Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ

Karnataka

ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ

Public TV
Last updated: February 28, 2021 10:19 pm
Public TV
Share
3 Min Read
ashwathnarayan
SHARE

– ಕೇರಳಿಗರೊಂದಿಗೆ ಡಿಸಿಎಂ ಸಂವಾದ

ಬೆಂಗಳೂರು: ಉದ್ಯಮಶೀಲತೆ ಹಾಗೂ ಸೃಜನಶೀಲತೆಗೆ ಹೆಸರಾದ ಕೇರಳವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದೆಬಿದ್ದಿದೆ. ಇದಕ್ಕೆ ಕಾರಣ ಈವರೆಗೂ ಆಡಳಿತ ನಡೆಸಿದ ಎಲ್‍ಡಿಎಫ್-ಯುಡಿಎಫ್ ಒಕ್ಕೂಟಗಳ ದುರಾಡಳಿತವೇ ಕಾರಣ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಟೀಕಿಸಿದರು.

ashwathnarayan 1

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಸಮಾನ ಮನಸ್ಕರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಸುಂದರ ಕರಾವಳಿ ಹಾಗೂ ಸಮೃದ್ಧ ಪ್ರಾಕೃತಿಕ ಸಂಪತ್ತು ಇದ್ದರೂ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್‍ಡಿಎಫ್ ಮತ್ತು ಯುಡಿಎಫ್ ಕೂಟಗಳು ವಿಫಲವಾಗಿವೆ ಎಂದರು.

ರಾಜಕೀಯಕ್ಕೆ ಮಾತ್ರ ಸೀಮಿತ:
ರಾಜ್ಯದ ಜನತೆಯ ನಿರೀಕ್ಷೆಗಳೇನು? ಇತರೆ ರಾಜ್ಯಗಳು ಯಾವ ರೀತಿಯಲ್ಲಿ ಮುನ್ನಡೆ ಸಾಧಿಸುತ್ತಿವೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಗತಿ ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಲ್‍ಡಿಎಫ್ ಸರಕಾರಕ್ಕೆ ಸಾಧ್ಯವಾಗಿಲ್ಲ ಯಾಕೆಂದರೆ, ಎಡಪಕ್ಷಗಳಿಗೆ ಯಾವುದೇ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿ ರಾಜ್ಯವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿದ್ದು, ಕಳೆದ 73 ವರ್ಷಗಳಿಂದ ಕೇರಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಭಿವೃದ್ಧಿಯನ್ನು ಕಡೆಗಣಿಸಿವೆ. ಒಂದಾದ ಮೇಲೆ ಒಂದರಂತೆ ರಾಜ್ಯವನ್ನು ಇಷ್ಟ ಬಂದಂತೆ ಆಳಿದ ಈ ಪಕ್ಷಗಳು ಜನರ ನಂಬಿಕೆ, ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲಸ ಮಾಡಿದೆ ಎಂದು ದೂರಿದರು.
Kerala

ಉದ್ಯೋಗ ಸೃಷ್ಟಿಯಲ್ಲಿ ಹಿಂದೆ:
ರಾಜ್ಯದ ಜಿಡಿಪಿ ಎಷ್ಟು? ಕೈಗಾರಿಕೆಗಳು ಎಷ್ಟು ಬಂದಿವೆ? ಉತ್ಪಾದನೆ- ಉದ್ಯೋಗವೆಷ್ಟು? ಎಂಬ ವಿಷಯಗಳ ಬಗ್ಗೆ ಎಲ್‍ಡಿಎಫ್ ಸರಕಾರ ಮಾತನಾಡುತ್ತಿಲ್ಲ. ತ್ರಿಪುರಾ, ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಎಡಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ಕೇರಳದಲ್ಲೂ ಈ ಚುನಾವಣೆಯಲ್ಲಿ ಜನರು ಅದೇ ಕೆಲಸ ಮಾಡಲಿದ್ದಾರೆ. ದೇವರನಾಡಿನಲ್ಲಿ ಈ ಸಲ ಹೊಸಗಾಳಿ ಬೀಸುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಅಭಿಪ್ರಾಯಪಟ್ಟರು.

ಕೇರಳದಲ್ಲಿರುವ ಹೊಸ ತಲೆಮಾರಿನ ಯುವಜನರು ಈಗ ಬದಲಾವಣೆ ಬಯಸುತ್ತಿದ್ದಾರೆ. ಅವರಿಗೆ ಗೊತ್ತಿದೆ, ಕಳೆದ ಏಳು ದಶಕಗಳಲ್ಲಿ ಕೇರಳದಲ್ಲಿ ಪ್ರಗತಿ ಆಗಿಲ್ಲ ಎಂದು. ಉದ್ಯೋಗ ಸೃಷ್ಟಿಯಲ್ಲಿ ಇಡೀ ದೇಶದಲ್ಲಿಯೇ ಕೇರಳ ಹಿಂದೆ ಬಿದ್ದಿದೆ. ಇನ್ನು ರಾಜಕೀಯವಾಗಿಯೂ ಎಡಪಕ್ಷಗಳಿಗೆ ಹಾಗೂ ಕಾಂಗ್ರೆಸ್‍ಗೆ ಉತ್ತಮ ನಾಯಕತ್ವ ಇಲ್ಲ. ಬಿಜೆಪಿ ಬಲಿಷ್ಠ ನಾಯಕತ್ವ ಹೊಂದಿರುವ ಸಶಕ್ತ ಪಕ್ಷ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಇಂಥ ಸಂದರ್ಭದಲ್ಲಿ ಹೊಸ ಆಲೋಚನೆಗಳುಳ್ಳ ಬಿಜೆಪಿಗೆ ಅವಕಾಶ ಕೊಟ್ಟು ಎಲ್‍ಡಿಎಫ್-ಯುಡಿಎಫ್ ಕೂಟಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

kerala cm

ಪ್ರಗತಿಗೆ ಬಿಜೆಪಿ ಮಾತ್ರ ಆಯ್ಕೆ:
ಕೇರಳದಲ್ಲಿ ರಾಜಕಾರಣ ನಿಂತ ನೀರಾಗಿದೆ. ಹೊಸತನದ ದೂರದೃಷ್ಟಿ ಇಲ್ಲದ ರಾಜಕೀಯ ವ್ಯವಸ್ಥೆ ಅಲ್ಲಿದೆ. ಅಲ್ಲೊಂದು ಹೊಸ ಪಕ್ಷ ಆಡಳಿತಕ್ಕೆ ಬರದೇ ಹೋದರೆ ಕೇರಳ ಮತ್ತೆ ಹಿಂದಕ್ಕೆ ಹೋಗುತ್ತದೆ. ಗೆದ್ದೆವು, ಸರಕಾರ ಮಾಡಿದೆವು ಎಂಬುದಷ್ಟೇ ಸಾಲದು. ಗುಣಾತ್ಮಕವಾದ ಬದಲಾವಣೆ ತರಬೇಕು. ಅಪಾಯದ ವಿರುದ್ಧ ಸುಲಭವಾದ ಸುಧಾರಣೆಗಳನ್ನು ಕೈಗೊಳ್ಳಬೇಕು. ಸವಾಲುಗಳನ್ನು ಗೆಲ್ಲಬೇಕು. ಕೇರಳದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿಗೆ ಅವಕಾಶ ಕೊಡಬೇಕು. ಪ್ರಗತಿ ಎಂದರೆ ಬಿಜೆಪಿ ಮಾತ್ರ ಆಯ್ಕೆ, ಪರಿಹಾರವೂ ಹೌದು. ಕೌಟುಂಬಿಕ, ಅನುವಂಶೀಯ ಆಡಳಿತಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವೇ ಇಲ್ಲದ ಏಕೈಕ ಪಕ್ಷ ಬಿಜೆಪಿ ಎಂದು ನುಡಿದರು.

ಬೆಂಗಳೂರು ನಗರವನ್ನು ಗಮನಿಸಿ:
ಬಿಜೆಪಿ ಸರಕಾರ ಬಂದ ಮೇಲೆ ಬೆಂಗಳೂರು ಯಾವ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರ ಬರುವ ತನಕ ಮಹಾರಾಜರ ರೀತಿಯ ಆಳ್ವಿಕೆ ಇತ್ತು. ಆದರೆ ನಮ್ಮ ಪಕ್ಷ ಬಂದ ಮೇಲೆ ಅದೆಲ್ಲವನ್ನೂ ತೊಡೆದು ಹಾಕಲಾಯಿತು. ಸಕಾರಾತ್ಮಕ ಚಿಂತನೆ, ಗುಣಾತ್ಮಕ ಬದಲಾವಣೆ ಮಾತ್ರ ನಮ್ಮ ಅಜೆಂಡಾ ಆಗಿತ್ತು. ಹೀಗಾಗಿ ಬೆಂಗಳೂರು ಮತ್ತಷ್ಟು ಹುರುಪಿನಿಂದ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

Kerala BJP Election 1

ಬೆಂಗಳೂರಿನಲ್ಲಿ ಇರುವ ಕೇರಳ ಮೂಲದ ಪ್ರಮುಖರಾದ ಗೋಪಿನಾಥನ್, ರಾಜಾಗೋಪಾಲ, ಸುದೀಶ್, ರೇಜಿಕುಮಾರ್, ಸ್ಯಾನ್ ಫಿಲಿಪ್ಸ್, ಅನೀಸ್ ಅಂಥೋಣಿ ಮತ್ತಿತರರು ಸಂವಾದದಲ್ಲಿ ಹಾಜರಿದ್ದರು.

TAGGED:Ashwath NarayanBangalorePublic TVಅಶ್ವತ್ಥ ನಾರಾಯಣಕೇರಳಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
12 minutes ago
DK Shivakumar 1 1
Latest

ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Public TV
By Public TV
16 minutes ago
SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
42 minutes ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
1 hour ago
Raichur 1
Districts

ರಾಯಚೂರಿನಲ್ಲಿ ಬಿಸಿಲಿನ ಬೇಗೆ – 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

Public TV
By Public TV
2 hours ago
Vinay Kulkarni 1 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?