ಇಸ್ಲಾಮಾಬಾದ್: ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ (India) ಕೊಂದಿಲ್ಲ ಎಂದು ಪೇಶಾವರ್‌ನಲ್ಲಿ ಮಸೀದಿ (Peshawar Mosque) ಮೇಲೆ ನಡೆದ ಬಾಂಬ್ ದಾಳಿ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khwaja Asif) ಪ್ರತಿಕ್ರಿಯಿಸಿದ್ದಾರೆ.
ಪ್ರಾರ್ಥನೆ ಮಾಡುವಾಗ ಭಾರತದಲ್ಲಾಗಲಿ ಅಥವಾ ಇಸ್ರೇಲ್‌ನಲ್ಲಾಗಿ (Israel) ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಅದು ಪಾಕಿಸ್ತಾನದಲ್ಲಿ (Pakistan) ಸಂಭವಿಸಿದೆ ಎಂದು ಆಸಿಫ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ
Advertisement
Advertisement
2010-2017 ರ ಭಯೋತ್ಪಾದನಾ ಘಟನೆಗಳ ಕುರಿತು ಮಾತನಾಡಿದ ಸಚಿವರು, “ಈ ಯುದ್ಧವು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧಿಕಾರಾವಧಿಯಲ್ಲಿ ಸ್ವಾತ್‌ನಿಂದ ಪ್ರಾರಂಭವಾಯಿತು. ಪಿಎಂಎಲ್-ಎನ್‌ನ ಹಿಂದಿನ ಅಧಿಕಾರಾವಧಿಯಲ್ಲಿ ಮುಕ್ತಾಯಗೊಂಡಿತು. ನಂತರ ಕರಾಚಿಯಿಂದ ಸ್ವಾತ್‌ವರೆಗೆ ದೇಶದಲ್ಲಿ ಶಾಂತಿ ಸ್ಥಾಪಿಸಲಾಯಿತು” ಎಂದು ನೆನೆಪಿಸಿಕೊಂಡಿದ್ದಾರೆ.
Advertisement
ಆಫ್ಘನ್ನರು ಪಾಕಿಸ್ತಾನಕ್ಕೆ ಬಂದು ನೆಲೆಸಿದ ನಂತರ ಸಾವಿರಾರು ಜನರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ ಎಂದು ಡಾನ್ ವರದಿ ಹೇಳಿದೆ. ಪುನರ್ವಸತಿ ಸೌಲಭ್ಯದಲ್ಲಿರುವ ಜನರ ವಿರುದ್ಧ ಸ್ವಾತ್‌ನ ಜನರು ಪ್ರತಿಭಟನೆ ನಡೆಸಿದಾಗ ಈ ಸಮಸ್ಯೆಗೆ ಪುರಾವೆ ಸಿಕ್ಕಿತು ಎಂದು ಆಸಿಫ್ ತಿಳಿಸಿದ್ದಾರೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ
Advertisement
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಬೇಕು ಎಂದು ಇದೇ ವೇಳೆ ಸಚಿವರು ಕರೆ ನೀಡಿದ್ದಾರೆ. ಪೇಶಾವರ್‌ನ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ.
Live Tvpes
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k