ಅಹಮದಾಬಾದ್: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ (BCCI) ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನೂ ರೂಪಿಸಿದ್ದು, ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
It doesn’t get any bigger than this ????????
The ICC Men’s Cricket World Cup 2023 Final is filled with stellar performances and an experience of a lifetime ????️????#CWC23 pic.twitter.com/nSoIxDwXek
— BCCI (@BCCI) November 18, 2023
Advertisement
ಸೂಪರ್ ಸಂಡೇ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತ (Ind vs Aus) ನಡುವಣ ಫೈನಲ್ ಪಂದ್ಯದ ವೇಳೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಆಸೀಸ್ ಫಾರ್ಮ್ ಬಗ್ಗೆ ನೋ ಟೆನ್ಷನ್, ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತೆ: ರೋಹಿತ್ ಶರ್ಮಾ
Advertisement
ಲೋಹದ ಹಕ್ಕಿಗಳ ಕಲರವ:
ಪಂದ್ಯದ ಟಾಸ್ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರ ವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನ (Narendra Modi Stadium) ಬಾನಂಗಳದಲ್ಲಿ ಲೋಹದ ಹಕ್ಕಿಗಳು ತಮ್ಮ ಚಮತ್ಕಾರ ತೋರಿಸಲಿವೆ. ಆಗಸದಲ್ಲೇ ವಿವಿಧ ಬಣ್ಣಗಳ ಚಿತ್ತಾರ ಬಿಡಿಸಿ ಗಣ್ಯರು ಹಾಗೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಎರಡೂ ದಿನಗಳಿಂದಲೂ ರಿಹರ್ಸಲ್ ನಡೆಸಿರುವ ಸೂರ್ಯಕಿರಣ್ ತಂಡ ಫೈನಲ್ ಶೋಗೆ ಸನ್ನದ್ಧವಾಗಿದೆ.
Advertisement
Advertisement
ಡ್ರಿಂಕ್ಸ್ ಬ್ರೇಕ್ ವೇಳೆ ಸಂಗೀತ ರಸಮಂಜರಿ:
ಪಂದ್ಯದ ಮೊದಲ ಇನ್ನಿಂಗ್ಸ್‌ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ಸಿಗುವ ಸುಮಾರು 30 ನಿಮಿಷಗಳ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಇರಲಿದೆ. ಇದನ್ನೂ ಓದಿ: ವಿಶ್ವ ಮಹಾಸಮರಕ್ಕೆ ಕ್ಷಣಗಣನೆ – ಅಡಾಲಾಜ್ ಸ್ಟೆಪ್‌ವೆಲ್‌ನಲ್ಲಿ ನಾಯಕರ ಪ್ರೀ ಫೋಟೋಶೂಟ್
2ನೇ ಇನ್ನಿಂಗ್ಸ್ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋ:
ಫೈನಲ್ ಪಂದ್ಯದ 2ನೇ ಇನ್ನಿಂಗ್ಸ್‌ನ ಡ್ರಿಂಗ್ಸ್ ಬ್ರೇಕ್ ವೇಳೆ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನೆ ವೇಳೆ ಬಿಸಿಸಿಐ ಯಾವುದೇ ಸಮಾರಂಭ ಮಾಡಿರಲಿಲ್ಲ. ಇದರಿಂದ ವಿಶ್ವದ ಶ್ರೀಮಂತರ ಕ್ರಿಕೆಟ್ ಮಂಡಳಿ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿತ್ತು. ಇದನ್ನೂ ಓದಿ: 1.30 ಲಕ್ಷ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್ ಕಮ್ಮಿನ್ಸ್