ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 12 ವರ್ಷದ ಬಾಲಕನ (Boy) ಮೇಲೆ ನಾಲ್ವರು ಅತ್ಯಾಚಾರ (Rape) ಎಸಗಿರುವ ಭಯಾನಕ ಘಟನೆ ನಡೆದಿದೆ. ದುರುಳರು ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೇ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲಿ ಟ್ವೀಟ್ ಮಾಡಿ, ದೆಹಲಿಯಲ್ಲಿ ಪುರುಷರು ಕೂಡಾ ಸುರಕ್ಷಿತರಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ದೆಹಲಿಯಲ್ಲಿ ಹುಡುಗಿಯರು ಬಿಡಿ, ಗಂಡುಮಕ್ಕಳೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರವೆಸಗಿ, ದೊಣ್ಣೆಯಿಂದ ಹೊಡೆದು ಆತನನ್ನು ಗಂಭೀರ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಸ್ವಾತಿ ಮಲಿವಾಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಳೆಯಾಗಿದೆ ಅಂತಾ ಮಕ್ಕಳ ಎದುರೇ ಆದಿವಾಸಿ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕ ಸಸ್ಪೆಂಡ್
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಿರ್ಪಾನ್ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್ ವಿದ್ಯಾರ್ಥಿ ಬಂಧನ