ಹೈದರಾಬಾದ್: ವಾಶ್‍ರೂಂನಲ್ಲಿ 3 ವರ್ಷದ ಮಗಳು ಆಡುತ್ತಿದ್ದುದ್ದನ್ನು ಕಂಡ ತಂದೆ ಕೋಪಿಸಿಕೊಂಡು, ಆಕೆಯನ್ನು ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಮೂರು ವರ್ಷದ ಮಗುವೊಂದು ವಾಶ್‍ರೂಂನಲ್ಲಿ ಆಟವಾಡುತ್ತಿತ್ತು. ಇದನ್ನು ನೋಡಿದ ತಂದೆ ಆಕೆಗೆ ಹೊರಬರುವಂತೆ ಹೇಳಿದ್ದಾನೆ. ಆದರೂ ಬಾಲಕಿ ಹೊರಗೆ ಬರದಿದ್ದರಿಂದ ಅಲ್ಲೇ ಇದ್ದ ಕೋಲಿನಿಂದ ಹೊಡೆದಿದ್ದಾನೆ.
Advertisement
Advertisement
ಆ ಸಂದರ್ಭದಲ್ಲಿ ಬಾಲಕಿಯ ತಾಯಿ ಮಧ್ಯಪ್ರವೇಶಿಸಿದ್ದಾರೆ. ಆದರೆ ಅವಳನ್ನು ಕೆಳಗೆ ತಳ್ಳಿ, ನಂತರ ಮತ್ತೆ ಮಗುವಿಗೆ ಕೋಲಿನಿಂದ ಹೊಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ
Advertisement
Advertisement
ಮಗುವಿನ ತಂದೆ, ತಾಯಿ 2015ರಲ್ಲಿ ಮದುವೆ ಆಗಿದ್ದು, ಅವರಿಗೆ 4 ಹೆಣ್ಣು ಮಕ್ಕಳಿದ್ದಾರೆ. ಜೊತೆಗೆ ಮಗುವಿನ ತಾಯಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಘಟನೆ ಸಂಬಂಧಿಸಿ ಮಗುವಿನ ತಾಯಿಯು ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ