ಜೈಪುರ: ಸ್ನಾನ ಮಾಡಲು ನದಿಗೆ ಇಳಿದಿದ್ದ 11 ಯುವಕರಲ್ಲಿ 8 ಮಂದಿ ನೀರಿನಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಟೋಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ (Banas river) ನಡೆದಿದೆ.
ಮೃತರೆಲ್ಲರೂ ಜೈಪುರದ ನಿವಾಸಿಗಳೆಂದು ತಿಳಿದುಬಂದಿದೆ. ಜೈಪುರದಿಂದ 11 ಮಂದಿ ಯುವಕರ ಗುಂಪೊಂದು ಪಿಕ್ನಿಕ್‌ಗಾಗಿ ಟೋಂಕ್ (Tonk) ಜಿಲ್ಲೆಗೆ ಬಂದಿದ್ದರು. ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್ ವಶಕ್ಕೆ
ಈ ವೇಳೆ ಯುವಕರೆಲ್ಲರು ಸ್ನಾನಕ್ಕೆಂದು ಬನಾಸ್ ನದಿಗೆ ಇಳಿದಿದ್ದರು. ಅವರು ನದಿಯಲ್ಲಿ ಈಜುತ್ತಾ ಆಳದ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭ ನೀರಿನ ಸೆಳೆತಕ್ಕೆ ಒಳಗಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಯುವಕರನ್ನು ರಕ್ಷಿಸಲಾಗಿದೆ ಎಂದು ಟೋಂಕ್‌ನ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ತಿಳಿಸಿದ್ದಾರೆ.