Bengaluru CityDistrictsKarnatakaLatestMain Post

3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

ಬೆಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ರಾಜ್ಯದಲ್ಲಿ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

ಮಂಗಳವಾರ ಬೆಂಗಳೂರಿನ (Bengaluru) ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ಆರ್. ನಿರಾಣಿ (Murugesh Nirani) ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್. ನಿರಾಣಿ ತಿಳಿಸಿದ್ದಾರೆ. ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

15 ಕೋಟಿ ರೂ.ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳು:
* ಮೈಸೂರ್ ಸ್ಟೀಲ್ಸ್ ಲಿಮಿಟೆಡ್- ಮೇಟಗಾನಹಳ್ಳಿ. ಮೈಸೂರು -ಹೂಡಿಕೆ 405.43 ಕೋಟಿ ರೂ., ಉದ್ಯೋಗ 200

* ಎನ್.ಐ.ಡಿ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್- ಕೋಟುರು ಬೇಲೂರು, ಇಎಂಸಿ ಕೈಗಾರಿಕಾ ಪ್ರದೇಶ- ಹೂಡಿಕೆ 350 ಕೋಟಿ ರೂ., ಉದ್ಯೋಗ 730

* ಸಿಲಾನ್ ಬಿವೆರೇಜ್ ಲಿಮಿಟೆಡ್- ಎಫ್‌ಎಮ್‌ಸಿಜಿ, ಕ್ಲಸ್ಟರ್ ಧಾರವಾಡ- ಹೂಡಿಕೆ 256.3 ಕೋಟಿ ರೂ., ಉದ್ಯೋಗ 200

* ಬಾಲಾಜಿ ವೇರರ್ಸ್ ಪ್ರೈ ಲಿಮಿಟೆಡ್ -ಕಣಗಲ್, ಕೈಗಾರಿಕಾ ಪ್ರದೇಶ ಬೆಳಗಾವಿ ಜಿಲ್ಲೆ – ಹೂಡಿಕೆ 251.25 ಕೋಟಿ ರೂ., ಉದ್ಯೋಗ 500

* ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್ – ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶ ಚಾಮರಾಜನಗರ – ಹೂಡಿಕೆ 253 ಕೋಟಿ ರೂ., ಉದ್ಯೋಗ 500

* ಕ್ಸಿಸೋಡ ಇಂಡಿಯಾ ಪ್ರೈ ಲಿಮಿಟೆಡ್ – ಶಿರಾ ಕೈಗಾರಿಕಾ ಪ್ರದೇಶ ತುಮಕೂರು – ಹೂಡಿಕೆ 138 ಕೋಟಿ ರೂ., ಉದ್ಯೋಗ 160

* ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮಿಟೆಡ್ – ಬೆಳಗಲ್ ಗ್ರಾಮ, ಬಳ್ಳಾರಿ – ಹೂಡಿಕೆ 90 ಕೋಟಿ ರೂ., ಉದ್ಯೋಗ 90

* ಎ.ಸಿ.ಆರ್ ಪ್ರಾಜೆಕ್ಟ್ – ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ, – ಹೂಡಿಕೆ 85 ಕೋಟಿ ರೂ., ಉದ್ಯೋಗ 350

* ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್- ಎಎಲ್‍ಜಿಸಿ ಕ್ಲಸ್ಟರ್, ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶ, ಧಾರವಾಡ, ಹೂಡಿಕೆ -50 ಕೋಟಿ ರೂ., ಉದ್ಯೋಗ 563

* ಅಭಯ್ ಆಗ್ರೋ ಫುಡ್ ಪ್ರೈಲಿಮಿಟೆಡ್- ಗಬಾರ ಗ್ರಾಮ, ಕೊಪ್ಪಳ ಜಿಲ್ಲೆ- ಹೂಡಿಕೆ 32.65 ಕೋಟಿ ರೂ., ಉದ್ಯೋಗ -35

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button