ನವದೆಹಲಿ: ಶೀಘ್ರವೇ ಭಾರತದ ಮಾರುಕಟ್ಟೆಗೆ ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿಯ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ ಡ್ಯುಯಲ್ ನಾನೋ ಸಿಮ್ ಫೋನ್ ಬಿಡುಗಡೆಯಾಗಲಿದೆ.
ಕ್ಸಿಯೋಮಿ ಭಾರತದ ಕಂಪನಿಯ ಮುಖ್ಯಸ್ಥ ಮನುಕುಮಾರ್ ಜೈನ್ ಟ್ವಿಟ್ಟರ್ ನಲ್ಲಿ ಈ ಫೋನ್ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ನೀಡಿದ್ದು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದನ್ನು ತಿಳಿಸಿಲ್ಲ. ಕ್ಸಿಯೋಮಿ ಕಡಿಮೆ ಬೆಲೆಯ ಫೋನ್‍ಗಳಲ್ಲಿ ನಂಬರ್ ಒನ್ ಪಟ್ಟದಲ್ಲಿ ಮುಂದುವರಿದಿದ್ದು ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಇನ್ನೂ ಮಾರುಕಟ್ಟೆಯನ್ನು ವಿಸ್ತರಿಸಿಲ್ಲ. ಈಗ ಈ ಫೋನ್ ಬಿಡುಗಡೆ ಮಾಡುವ ಮೂಲಕ ಆಪಲ್, ಸ್ಯಾಮ್‍ಸಂಗ್, ಒನ್ ಪ್ಲಸ್ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.
Advertisement
Advertisement
ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ನವೆಂಬರ್ ಎರಡನೇ ವಾರದಲ್ಲಿ ಎಂಐ ನೋಟ್ 10 ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿತ್ತು. 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 549 ಯುರೋ(ಅಂದಾಜು 43 ಸಾವಿರ ರೂ.), 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿಯ ಫೋನಿಗೆ 649 ಯುರೋ(ಅಂದಾಜು 51 ಸಾವಿರ ರೂ.) ನಿಗದಿ ಮಾಡಿದೆ. ಬಿಳಿ, ಹಸಿರು, ಕಪ್ಪು, ಬಣ್ಣದಲ್ಲಿ ಈ ಫೋನ್ ಲಭ್ಯವಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?
Advertisement
ಭಾರತದ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ಸಿಯೋಮಿ ನಂಬರ್ ಒನ್ ಪಟ್ಟದಲ್ಲಿ ಮುಂದುವರಿಯುತ್ತಿದೆ. ಮಾರುಕಟ್ಟೆ ಕ್ಸಿಯೋಮಿ ಶೇ.27 ರಷ್ಟು ಪಾಲನ್ನು ಹೊಂದಿದ್ದರೆ ಸ್ಯಾಮ್‍ಸಂಗ್ ಶೇ.18.9 ರಷ್ಟು ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದೆ. ವಿವೋ ಶೇ.15.2, ರಿಯಲ್ ಮೀ ಶೇ.14.3, ಒಪ್ಪೋ ಶೇ.11.8 ರಷ್ಟು ಪಾಲನ್ನು ಪಡೆದುಕೊಂಡಿದೆ.
Advertisement
???? ???????????????? ????????????????
???? ???? ???? ???? ????
???? ???? ???? ???? ????
???? ???? ???? ????????????????
I T'S C O M I N G #108MP
???? ???? ???? ???? ????
???? ???? ???? ???? ????
???? ???????????????? ????????????????
— Manu Kumar Jain (@manukumarjain) November 25, 2019
ಕ್ಯಾಮೆರಾ ವೈಶಿಷ್ಟ್ಯತೆ ಏನು?
ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್ ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿ ಕ್ಲಿಕ್ಕಿಸಿಲು 32 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ ಕ್ಯಾಮೆರಾದ ಜೊತೆ ವಾಟರ್ ಪ್ರೂಫ್ ನಾಚ್ ಇದೆ.
ಬಾಡಿ ಮತ್ತು ಡಿಸ್ಪ್ಲೇ:
157.8*74.2*9.7 ಮಿ.ಮೀ ಗಾತ್ರ, 208 ಗ್ರಾಂ ತೂಕ, ಹಿಂದುಗಡೆ ಮುಂದುಗಡೆ ಗ್ಲಾಸ್(ಗೊರಿಲ್ಲ ಗ್ಲಾಸ್), ಡ್ಯುಯಲ್ ಸಿಮ್, 6.47 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2340 ಪಿಕ್ಸೆಲ್, 398 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5.
Mi fans, @XiaomiIndia reigns supreme yet again! – @IDC ????
???? #1 Smartphone Brand for 2+ years
⬆️ 27.1% overall market share
⭕️ #1 Online brand for 3+ years
???? 40% Online share
✌️ 4 out of top 5 phones
???? Highest shipment = 12.6M units
Howzzat! ????#Xiaomi ❤️ #1SmartphoneBrand pic.twitter.com/XhxVWN0uKh
— Manu Kumar Jain (@manukumarjain) November 12, 2019
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 9.0 ಪೈ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್, 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿ ಅಥವಾ 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.
ಇತರೇ
ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 5260 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್