ಬೆಂಗಳೂರು: ನೂರು ದಿನಗಳ ಪೂರೈಸಿದ ಸಂಭ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಬಲಿಷ್ಠ ಕರ್ನಾಟಕಕ್ಕೆ(Karnataka) 3 ಮಹಾ ಸಂಕಲ್ಪ ಮತ್ತು 9 ಸಂಕಲ್ಪಗಳನ್ನು ಕೈಗೊಂಡಿದ್ದಾರೆ.
ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಂಕಲ್ಪವನ್ನು ಕೈಗೊಂಡು ಮಾತನಾಡಿದ ಡಿಕೆಶಿ, ನಮ್ಮ ಗುರಿ ದೃಢ ಕರ್ನಾಟಕವನ್ನು ನಿರ್ಮಿಸುವುದು. ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ, ಮತ್ತು ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕ ಎಂದು ಹೇಳಿದರು.
ಮಹಾ ಸಂಕಲ್ಪ
1 ಟ್ರಿಲಿಯನ್ ಡಾಲರ್ ಆರ್ಥಿಕತೆ: 2037ರ ವೇಳೆಗೆ ನಮ್ಮ ಆರ್ಥಿಕತೆಯನ್ನು 0.343 ಟ್ರಿಲಿಯನ್‌ನಿಂದ 1 ಟ್ರಿಲಿಯನ್ ಡಾಲರ್‌ಗೆ ಏರಿಸುವುದು
ಅಪೌಷ್ಟಿಕತೆ ನಿಯಂತ್ರಣ: ಶೇ. 5ಕ್ಕಿಂತ ಕಡಿಮೆ ಅಪೌಷ್ಟಿಕತೆ
ಶೂನ್ಯ: ಬಡತನ ಮತ್ತು ಶಾಲಾ ತೊರೆಯುವಿಕೆ
ಬಲಿಷ್ಠ ಕರ್ನಾಟಕಕ್ಕಾಗಿ 9 ಸಂಕಲ್ಪಗಳು
1. ಆರೋಗ್ಯ
ಕೈಗೆಟುಕುವ ಸುಲಭದ ಮತ್ತು ಅತ್ಯಾಧುನಿಕ ಆರೋಗ್ಯ ಮತ್ತು ಚಿಕಿತ್ಸಾ ವ್ಯವಸ್ಥೆ
ಆರೋಗ್ಯ ಮೂಲಭೂತ ಸೌಕರ್ಯ ಸೃಷ್ಟಿಸುವುದು
ಮುಖ್ಯಮಂತ್ರಿಗಳ ಹೊಸ ವಿಮಾ ಯೋಜನೆ
ಆರೋಗ್ಯ ಪ್ರವಾಸೋದ್ಯಮ ಬೆಳವಣಿಗೆಗಾಗಿ ಮೆಡಿಸಿಟಿ ನಿರ್ಮಾಣ ಇದನ್ನೂ ಓದಿ: ಕರ್ನಾಟಕದ ‘ಗ್ಯಾರಂಟಿ’ ಮಾದರಿ ದೇಶದ ಎಲ್ಲೆಲ್ಲೂ ಇದೆ: ಸಿಎಂ ಡಿಕೆಶಿ ಬಣ್ಣನೆ

2. ಶಿಕ್ಷಣ
ಶಿಕ್ಷಣ ಪುನಶ್ಚೇತನ
ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುನಶ್ಚೇತನಗೊಳಿಸಲಾಗುವುದು
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ
ಕೈಗೆಟುಕುವ ದರದಲ್ಲಿ ಶಿಕ್ಷಣ
ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಸಾರ್ವಜನಿಕ ಶಿಕ್ಷಣಕ್ಕೆ ಆದ್ಯತೆ
3. ಜಲ ಭದ್ರತೆ
ಕರ್ನಾಟಕದ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವುದು
ಮೇಕೆದಾಟು ಯೋಜನೆ ಜಾರಿಗೆ ವೇಗ, ಕೃಷ್ಣ ಮೇಲ್ದಂಡೆ ಯೋಜನೆಗೆ ವೇಗ ನೀಡುವುದು
ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಪೂರ್ಣಗೊಳಿಸುವಿಕೆ
ರಾಜ್ಯಾದ್ಯಂತ ಜಲಮೂಲಗಳ ಪುನಶ್ಚೇತನ
4. ಹೂಡಿಕೆ ಮತ್ತು ಆರ್ಥಿಕ ಬಲ
ಹೆಚ್ಚು ಹೂಡಿಕೆ ಮಾಡಿ, ಹೆಚ್ಚು ಗಳಿಸಿ
ಜಾಗತಿಕ ಹೂಡಿಕೆ ಮತ್ತು ಅನಿವಾಸಿ ಭಾರತೀಯರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದೆ
ಹೊಸ ಇಲಾಖೆ C&I ಮತ್ತು ITBT ಜೊತೆಗೂಡಿ 3 ಲಕ್ಷ ಕೋಟಿ ರೂ. ಹೊಸ ಹೂಡಿಕೆಯ ಆಕರ್ಷಣೆ
ಆದಾಯ-ಉಳಿತಾಯದ ಕರ್ನಾಟಕದತ್ತ ಕಾರ್ಯನಿರ್ವಹಣೆ
5. ಬೆಂಗಳೂರು
ಐದು ಹೊಸ ಲಾಲ್‌ಬಾಗ್‌ಗಳು ಮತ್ತು ಏಳು ಕೆರೆಗಳ ಪುನಶ್ಚೇತನ:
ಬೆಂಗಳೂರಿನಲ್ಲಿ ಲಾಲ್‌ಬಾಗ್‌ನಷ್ಟೇ ದೊಡ್ಡದಾದ 5 ಹೊಸ ಹಸಿರು ತಾಣಗಳ ನಿರ್ಮಾಣ
ಬೆಂಗಳೂರಿನ 7 ಕೆರೆಗಳಿಗೆ ಹೊಸ ಜೀವ ತುಂಬುವುದು
6. ಪ್ರಾದೇಶಿಕ ಸಮತೋಲನ
ಐದು ಮಹಾನಗರಗಳು
ಬೆಂಗಳೂರಿನ ಆಚೆಗೂ ಬೆಳವಣಿಗೆಗೆ ಚಾಲನೆ ನೀಡಲಿರುವ 5 ಹೊಸ ಪ್ರಮುಖ ನಗರಗಳು
7. ಸಾಮಾಜಿಕ ನ್ಯಾಯ
ನಿರಾಶ್ರಿತರಿಗೆ ಭೂಮಿ:
ರಾಜ್ಯದಲ್ಲಿ ವಸತಿ ಹೀನರಿಗೆ 5 ಲಕ್ಷ ನಿವೇಶನ ಹಂಚಿಕೆ
8. ಬಂಡವಾಳ ಹೂಡಿಕೆ
ಬಿಲ್ಡ್ ಕರ್ನಾಟಕ
ಕರ್ನಾಟಕದ ಬೆಳವಣಿಗೆಯನ್ನು ಬಲಪಡಿಸಲು, ವಿವಿಧ ವಲಯಗಳಲ್ಲಿ ಮೂಲಸೌಕರ್ಯ ಮತ್ತು ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಿನ 500 ದಿನಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ
9. ಉದ್ಯೋಗಗಳು ಮತ್ತು ಡಿಜಿಟಲ್ ಆಡಳಿತ
ಉದ್ಯೋಗ – ಸಾಧನೆ – ಭವಿಷ್ಯ
ರಾಜ್ಯಾದ್ಯಂತ ಒಂದು ಲಕ್ಷ ಸರ್ಕಾರಿ ನೇಮಕಾತಿಗಳು ಮತ್ತು 5 ಲಕ್ಷ ಖಾಸಗಿ ಉದ್ಯೋಗಗಳ ಸೃಷ್ಟಿ
ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ

