ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 749 ಪಾಸಿಟಿವ್ ಕೇಸ್ ವರದಿಯಾಗಿದೆ. ಇತ್ತ 940 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 6,474ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು 696 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,075ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಏಕೈಕ ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ದಾಖಲಾದ ಏಕೈಕ ಮರಣ ಪ್ರಕರಣ ಮೈಸೂರಿನಲ್ಲಿ ವರದಿಯಾಗಿದೆ. ಬೆಂಗಳೂರು ನಗರದ ಬಳಿಕ ದಕ್ಷಿಣಕನ್ನಡದಲ್ಲಿ ದಾಖಲಾದ 20 ಪ್ರಕರಣ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಕೇಸ್ ಆಗಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 4.16ಕ್ಕೆ ತಲುಪಿದೆ. ಈವರೆಗೆ ಒಟ್ಟು 40,078 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ- ಸಶಸ್ತ್ರಪಡೆಗಳಿಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣಿ
Advertisement
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,73,034 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,26,440 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 33,307 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 17,979 ಸ್ಯಾಂಪಲ್ (ಆರ್ಟಿಪಿಸಿಆರ್ 14,173 + 3,806 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಸು ಹಿಂದೂಗಳ ಪವಿತ್ರ ಪ್ರಾಣಿ, ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡೋದು ಬೇಡ – ಮುಸ್ಲಿಂ ಸಂಘಟನೆ ಮನವಿ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 1, ಬಳ್ಳಾರಿ 3, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 696, ಬೀದರ್ 3, ದಕ್ಷಿಣ ಕನ್ನಡ 20, ದಾವಣಗೆರೆ 1, ಹಾಸನ 1, ಹಾವೇರಿ 1, ಕಲಬುರಗಿ 3, ಕೋಲಾರ 4, ಮಂಡ್ಯ 1, ಮೈಸೂರು 3, ರಾಯಚೂರು 1, ಶಿವಮೊಗ್ಗ 2, ಉಡುಪಿ 4, ಕೊಪ್ಪಳ, ಚಾಮರಾಜನಗರ, ಕೊಡಗು, ಧಾರವಾಡ, ಗದಗ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.