ಅಹಮದಾಬಾದ್: 13ನೇ ಆವೃತ್ತಿಯ ಏಕದಿನ ವಿಶ್ವಕಪ್ (World Cup) ಟೂರ್ನಿಗೆ ಕ್ಷಣಗಣನೆ ಬಾಕಿಯಿದ್ದು, ಸೂಪರ್ ಸಂಡೇ ಕದನಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಟೀಂ ಇಂಡಿಯಾ (Team India) ತಂಡವನ್ನು ಸೋಲಿಸುವ ಎಚ್ಚರಿಕೆ ನೀಡಿದ್ದಾರೆ.
Pat Cummins …..We are the champions and we are here to beat India in finals in their home ground
We don’t care about thousands of people supporting India tomorrow…#patcummins #INDvsAUS pic.twitter.com/MlDYJkybDY
— Aayan KhaN (@_smiley_111) November 18, 2023
Advertisement
ವಿಶ್ವಕಪ್ ಪಂದ್ಯಕ್ಕೂ ಮುನ್ನ ನಡೆದ ಪ್ರೀ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿರುವ ಕಮ್ಮಿನ್ಸ್, ಫೈನಲ್ (World Cup Final) ಪಂದ್ಯದಲ್ಲಿ 1.30 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಷ್ಟೂ ಆತಿಥೇಯ ಪ್ರೇಕ್ಷಕರ ಬಾಯಿ ಮುಚ್ಚಿಸುವುದೇ ತಂಡದ ಬಹುದೊಡ್ಡ ಗುರಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ವಿಶ್ವ ಮಹಾಸಮರಕ್ಕೆ ಕ್ಷಣಗಣನೆ – ಅಡಾಲಾಜ್ ಸ್ಟೆಪ್‌ವೆಲ್‌ನಲ್ಲಿ ನಾಯಕರ ಪ್ರೀ ಫೋಟೋಶೂಟ್
Advertisement
Advertisement
ಆತಿಥೇಯರ ಎದುರು ಫೈನಲ್ ಆಡುತ್ತಿರುವ ಕಾರಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಬೆಂಬಲ ನೂರರಷ್ಟು ಆತಿಥೇಯರ ತಂಡದ ಪರವಾಗಿಯೇ ಇರಲಿದೆ. ಅಂತೆಯೇ ಈ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಜಯದ ನಾಗಾಲೋಟದಲ್ಲಿ ಫೈನಲ್‌ಗೆ ತಲುಪಿದೆ. ಸಹಜವಾಗಿಯೇ ಅಭಿಮಾನಿಗಳ ಬೆಂಬಲ ಭಾರತ ತಂಡದ ಪರವಾಗಿ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಬಾಯಿ ಮುಚ್ಚಿಸುವಂತಹ ಆಟವಾಡಿದರೆ ಅದಕ್ಕಿಂತಲೂ ತೃಪ್ತಿಕರ ಅನುಭವ ಮತ್ತೊಂದು ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ
Advertisement
ಟೀಂ ಇಂಡಿಯಾ ಇಲ್ಲಿಯವರೆಗೆ ಅಜೇಯವಾಗಿ ಉತ್ತಮ ಕ್ರಿಕೆಟ್ ಆಡುತ್ತಾ ಬಂದಿದೆ. ಆದ್ರೆ ನಾವು ಅವರಿಗೆ ಹೇಗೆ ಶಾಕ್ ನೀಡಬೇಕೆಂಬುದು ತಿಳಿದಿದೆ. ಕಳೆದ 2 ವರ್ಷಗಳಲ್ಲಿ ಅವರೊಂದಿಗೆ ಸಾಕಷ್ಟು ಬಾರಿ ಸರಣಿ ಆಡಿದ್ದೇವೆ ಎಂದು ಹೇಳಿದ್ದಾರೆ.
ಶಮಿ ದೊಡ್ಡ ಶಕ್ತಿ: ಇದೇ ವೇಳೆ ಮೊಹಮ್ಮದ್ ಶಮಿ ಬೌಲಿಂಗ್ ಪ್ರದರ್ಶನದ ಕುರಿತು ಮಾತನಾಡಿರುವ ಪ್ಯಾಟ್ ಕಮ್ಮಿನ್ಸ್, ಶಮಿ ಟೀಂ ಇಂಡಿಯಾದ ದೊಡ್ಡ ಶಕ್ತಿ ಎಂದು ಹೊಗಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲೇ ಮೊಹಮ್ಮದ್ ಶಮಿ ಒಟ್ಟು 23 ವಿಕೆಟ್‌ಗಳನ್ನ ಪಡೆದುಕೊಂಡಿದ್ದಾರೆ. ಈ ಪೈಕಿ ಒಂದೇ ವಿಶ್ವಕಪ್‌ನಲ್ಲಿ 3 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!
5 ಬಾರಿ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ 3 ವಿಕೆಟ್‌ಗಳಿಂದ ಮಣಿಸಿ ದಾಖಲೆಯ 8ನೇ ಬಾರಿ ಫೈನಲ್‌ಗೆ ಕಾಲಿಟ್ಟಿದೆ. ಇನ್ನೂ ಲೀಗ್ ಹಂತದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎದುರು ಸೋತಿದ್ದ ಆಸ್ಟ್ರೇಲಿಯಾ, ಇನ್ನುಳಿದ 7 ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಆದ್ರೆ ಆರಂಭದಿಂದಲೂ ಭಾರತ ಒಂದೂ ಪಂದ್ಯವನ್ನೂ ಸೋಲದೇ ಸತತ 10 ಪಂದ್ಯಗಳನ್ನೂ ಗೆದ್ದಿರುವ ಹಿಟ್‌ಮ್ಯಾನ್ ಸೈನ್ಯ ಫೈನಲ್ ಪಂದ್ಯವನ್ನೂ ಗೆದ್ದು ಟ್ರೋಫಿ ಎತ್ತಿ ಹಿಡಿಯುವ ಗುರಿ ಹೊಂದಿದೆ.