ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಇತ್ತಂಡಗಳ ಈ ಫೈನಲ್ ಫೈಟ್ ಭಾನುವಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ.
India needs to win the World Cup Final to avoid Pat Cummins doing this to Jay Shah. pic.twitter.com/Vd99Ygvvlj
— Trendulkar (@Trendulkar) November 17, 2023
Advertisement
ಈ ನಡುವೆ 2006ರ ಚಾಂಪಿಯನ್ಸ್ ಟ್ರೋಫಿ (2006 Champions Trophy) ವೇಳೆ ಅಂದಿನ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ (Sharad Pawar) ಅವರೊಂದಿಗೆ ಆಸೀಸ್ ಕ್ರಿಕೆಟಿಗರು ನಡೆದುಕೊಂಡ ರೀತಿಯ ವೀಡಿಯೋ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಟ್ ಕಮ್ಮಿನ್ಸ್ ಜಯ್ ಶಾಗೆ ಈ ರೀತಿ ಮಾಡುವುದನ್ನು ತಪ್ಪಿಸಲು ಭಾರತ ವಿಶ್ವಕಪ್ ಫೈನಲ್‌ನಲ್ಲಿ (World Cup Final) ಗೆಲ್ಲಬೇಕಾಗಿದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಇದನ್ನೂ ಓದಿ: 1.30 ಲಕ್ಷ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್ ಕಮ್ಮಿನ್ಸ್
Advertisement
Advertisement
2006ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಗಿದ್ದೇನು?
2006ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಿತು. ಅಂದು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ ತಂಡ ಎದುರಾಳಿ ತಂಡವನ್ನು 138 ರನ್‌ಗಳಿಗೆ ಕಟ್ಟಿಹಾಕಿತು. ಆದ್ರೆ ಮಳೆ ಕಾರಣದಿಂದ ಚೇಸಿಂಗ್‌ನಲ್ಲಿದ್ದ ಆಸ್ಟ್ರೇಲಿಯಾ ಡಕ್ವರ್ತ್ ಲೂಯಿಸ್ ನಿಯಮದನ್ವಯ 35 ಓವರ್‌ಗಳಲ್ಲಿ 116 ರನ್ ಗಳಿಸುವ ಗುರಿ ಪಡೆದಿತ್ತು.
Advertisement
ಶೇನ್ ವಾಟ್ಸನ್ ಮತ್ತು ಡೇಮಿಯನ್ ಮಾರ್ಟಿನ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಆಸೀಸ್ ತಂಡವು 28.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಗೆಲುವು ಸಾಧಿಸಿತ್ತು. ಆ ನಂತರ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆಸೀಸ್ ತಂಡ ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್ ಅವರಿಗೆ ವೇದಿಕೆಯಲ್ಲಿ ಮುಜುಗರ ತರಿಸಿತ್ತು. ಅಂದಿನ ನಾಯಕ ರಿಕಿ ಪಾಂಟಿಂಗ್, ಶರದ್ ಪಾವರ್ ಅವರ ಕೈಯಲ್ಲಿದ್ದ ಟ್ರೋಫಿ ಕಸಿದುಕೊಂಡು ಅವರನ್ನು ವೇದಿಕೆಯಿಂದ ಹೊರಹೋಗುವಂತೆ ತಳ್ಳಿದ್ದರು. ಇದು ಭಾರತೀಯ ಇತರ ನಾಯಕರಿಗೂ ಮುಜುಗರ ತರಿಸಿತ್ತು. 17 ವರ್ಷಗಳ ಹಿಂದಿನ ಈ ವೀಡಿಯೋ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್ ಕಷ್ಟದ ಜೀವನ!
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಈ ರೀತಿ ಮಾಡಬಾರದು ಅಂದ್ರೆ ಭಾರತ ಟ್ರೋಫಿ ಗೆಲ್ಲಲೇಬೇಕು ಎಂದು ಅಭಿಮಾನಿಗಳು ಎಚ್ಚರಿಸಿದ್ದಾರೆ. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲೂ ಸೋಲಿನ ಮುಖವನ್ನೇ ನೋಡದ ಭಾರತ 11ನೇ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿದ್ದ ಆಸ್ಟ್ರೇಲಿಯಾ ಇನ್ನುಳಿದ 8 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಇತ್ತಂಡಗಳ ನಡುವೆ ಜಿದ್ದಾ-ಜಿದ್ದಿ ನಡೆಯಲಿದ್ದು, ಪಂದ್ಯದ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ವಿಶ್ವಕಪ್ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್
ಟೀಂ ಇಂಡಿಯಾ ಅಜೇಯ ಓಟ!
- ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
- ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
- ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
- ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
- ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
- ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
- ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
- ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು
- ಮ್ಯಾಚ್ 9: ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು
- ಮ್ಯಾಚ್ 10: ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಗೆಲುವು