ರಾಯಚೂರು: ಮಂತ್ರಾಲಯದ (Mantralaya) ಶ್ರೀ ಗುರು ರಾಘವೇಂದ್ರ ಸ್ವಾಮಿ (Shri Raghavendra Swamiji) ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಂತ್ರಾಲಯದಲ್ಲಿ ತಮ್ಮ 14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಇಂದಿನಿಂದ (ಆ.10) ಆರಂಭಿಸಿದ್ದಾರೆ.

ದೀಕ್ಷೆಯನ್ನು ಪಡೆದು ರಾಘವೇಂದ್ರ ಸ್ವಾಮಿಗಳ, ವಾದೀಂದ್ರ ತೀರ್ಥರ ಹಾಗೂ ಮಠದಲ್ಲಿರುವ ಎಲ್ಲಾ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾತುರ್ಮಾಸ್ಯ ಅವಧಿಯಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದನ್ನೂ ಓದಿ: ಮಳೆ ಬಂದರೆ ಬದುಕೇ ದುಸ್ತರ… ತಲುಪದ ಅಭಿವೃದ್ಧಿಯ ಬೆಳಕು… ಅನೆಕಲ್‌ತಮಲೆಯ 7 ಕುಟುಂಬಗಳ ಕಣ್ಣೀರಿನ ಕಥೆ!

ಚಾತುರ್ಮಾಸ್ಯ ದೀಕ್ಷೆಯ ಹಿನ್ನೆಲೆ ಮಂತ್ರಾಲಯಕ್ಕೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಈ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.

