Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಾದೇಶಿಕ ಪಕ್ಷ ಕಟ್ಟಿ, 10 ಸ್ಥಾನ ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಹೆಚ್‍ಡಿಕೆ ಸವಾಲ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪ್ರಾದೇಶಿಕ ಪಕ್ಷ ಕಟ್ಟಿ, 10 ಸ್ಥಾನ ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಹೆಚ್‍ಡಿಕೆ ಸವಾಲ್

Bengaluru City

ಪ್ರಾದೇಶಿಕ ಪಕ್ಷ ಕಟ್ಟಿ, 10 ಸ್ಥಾನ ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಹೆಚ್‍ಡಿಕೆ ಸವಾಲ್

Public TV
Last updated: December 19, 2020 11:54 am
Public TV
Share
3 Min Read
hdk siddu
SHARE

– ಸಿದ್ದರಾಮಯ್ಯ ರಾಜಕೀಯ ಒಳಒಪ್ಪಂದಗಳ ಜನಕ

ಬೆಂಗಳೂರು: ಚಾಮುಂಡೇಶ್ವರಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಾದೇಶಿಕ ಪಕ್ಷ ಕಟ್ಟಿ, 10 ಸ್ಥಾನ ಗೆದ್ದು ತೋರಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಸಾಲು ಸಾಲು ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯನವರ ಆರೋಪಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ..

ಸಿದ್ದರಾಮಯ್ಯನವರೇ ದ್ವಂದ್ವ ಯಾಕೆ?: ಸಿದ್ದರಾಮಯ್ಯ ಅವರ ಉಡಾಫೆ ಮಾತುಗಳಿಗೆ ಪ್ರತಿಕ್ರಿಯಿಸಬಾರದೆಂದು ಇಚ್ಚಿಸಿದ್ದೆ. ಆದರೆ, ಚಾಮುಂಡೇಶ್ವರಿಯಲ್ಲಿನ ಭಾಷಣದಿಂದ ಹೊಮ್ಮಿರುವ ಅವರ ದ್ವಂದ್ವ ನಿಲುವಿನ ಬಗ್ಗೆ ಮಾತಾಡಬೇಕಿದೆ. ಅಲ್ಲಿ ಅವರು ಏನಾದರೂ ಹೇಳಿರಲಿ. ಅದರೆ, ಒಳಒಪ್ಪಂದದ ಆರೋಪ, ಕುಮಾರಸ್ವಾಮಿಯನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ದ್ವಂದ್ವದ ಬಗ್ಗೆ ಮಾತಾಡುವೆ.

HDK SIDDU

ಚಾಮುಂಡೇಶ್ವರಿಯಲ್ಲಿ ಜೆಡಿಎಸ್-ಬಿಜೆಪಿ ಒಳಒಪ್ಪಂದ ಮಾಡಿಕೊಂಡವು, ಅದರಲ್ಲಿ ಕಾಂಗ್ರೆಸ್ಸಿಗರೂ ಸೇರಿದರು, ಬಾದಾಮಿಯಲ್ಲಿ ಗೆಲ್ಲದೇ ಹೋಗಿದ್ದರೆ ಭವಿಷ್ಯ ಕತ್ತಲಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೆ ಒಪ್ಪಂದವಾಗಿದ್ದರೆ, ಅದು ಬಾದಾಮಿಗೂ ಅನ್ವಯಿಸುತ್ತಿರಲಿಲ್ಲವೇ? ಬಾದಾಮಿಯಲ್ಲಿ ಅವರನ್ನು ಗೆಲ್ಲಲು ಬಿಡುತ್ತಿದ್ದೆವೆ?

2009-2010ರ 20 ಉಪಚುನಾವಣೆಗಳನ್ನು ಸಿದ್ದರಾಮಯ್ಯ ಒಮ್ಮೆ ಪರಾಮರ್ಶೆ ಮಾಡಲಿ. ಆ ಹೊತ್ತಿನಲ್ಲಿ ತಮ್ಮನ್ನು ಕಾಂಗ್ರೆಸ್ ಕಡೆಗಣಿಸಿತ್ತು ಎಂಬ ಕಾರಣಕ್ಕೆ ಅವರು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಅವರ ಆತ್ಮ ನೆನಪಿಸುತ್ತದೆ. ಅದರ ಪರಿಣಾಮವಾಗಿ ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿತ್ತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ.

siddu hdk

2013ರ ಚುನಾವಣೆಯತ್ತ ಅವರು ಒಮ್ಮೆ ನೋಡಲಿ. ಆಗ ಅವರು ಯಾರನ್ನೆಲ್ಲ ಸೋಲಿಸಿದ್ದರು, ಕೊರಟಗೆರೆಯಲ್ಲಿ ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡು, ಯಾರ ಭವಿಷ್ಯವನ್ನು ಕತ್ತಲಲ್ಲಿಟ್ಟಿದ್ದರು ಎಂಬುದನ್ನು ಮನನ ಮಾಡಿಕೊಳ್ಳಲಿ. 2013ರ ಚುನಾವಣೆಯನ್ನು ಪರಾಮರ್ಶಿಸಿದರೆ, ಪಕ್ಷದ್ರೋಹದ ಆಧಾರದ ಮೇಲೆ ಅವರು ಕಾಂಗ್ರೆಸ್ ಬಿಡಬೇಕು! ಇದು ಅವರ ದ್ವಂದ್ವ

ನನ್ನನ್ನು ಸೋಲಿಸಿದವರು, ಆತ್ಮವಿಮರ್ಶೆ ಮಾಡಿಕೊಂಡು ತಾವೇ ಪಕ್ಷಬಿಟ್ಟು ಹೋಗಬೇಕು ಎಂದು ಹೇಳಿದ್ದೀರಿ. 2009-10ರ ಉಪಚುನಾವಣೆ, 2013ರ ಚುನಾವಣೆಗಳಲ್ಲಿ ಒಳ ಒಪ್ಪಂದ ಮಾಡಿಕೊಂಡ ನಿಮ್ಮ ಆತ್ಮವಿಮರ್ಶೆ ಯಾವಾಗ? ಕಾಂಗ್ರೆಸ್ ಬಿಡುವುದು ಯಾವಾಗ? ಈಗಾಗಲೇ ಒಂದು ಬಾರಿ ತಾಯಿಯಂಥ ಪಕ್ಷಕ್ಕೆ ದ್ರೋಹ ಮಾಡಿದ ನಿಮ್ಮ ಉತ್ತರ ಕೇಳಲು ಕಾತುರನಾಗಿದ್ದೇನೆ.

images 3

2018ರಲ್ಲಿ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಹೈಕಮಾಂಡ್‍ನ ನಿರ್ಧಾರವಾಗಿತ್ತು ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಭಾಷಣದ ವೇಳೆ, ನಾನು ಒಪ್ಪದೇ ಹೋಗಿದ್ದಿದ್ದರೆ ಕುಮಾರಸ್ವಾಮಿ ಅವರನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ. ಇಲ್ಲಿ ದ್ವಂದ್ವ ಇಲ್ಲವೇ?

ಕಪಟ ನೀತಿ: ಮೈತ್ರಿ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಸಿದ್ದವನದಲ್ಲಿ ಕುಳಿತು ಸರ್ಕಾರ ಬೀಳಿಸುವ ಚರ್ಚೆ ನಡೆಸಿದವರು ಸಿದ್ದರಾಮಯ್ಯ ಅಲ್ಲವೇ? ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿದ ಶಾಸಕರಲ್ಲಿ ಬಹುತೇಕರು ಅವರ ಬೆಂಬಲಿಗರಾಗಿರಲಿಲ್ಲವೇ? ಆದರೂ, ಸರ್ಕಾರ ಬೀಳಿಸಿದ್ದರ ಅಪವಾದದಿಂದ ಪಾರಾಗಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಇದು ಅವರ ಕಪಟ ನೀತಿ.

Siddu HDK Meeting 2

ಕುಮಾರಸ್ವಾಮಿ ಸಿಎಂ ಆಗಿ ಕಚೇರಿಗೇ ಬರುತ್ತಿರಲಿಲ್ಲವಂತೆ, ತಾಜ್‍ವೆಸ್ಟ್‍ಎಂಡ್‍ನಲ್ಲಿ ಇರುತ್ತಿದ್ದರಂತೆ. ಅಹೋರಾತ್ರಿ ಜನತಾ ದರ್ಶನ ತಾಜ್‍ವೆಸ್ಟ್‍ಎಂಡ್‍ನಲ್ಲಿ ನಡೆಯುತ್ತಿತ್ತೋ? ಸಿಎಂ ಕಚೇರಿಯಲ್ಲಿ ನಡೆಯುತ್ತಿತ್ತೋ ಸಿದ್ದರಾಮಯ್ಯನವರೇ? ಬಾದಾಮಿಯಲ್ಲಿ ಈಗ ನಡೆಯುತ್ತಿರುವ 1,200 ಕೋಟಿ ಕಾಮಗಾರಿಗಳು ತಾಜ್‍ವೆಸ್ಟ್‍ಎಂಡ್‍ನದ್ದ?

ಸಿಎಂ ಸ್ಥಾನದಿಂದ ಇಳಿದ ನಂತರ ಸಿದ್ದರಾಮಯ್ಯ ಸರ್ಕಾರಿ ನಿವಾಸ ತೊರೆಯಲಿಲ್ಲ. ಆ ವಿಚಾರದಲ್ಲಿ ಕಿಂಚಿತ್ತೂ ನಾಚಿಕೆ ಪ್ರದರ್ಶಿಸಲಿಲ್ಲ. ತಾವು ಸಿಎಂ ಆಗಿದ್ದಾಗ 6 ಗಂಟೆಗೆ ಹೇಳದೇ ಕೇಳದೇ ಕಚೇರಿ ತೊರೆದು ಅಜ್ಞಾತರಾಗುತ್ತಿದ್ದ ಸಿದ್ದರಾಮಯ್ಯ, ರಾತ್ರಿ 12 ಗಂಟೆ ವರೆಗೆ ಕಚೇರಿಯಲ್ಲಿ ದುಡಿಯುತ್ತಿದ್ದ ನನ್ನ ಬಗ್ಗೆ ಮಾತನಾಡುವ ನೈತಿಕತೆ ಉಳ್ಳವರೇ?

siddu hdk

37 ಸ್ಥಾನ ಗೆದ್ದಿದ್ದ ಜೆಡಿಎಸ್‍ಗೆ ನಾವು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟೆವು ಎಂದು ಸಿದ್ದರಾಮಯ್ಯ ಪದೇ ಪದೆ ಹೇಳುತ್ತಾರೆ. ಅದು 37 ಸ್ಥಾನವಾಗಲಿ, ಅಥವಾ 100 ಸ್ಥಾನಗಳಾದರೂ ಆಗಿರಲಿ. ಅದು ಜನಾದೇಶ. ಆ ವಿಚಾರದಲ್ಲಿ ಮೂದಲಿಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಜನರ ಆಶಯ, ಅಭಿಪ್ರಾಯಗಳನ್ನು ಒಪ್ಪುವಂಥ ಮನಸ್ಥಿತಿಯೇ ಇಲ್ಲ.

ಜೆಡಿಎಸ್ ಸ್ಥಾನ ಗಳಿಕೆ, ದೇವೇಗೌಡರು, ನನ್ನ ಬಗ್ಗೆ ಅಡಿಗಡಿಗೂ ಟೀಕಿಸುವ ಸಿದ್ದರಾಮಯ್ಯರಿಗೆ ಒಂದು ಸವಾಲು. ರಾಷ್ಟ್ರೀಯ ಪಕ್ಷದ ನೆರಳಲ್ಲಿರುವ ತಾವು ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ. ನಂತರ ಜೆಡಿಎಸ್ ಸ್ಥಾನ ಗಳಿಕೆ, ನಮ್ಮ ನಾಯಕತ್ವಗಳ ಬಗ್ಗೆ ಮಾತಾಡಿ. ಆಗ ನಿಮ್ಮ ತಾಕತ್ತು ಒಪ್ಪೋಣ

ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ. ಇನ್ನೆಂದು ಜೆಡಿಎಸ್‍ನ ಸ್ಥಾನ ಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ.

TAGGED:congressh d kumaraswamyjdsPublic TVSiddramaiahಕಾಂಗ್ರೆಸ್ಜೆಡಿಎಸ್ಪಬ್ಲಿಕ್ ಟಿವಿಸಿದ್ದರಾಮಯ್ಯಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

daily horoscope dina bhavishya
Astrology

ದಿನ ಭವಿಷ್ಯ 30-04-2026

Public TV
By Public TV
17 minutes ago
Bengaluru Rains 1
Bengaluru City

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

Public TV
By Public TV
7 hours ago
pm modi meeting
Bengaluru City

ಬೆಂಗಳೂರಲ್ಲಿ ಬೌರಿಂಗ್‌ ಆಸ್ಪತ್ರೆ ಗೋಡೆ ಕುಸಿದು 7 ಜನ ಸಾವು: ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ

Public TV
By Public TV
7 hours ago
Sunrisers Hyderabad 2
Cricket

ವಾಂಖೆಡೆಯಲ್ಲಿ ಮುಂಬೈ ಹುರಿದು ಮುಕ್ಕಿದ ಸನ್‌ ರೈಸರ್ಸ್‌ – ಹೈದ್ರಾಬಾದ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

Public TV
By Public TV
8 hours ago
COURT
Court

ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ – ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ

Public TV
By Public TV
8 hours ago
udupi accident
Latest

ಉಡುಪಿ| ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಬಸ್ ಡಿಕ್ಕಿ – ಮೂರು ಮಂದಿ ದುರ್ಮರಣ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?