲ್ಲ, ಇನ್ನಷ್ಟುಹೋರಾಟ ಮಾಡ್ತೀವಿ – ಡಿಕೆಶಿಗೆ ಧೀರಜ್‌ ಮುನಿರಾಜು ತಿರುಗೇಟು

Public TV
By Public TV
13 minutes ago
Chinese Robot Dog
Latest

ಚೀನಾ ನಿರ್ಮಿತ ರೋಬೋಟ್ ಡಾಗ್ ಖರೀದಿಸಿ AI ಶೃಂಗದಲ್ಲಿ ಪ್ರದರ್ಶನ – ಗ್ಯಾಲ್ಗೋಟಿಯಾ ವಿವಿಗೆ ಗೇಟ್‌ಪಾಸ್‌

Public TV
By Public TV
27 minutes ago
Pratyusha 3
Court

ನಟಿ ಪ್ರತ್ಯುಷಾ ಪ್ರಕರಣ – ಆತ್ಮಹತ್ಯೆಗೆ ಪರಸ್ಪರ ಒಪ್ಪಿದ್ದ ಸಂದರ್ಭದಲ್ಲಿ ಬದುಕುಳಿದವರು ಶಿಕ್ಷಾರ್ಹರು: ಸುಪ್ರೀಂ

Public TV
By Public TV
1 hour ago
Vijayapura Murder
Crime

ಸಾಲದ ವಿಷಯಕ್ಕೆ ದಂಪತಿ ಮಧ್ಯೆ ಜಗಳ – ರಾಡ್‌ನಿಂದ ಪತ್ನಿಯ ಹತ್ಯೆಗೈದು ಮನೆಯಲ್ಲೇ ಹೂತುಹಾಕಿದ್ದ ಹಂತಕ ಪತಿ

Public TV
By Public TV
1 hour ago
Hours After Valentines Day Dinner Chartered Accountant Slits Wifes Throat
Crime

ವ್ಯಾಲೆಂಟೈನ್ಸ್ ಡೇ ಸೆಲಬ್ರೇಟ್‌ ಮಾಡಿ ಗರ್ಭಿಣಿ ಪತ್ನಿ ಕೊಂದ ಪತಿ – ದರೋಡೆಯಂತೆ ನಾಟಕ, ವಿಚಾರಣೆ ವೇಳೆ ಸತ್ಯ ಬಯಲು

Public TV
By Public TV
1 hour ago
DK Shivakumar
Bengaluru City

ವಿಜಯೇಂದ್ರ, ಅಶೋಕ್‌ ಮನೆ ಮುಂದೆನೇ ಕಸ ಹಾಕಿಸ್ತೀನಿ: ಡಿಕೆಶಿ ವಾರ್ನಿಂಗ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?