– ಇದು ಡಿ.ಕೆ.ಶಿವಕುಮಾರ್ ಸರ್ಕಾರ ಅಲ್ಲ, 7 ಕೋಟಿ ಜನತೆಯ ಸರ್ಕಾರ ಎಂದ ಸಿಎಂ
– ಹೊಸ ಯೋಜನೆಗಳಿಗೆ ಸಿಎಂ ಚಾಲನೆ
ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ ಮಂತ್ರಿ, ವಿಪಕ್ಷಗಳು ಟೀಕಿಸಿದ್ದರು. ಈಗ ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ. ವಿಶ್ವದ ಅನೇಕ ದೇಶಗಳು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ತಮ್ಮ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಶತದಿನೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು, ಇದು ನೂರು ದಿನಗಳ ಆಚರಣೆ ಅಲ್ಲ. ಇದು ಡಿ.ಕೆ.ಶಿವಕುಮಾರ್ ಸರ್ಕಾರ ಅಲ್ಲ. ಇದು ನಿಮ್ಮ ಸರ್ಕಾರ. 7 ಕೋಟಿ ಜನತೆಯ ಸರ್ಕಾರ ಇದು. ನಾನೊಬ್ಬನೇ ರಥ ಎಳೆಯುತ್ತಿಲ್ಲ. ಈ ಸರ್ಕಾರ ಅನೇಕ ಆಲೋಚನೆ ಮಾಡ್ತಿದೆ. ಶತಕತದ ಪಥದಲ್ಲಿ ಕರ್ನಾಟಕ ಹೆಜ್ಜೆ ಹಾಕ್ತಿದೆ. ನಾಡಿನ ಜನರ ಶ್ರಮ, ಯವಕರ ಕನಸು ಕರ್ನಾಟಕದ ಪ್ರಗತಿ.
ಎಲ್ಲಾ ಸಚಿವರು, 224 ಶಾಸಕರು, 75 MLC, 12 ರಾಜ್ಯಸಭೆ, 28 ಲೋಕಸಭೆ ಸದಸ್ಯರು ಒಟ್ಟಾಗಿ ದುಡಿಯೋ ಕೆಲಸ ಮಾಡ್ತಿದೆ. ಯಾರು ಸಹಕಾರ ಕೊಡ್ತಾರೆ ಮುಖ್ಯ ಅಲ್ಲ. ನಾವೆಲ್ಲರೂ ಒಟ್ಟಾಗಿ ನಾಡಿನ, ದೇಶದ ಹಿತಕ್ಕಾಗಿ ಸಂವಿಧಾನಬದ್ಧವಾಗಿ ಕೆಲಸ ಮಾಡ್ತೀವಿ. ರಾಗ, ದ್ವೇಷ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದರು.
ಜನರ ಜೀವನಕ್ಕೆ ಗ್ಯಾರಂಟಿಗೆ 1,45,416 ಕೋಟಿ ಹಣ ಕೊಡಲಾಗಿದೆ. ಜಗತ್ತಿನ ಅತಿ ದೊಡ್ಡ ಯೋಜನೆ. ಗ್ಯಾರಂಟಿ ಮಾಡಲು ಆಗೊಲ್ಲ ಅಂದ್ರು. ನಾವು ಸಾಧನೆ ಮಾಡಿದ್ದೇವೆ. ಜನರಿಗೆ ಗ್ಯಾರಂಟಿ ಕೊಟ್ಟಿದ್ದೇವೆ. ಗೃಹಲಕ್ಷ್ಮಿಯಿಂದ 1.24 ಕೋಟಿ ಮಹಿಳೆಯರಿಗೆ ಹಣ ಸಿಕ್ಕಿದೆ. ಪ್ರತಿ ಮಹಿಳೆಗೆ 66 ಸಾವಿರ ಹಣ ಸಿಕ್ಕಿದೆ. ಗೃಹಜ್ಯೋತಿ ಸೌಲಭ್ಯವನ್ನು 1.67 ಕೋಟಿ ಜನರಿಗೆ ಕೊಡಲಾಗಿದೆ. 30,522 ಕೋಟಿ ಖರ್ಚು ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದರು.
ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು 4.44 ಕೋಟಿ ಜನರಿಗೆ ಕೊಡಲಾಗಿದೆ. ಅದಕ್ಕಾಗಿ 21,054 ಕೋಟಿ ಖರ್ಚು ಮಾಡಲಾಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟು ಹಸಿವು ಮುಕ್ತ ರಾಜ್ಯ ಮಾಡಿದ್ದೇವೆ. ಶಕ್ತಿ ಯೋಜನೆಯಿಂದ 821 ಕೋಟಿ ಫ್ರೀ ಬಸ್ ಟ್ರಿಪ್ ಮಾಡಲಾಗಿದೆ. 15,735 ಕೋಟಿ ರೂ. ಖರ್ಚು ಮಾಡಲಾಗಿದೆ. ಕ್ಯಾಬಿನೆಟ್‌ನಲ್ಲಿ ಶಕ್ತಿಗೆ ಸ್ಮಾರ್ಟ್ ಕೊಡುವ ನಿರ್ಧಾರ ಮಾಡಲಾಗಿದೆ. 3.72 ಲಕ್ಷ ಯುವಕರಿಗೆ ಯುವನಿಧಿ ಯೋಜನೆ ಕೊಡಲಾಗಿದೆ. 1154 ಕೋಟಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ರಾಷ್ಟ್ರಗೀತೆಯಿಂದ ಹಿಡಿದು ಅನೇಕ ಕೆಲಸ ಮಾಡಿದೆ. ಇದನ್ನ ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಗ್ಯಾರಂಟಿ ಜಾರಿ ಮಾಡಲು ಆಗೊಲ್ಲ ಅಂತ ಪ್ರಧಾನಿ, ವಿಪಕ್ಷಗಳು ಹೇಳಿದರು. ಈಗ ಕರ್ನಾಟಕದ ಮಾಡೆಲ್ ಎಲ್ಲೆಲ್ಲೂ ಇದೆ. ವಿಶ್ವದ ಅನೇಕ ದೇಶಗಳು ಒಪ್ಪಿವೆ. 25,652 ಕೋಟಿ ಶೂನ್ಯಬಡ್ಡಿಯಲ್ಲಿ ರೈತರಿಗೆ ಕೊಡಲಾಗಿದೆ. ನೀರಾವರಿ ಯೋಜನೆಗೆ 17 ಸಾವಿರ ಕೋಟಿ ನೀಡಲಾಗಿದೆ. 121 ಪ್ರಾಜೆಕ್ಟ್ ಮಾಡಲಾಗಿದೆ. 5 ಸಾವಿರ ಕೋಟಿ KKRDBಗೆ ಕೊಡಲಾಗಿದೆ ಎಂದು ವಿವರಿಸಿದರು.
ಗೃಹ ಆರೋಗ್ಯದಡಿ ಮನೆ ಮನೆಯಲ್ಲಿ 88 ಲಕ್ಷ ಮಂದಿ ತಪಾಸಣೆ ಆಗಿದೆ. ಹೃದಯ ಜ್ಯೋತಿ 21,658 ಸಾವಿರ ಕೇಸ್ ನೋಡಿದ್ದೇವೆ. 6 ದಿನ ಮಕ್ಕಳಿಗೆ ಮೊಟ್ಟೆ ಕೊಡಲಾಗ್ತಿದೆ. 2023 ರಿಂದ 2.53 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬಂದಿದೆ. FDIನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. 10 ಸಾವಿರ ಭಾರತ್ ಜೋಡೊ ಸಂಘ ಸ್ಥಾಪನೆ ಮಾಡಲಾಗಿದೆ. 2400 ಚದರ ಅಡಿ ಮತ್ತು ಅದಕ್ಕಿಂತ ವಿಸ್ತೀರ್ಣ ಮನೆಗೆ OC-CC ನೀಡಲಾಗಿದೆ. ಬೆಂಗಳೂರು ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ. ಬಿ ಖಾತೆಯಿಂದ ಎ ಖಾತಾ ನೀಡುತ್ತಿದ್ದೇವೆ. ವಿಶೇಷ ರೌಡಿ ನಿಗ್ರಹ ದಳ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಭಯ ಮುಕ್ತ ಕರ್ನಾಟಕ ನಿರ್ಮಾಣ ಮಾಡಿದ್ದೇವೆ. ದಕ್ಷಿಣ ಭಾರತಕ್ಕೆ ಕರ್ನಾಟಕ ಧ್ವನಿಯಾಗಿ ಕೆಲಸ ಮಾಡ್ತಿದೆ. ತುಂಗಭದ್ರಾ ಗೇಟ್ ಸರಿ ಮಾಡಿದ್ವಿ. 3 ರಾಜ್ಯದ ಸಿಎಂ ಬಂದರು. ಕೇಂದ್ರದ ಸಚಿವರ ಜೊತೆ ಮಾತಾಡಿದ್ದೇವೆ. ವಿಪಕ್ಷಗಳು ಆಗೊಲ್ಲ ಅಂತ ಟೀಕೆ ಮಾಡ್ತಾ ಇದ್ದರು. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ನಮ್ಮ ಸಾಧನೆ ಸಮರ್ಥಿಸಿಕೊಂಡರು.

