– ಅವಘಡದಲ್ಲಿ 66 ಮಂದಿಗೆ ಗಾಯ
ದೋಹಾ: ಕತಾರ್‌ನ(Qatar) ರಾಸ್ ಲಫಾನ್‌ನ ಅನಿಲ ಘಟಕದಲ್ಲಿ ಭೀಕರ ಸ್ಫೋಟ(Fire Explosion) ಸಂಭವಿಸಿದೆ. ಅವಘಡದಲ್ಲಿ ಭಾರತೀಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿದ್ದಾರೆ.
ಈ ಅಗ್ನಿ ದುರಂತ(Fire Accident) ಭಾನುವಾರ ಸಂಭವಿಸಿದೆ. ಮೃತರಲ್ಲಿ ಭಾರತೀಯ ಹಾಗೂ ಪಾಕಿಸ್ತಾನ ಮೂಲದ ಕಾರ್ಮಿಕರು ಇದ್ದಾರೆ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್-ಕಾಬಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಇರಾನ್ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನು ಮರುಪ್ರಾರಂಭಿಸುವ ವೇಳೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 66 ಮಂದಿ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾರ ಜೀವಕ್ಕೂ ಸದ್ಯ ಅಪಾಯ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ ಘಟಕದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಅದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಈ ಘಟನೆ ಘಟಕದ ಅನಿಲ ರಫ್ತು ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕತಾರ್ ಎನರ್ಜಿ ಸಂಸ್ಥೆ ಸ್ಪಷ್ಟಪಡಿಸಿದೆ. ಪರಿಸರಕ್ಕೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಎರಡೇ ವರ್ಷಕ್ಕೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ
ಇದು ಅಪಘಾತವಾಗಿದ್ದು, ಯಾವುದೇ ವಿಧ್ವಂಸಕ ಕೃತ್ಯ ಅಥವಾ ದಾಳಿಯ ಪರಿಣಾಮವಲ್ಲ ಎಂದು ಕತಾರ್ ಇಂಧನ ಸಚಿವ ಸ್ಪಷ್ಟಪಡಿಸಿದ್ದಾರೆ. ಸ್ಫೋಟ ಸಂಭವಿಸಿದ ನಿಖರ ಸ್ಥಳ ಹಾಗೂ ಹಾನಿಯ ಪ್ರಮಾಣದ ಬಗ್ಗೆ ಇನ್ನೂ ಮಾಹಿತಿ ಬಹಿರಂಗಪಡಿಸಿಲ್ಲ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಬರ್ಜಾನ್ ಅನಿಲ ಘಟಕವು ದಿನಕ್ಕೆ ಸುಮಾರು 1.4 ಬಿಲಿಯನ್ ಘನ ಅಡಿ ಅನಿಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಅನಿಲವನ್ನು ಕತಾರ್ ದೇಶದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳಲ್ಲಿ ಬಳಸಲಾಗುತ್ತದೆ. ಇದೇ ರಾಸ್ ಲಫಾನ್ ಘಟಕದ ಮೇಲೆ ಮಾರ್ಚ್ ತಿಂಗಳಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಆ ವೇಳೆ ಬೆಂಕಿ ಕಾಣಿಸಿಕೊಂಡು ಘಟಕಕ್ಕೆ ವ್ಯಾಪಕ ಹಾನಿಯಾಗಿತ್ತು.ಇದನ್ನೂ ಓದಿ: WhatsApp ಮುಖ್ಯಸ್ಥರಾಗಿ CRED ಸಂಸ್ಥಾಪಕ ಕುನಾಲ್ ಶಾ ನೇಮಕ
