ಕೋಲಾರ: ಕುರಿ (Sheep) ಕದಿಯಲು ಹೋಗಿ ಸಿಕ್ಕಿಬಿದ್ದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ಗಡಿ ಗ್ರಾಮ ಎಬ್ಬರಿಯಲ್ಲಿ ನಡೆದಿದೆ.
ಕದಿಯಲು ತೆರಳಿದ್ದ ಮೂವರ ಪೈಕಿ ಓರ್ವ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ಯುವಕರು ಪರಾರಿಯಾಗಿದ್ದಾರೆ. ವೆಪನಪಲ್ಲಿ ಪೊಲೀಸರು ಇನ್ನಿಬ್ಬರಿಗಾಗಿ ತಲಾಷ್ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯನ್ನು ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಒಂದೇ ದಿನದ ಮಳೆಗೆ ಉಕ್ಕಿ ಹರಿದ ಭದ್ರೆ – ನಿನ್ನೆ ಯುವಕರು ಆಟ ಆಡಿದ್ದ ಜಾಗದಲ್ಲಿಂದು ನದಿಯ ರೌದ್ರ ನರ್ತನ
ಪೊಲೀಸರ ಮಾಹಿತಿ ಪ್ರಕಾರ, ರಾಘವೇಂದ್ರ ತನ್ನ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ಎಬ್ಬಿರಿ ಗ್ರಾಮಕ್ಕೆ ತೆರಳಿ, ಗ್ರಾಮದ ಸುಂದರಪ್ಪ ಅವರಿಗೆ ಸೇರಿದ ಕುರಿಗಳ ಹಟ್ಟಿಯಿಂದ ಕುರಿಗಳನ್ನು ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹಟ್ಟಿಯಲ್ಲೇ ಮಲಗಿದ್ದ ಸುಂದರಪ್ಪ ಎಚ್ಚರಗೊಂಡು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ರಾಘವೇಂದ್ರನನ್ನು ಹಿಡಿದಿದ್ದಾರೆ. ಆತನೊಂದಿಗೆ ಬಂದಿದ್ದ ಉಳಿದ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಹಾವೇರಿಯ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ: ಬೊಮ್ಮಾಯಿ
ಸಿಕ್ಕಿಬಿದ್ದ ಆರೋಪಿಯನ್ನು ಥಳಿಸಿ ಗ್ರಾಮಸ್ಥರು ವೆಪನಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಈ ಸಂಬAಧ ವೆಪನಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾವಿರಾರು ಲೀಟರ್ ಹಾಲು ತುಂಬಿದ್ದ ಟ್ಯಾಂಕರ್ ಪಲ್ಟಿ – ಹಾಲಿಗಾಗಿ ಮುಗಿಬಿದ್ದ ಜನ, ರಸ್ತೆಯಲ್ಲಿ ಹರಿದ ಕ್ಷೀರಸಾಗರ
