ಬ್ರಿಡ್ಜ್‌ಟೌನ್: ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ವಿಂಡೀಸ್ (West Indies) ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯವನ್ನು ಭಾರತ ತಿಣುಕಾಡಿ (Team India) 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
This is not about Sacrifice this is stupidity
Just 2months away from World Cup & they R doing JOKE in batting like up
India didn't win 1 ICC Trophy 4 last 10 years & still take this series lightly
Everybody knows that Top 3 Will be Rohit, Gill & Virat they why they not carry on? https://t.co/bwjaFuKzDF
— Daredevil (@Isantanu10) July 27, 2023
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಗುರಿಯನ್ನು ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಗುರಿ ತಲುಪಿತು. ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆಯದ ವಿಂಡೀಸ್ ವಿರುದ್ಧ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡಿರುವುದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
Advertisement
India beat West Indies by 5 wickets in the first ODI.
Starts the World Cup preparation on a high. pic.twitter.com/w6R0OuP5ye
— Johns. (@CricCrazyJohns) July 27, 2023
Advertisement
ಭಾರತದ ಪರ ಆರಂಭಿಕ ಆಟಗಾರ ಇಶನ್ ಕಿಶನ್ (Ishan Kishan) 4ನೇ ಅರ್ಧಶತಕ ಸಿಡಿಸಿ 52 ರನ್(46 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ (Suryakumar Yadav) 19 ರನ್ ಹೊಡೆದರು. ನಾಯಕ ರೋಹಿತ್ ಶರ್ಮಾ (Rohith Sharma) 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದು ವಿಶೇಷವಾಗಿತ್ತು. ರವೀಂದ್ರ ಜಡೇಜಾ ಔಟಾಗದೇ 16 ರನ್, ರೋಹಿತ್ ಶರ್ಮಾ ಔಟಾಗದೇ 12 ರನ್ ಹೊಡೆದರು. ಶುಭಮನ್ ಗಿಲ್ 7 ರನ್, ಹಾರ್ದಿಕ್ ಪಾಂಡ್ಯ 5, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ರೋಹಿತ್, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?
Advertisement
#INDvsWI
Batting line-up of India before 2 months from such a big event world cup, Indian team trying and testing players on random positions and that's the story of every big tournament and we think why we aren't winning icc trophy pic.twitter.com/k4nPsjiH9t
— himanshu Chaudhary (@himansh409) July 27, 2023
3 ವಿಕೆಟ್ ನಷ್ಟಕ್ಕೆ 88 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್ 26 ರನ್‌ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡ ಪರಿಣಾಮ ಹೀನಾಯ ಸೋಲನ್ನು ಅನುಭವಿಸಿತು. ನಾಯಕ ಶಾಯ್ ಹೋಪ್ (Shai Hope) 43 ರನ್(45 ಎಸೆತ, 4 ಬೌಂಡರಿ, 1 ಸಿಕ್ಸರ್), ಅಲಿಕ್ ಅಥಾನಾಜೆ 22 ರನ್(18 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
"Can you believe it? India lost a whopping 5 wickets while chasing just 114 runs!
That too against a team which is not even qualified for the World Cup.!????#INDvsWI
— Avnish Tiwari (@avnishtiwarii) July 27, 2023
ಕುಲದೀಪ್ ಯಾದವ್ 4 ವಿಕೆಟ್ ಕಿತ್ತರೆ, ಜಡೇಜಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ , ಮುಕೇಶ್ ಕುಮಾರ್, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.
Web Stories