ಜೈಪುರ: 15 ವರ್ಷದ ಬಾಲಕಿಯ ಮೇಲೆ ಒಂಬತ್ತು ದಿನಗಳ ಸಾಮೂಹಿಕ ಅತ್ಯಾಚಾರ ಎಸಗಿದ 13 ಮಂದಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಚೌಧರಿ ಈ ಕುರಿತು ಮಾತನಾಡಿದ್ದು, ಪೋಕ್ಸೋ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 17 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 13 ಮಂದಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದರೆ, ಉಳಿದ ನಾಲ್ವರು ಅಪ್ರಾಪ್ತ ಅಪರಾಧಿಗಳು ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು
Advertisement
Advertisement
ಅತ್ಯಾಚಾರಕ್ಕೆ ಸಹಾಯ ಮಾಡಿದ ಮಹಿಳೆಯ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಆಕೆಗೆ 4 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರಿಗೆ ತಲಾ 10,000 ರೂ. ಮತ್ತು ನಾಲ್ಕು ವರ್ಷಗಳ ಶಿಕ್ಷೆಗೆ ಒಳಗಾದವರಿಗೆ 7,000 ರೂ. ದಂಡ ವಿಧಿಸಲಾಗಿದೆ ಎಂದರು.
Advertisement
Advertisement
ಏನಿದು ಘಟನೆ?
ಈ ಪ್ರಕರಣವನ್ನು ಇದೇ ವರ್ಷ ಮಾರ್ಚ್ 6 ರಂದು ಸುಕೇಶ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಬಾಲಕಿ ದೂರಿನಲ್ಲಿ, ಕೋಟಾದಲ್ಲಿ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಎಂಬಾಕೆ ತನ್ನ ಬಳಿಯಿಂದ ಬ್ಯಾಗ್ ಅನ್ನು ಖರೀದಿಸುವ ನೆಪದಲ್ಲಿ ಮನೆಗೆ ಕರೆದುಕೊಂಡು ಹೋದಳು. ಪೂಜಾ ನನ್ನನ್ನು ಝಾಲಾವರ್‍ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಒಂಬತ್ತು ದಿನಗಳ ಕಾಲ ನನ್ನ ಮೇಲೆ ಒಬ್ಬರ ನಂತರ ಒಂದರಂತೆ ಹಲವು ಜನರು ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದಳು. ಇದನ್ನೂ ಓದಿ: 20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ
ಈ ಹಿನ್ನೆಲೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಕೋಟಾ ಪೊಲೀಸರು ಮೇ 7 ರಂದು ನ್ಯಾಯಾಲಯಕ್ಕೆ 1750 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದರು. ನಂತರ ನ್ಯಾಯಾಲಯವು ಈ ಕುರಿತು ವಿಚಾರಣೆಯನ್ನು ಮಾಡಿದ್ದು, ನಿನ್ನೆ ತೀರ್ಪು ನೀಡಿದೆ.