ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಆರತಕ್ಷತೆಯ ಸಂಭ್ರಮದ ವಿಡಿಯೋವನ್ನು ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಾ.4ರಂದು ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಆರತಕ್ಷತೆ ನಡೆದಿತ್ತು. ಈ ವಿಡಿಯೋವನ್ನು ಹಂಚಿಕೊಂಡಿದ್ದು, ಟ್ರೆಂಡ್‌ನಲ್ಲಿರುವ ತುಳಸಿ ಹಾಡನ್ನು ಹಾಕಿ ಆರತಕ್ಷತೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಗಾಢ ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಹಾಗೂ ಪಂಚೆಯಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ.
ಇನ್ನೂ ಆರತಕ್ಷತೆಯಲ್ಲಿ ಅಲ್ಲು ಅರ್ಜುನ್, ಚಿರಂಜೀವಿ, ನಾಗಚೈತನ್ಯ, ಸ್ಯಾಂಡಲ್‌ವುಡ್‌ನ ಶ್ರೀಲೀಲಾ ಹಾಗೂ ಆಶಿಕಾ ರಂಗನಾಥ್ ಭಾಗಿಯಾಗಿದ್ದರು.

