Districts

ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

Published

on

Share this

ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ 36ನೆಯ ಪತ್ರಕರ್ತರ ಸಮ್ಮೇಳನ ನಡೆಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಉದ್ಘಾಟನೆ ನೆರವೇರಿಸುವಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗಿದೆ. ಈ ವಾರದೊಳಗೆ ದಿನಾಂಕ ನಿಗದಿ ಮಾಡಲಾಗುವುದು. ಅಕ್ಟೋಬರ್ ಕೊನೆ ವಾರ ಇಲ್ಲವೇ ನವೆಂಬರ್ ಎರಡನೇ ವಾರದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಗಳಿವೆ ಎಂದರು. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

Karnataka administered 29.5 Lakh covid vaccine doses in a single day CM Bommai Thanks Modi

ಈ ಹಿಂದೆ 1996ರಲ್ಲಿ ಕಲಬುರಗಿಯಲ್ಲಿ 20ನೇ ರಾಜ್ಯ ಸಮ್ಮೇಳನ ನಡೆದಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಆಗ ವಿದ್ಯುನ್ಮಾನ ಮಾಧ್ಯಮಗಳು ಕಡಿಮೆ ಇದ್ದವು. ಈಗ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಸಮ್ಮೇಳನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಲಾಗುವುದು. ವೃತ್ತಿ ಆಧಾರಿತ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು.

ಮೊದಲನೇಯದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವೇಶ್ವರರ ಮಹಾದಾಸೋಹಿ ಸಂಸ್ಥಾನದ ಅಧ್ಯಕ್ಷರಾದ ಶರಣಬಸವಪ್ಪ ಅವರ ಸಾನಿಧ್ಯದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ:  ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

ಕೋವಿಡ್ ಸೋಂಕು ಆತಂಕದ ಹಿನ್ನೆಲೆಯಲ್ಲಿ ಸಮ್ಮೇಳನ ಎರಡು ದಿನದ ಬದಲು ಒಂದು ದಿನ ಮಾತ್ರ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ಉದ್ಘಾಟನೆ, ತದನಂತರ ಗೋಷ್ಠಿ, ಸಂಜೆ ಸಮಾರೋಪ ನಡೆಸಲು ಉದ್ದೇಶಿಸಲಾಗಿದೆ. ಸಮ್ಮೇಳನ ಅಂಗವಾಗಿ ಅರ್ಥಪೂರ್ಣ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರಲಾಗುವುದು. ಒಟ್ಟಾರೆ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಕೆಯುಡಬ್ಲ್ಯೂಜೆ ಪ್ರಶಸ್ತಿ: ಸಮ್ಮೇಳನ ಸಮಾರೋಪದಲ್ಲಿ ಸಂಘದಿಂದ 19 ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2 ವರ್ಷ ಸಂಘದಿಂದ ವಾರ್ಷಿಕ ಪ್ರಶಸ್ತಿ ನೀಡಿಲ್ಲ. ಈಗ ಕಲಬುರಗಿ ಸಮ್ಮೇಳನದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಪತ್ರಕರ್ತರು ತಮ್ಮ ಸಾಮಾಜಿಕ ಪರಿಣಾಮದ ಜತೆಗೆ ಇತರ ವೈವಿಧ್ಯಮಯವಾದ ವಿಶೇಷ ವರದಿಗಳ ಪ್ರತಿಯನ್ನು ಹಾಗೂ ತಮ್ಮ ಸೇವೆಯ ವಿಶಿಷ್ಟತೆಯನ್ನು ಒಳಗೊಂಡಂತೆ ಕುರಿತ ಅರ್ಜಿಯನ್ನು ಪತ್ರಕರ್ತರು ಇದೇ ಸೆ.30ರೊಳಗೆ ಸಲ್ಲಿಸಬೇಕೆಂದು ಪ್ರಕಟಿಸಿದರು. ಇದನ್ನೂ ಓದಿ:  ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನು: ಅಶೋಕ್

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸಮ್ಮೇಳನವನ್ನು ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಯಶಸ್ವಿಗೊಳಿಸೋಣ, ಕಲಬುರಗಿಗೆ ಕೀರ್ತಿ ತರೋಣ ಎಂದರು.

ಖಜಾಂಚಿ ರಾಜು ದೇಶಮುಖ ಸಂಘದ ಪ್ರಧಾನ ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications