Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಮನಗರದ ಈ ವಾರ್ಡಿನಲ್ಲಿ ಹಸಿತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ರಾಮನಗರದ ಈ ವಾರ್ಡಿನಲ್ಲಿ ಹಸಿತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ

Districts

ರಾಮನಗರದ ಈ ವಾರ್ಡಿನಲ್ಲಿ ಹಸಿತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ

Public TV
Last updated: April 22, 2017 7:22 pm
Public TV
Share
2 Min Read
rmg bio gas power 5
SHARE

ಹನುಮಂತು ಕೆ. 

ರಾಮನಗರ: ಕಸದಿಂದ ರಸ ಎನ್ನೋದು ನಾಣ್ಣುಡಿ, ಅದ್ರಂತೆ ಅನುಪಯುಕ್ತ ಹಸಿ ತ್ಯಾಜ್ಯ ಈಗ ಬೀದಿ ದೀಪಗಳಲ್ಲಿ ಬೆಳಕಾಗಿ ಉರಿಯಲಿದೆ. ಹೌದು ಕಸದಿಂದ ರಸವಾಗಿ ಇದೀಗ ವಿದ್ಯುತ್ ಉತ್ಪಾದನೆ ರೇಷ್ಮೆನಗರಿ ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿ ನಡೆಯುತ್ತಿದೆ.

ನಮಗೆ ಬೇಡವೆಂದು ಬಿಸಾಡುವ ಊಟ, ಸೊಪ್ಪು, ತರಕಾರಿ ತಾಜ್ಯ ಸೇರಿದಂತೆ ಹಸಿ ತ್ಯಾಜ್ಯಗಳು ಇನ್ಮುಂದೆ ನಗರದ ಬೀದಿ ದೀಪಗಳನ್ನು ಬೆಳಗಿಸಲಿವೆ. ಪ್ರತಿನಿತ್ಯ ಮನೆ, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ಕಸದಿಂದ ರಸ ಎನ್ನುವ ನಾಣ್ಣುಡಿಯನ್ನು ರಾಮನಗರ ನಗರಸಭೆ ಕಸದಿಂದ ವಿದ್ಯುತ್ ಎಂದು ಬದಲಾಯಿಸಿ ಕಾರ್ಯಾರೂಪಕ್ಕಿಳಿಸಿದೆ.

rmg wet waste 1

ನಗರಸಭೆಯ 1ನೇ ವಾರ್ಡಿನ ದ್ಯಾವರಸೇಗೌಡನ ದೊಡ್ಡಿಯಲಿ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ನಗರಸಭೆ ಪ್ರತಿನಿತ್ಯ 10 ಕೆ.ವಿ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಚಾಲನೆಯಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನ ಬಿಬಿಎಂಪಿ ಸೇರಿದಂತೆ ಮಂಗಳೂರು, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಚಾಲ್ತಿಯಲ್ಲಿದ್ದರೂ ನಗರಸಭೆ, ಪುರಸಭೆಗಳ ಹಂತದಲ್ಲಿ ಈ ಪ್ರಯತ್ನ ಯಶಸ್ವಿಯಾಗಿರುವುದು ಇದೇ ಮೊದಲು ಎಂದು ರಾಮನಗರ ನಗರಸಭೆ ಆಯುಕ್ತ ಮಾಯಣ್ಣಗೌಡ್ರು ಹೇಳುತ್ತಾರೆ.

ದ್ಯಾವರಸೇಗೌಡನ ದೊಡ್ಡಿಯಲ್ಲಿ ನಿರ್ಮಾಣ ಮಾಡಿರುವ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಉತ್ಪಾದನೆ ಘಟಕದಲ್ಲಿ ಪ್ರತಿನಿತ್ಯ 10 ಕಿಲೋ ವೋಲ್ಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಘಟಕಕ್ಕೆ ಬೇಕಾದ ವಿದ್ಯುತ್‍ನ್ನು ಇಲ್ಲಿಂದಲೇ ಬಳಸಿಕೊಳ್ಳುವ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಪಾರ್ಕ್, ಬೀದಿ ದೀಪಗಳೂ ಸಹ ಬೆಳಗುತ್ತಿವೆ.

rmg bio gas power 4

ವೆಚ್ಚ ಎಷ್ಟು? ಘಟಕವನ್ನು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 12 ಲಕ್ಷ ರೂ. ನಿರ್ಮಾಣ ಕಾಮಗಾರಿಗೆ, 8 ಲಕ್ಷ ರೂ. ಯಂತ್ರೋಪಕರಣ ಅಳವಡಿಕೆ ಮತ್ತು ಸಂಪರ್ಕ ವ್ಯವಸ್ಥೆಗೆ ಬಳಸಲಾಗಿದೆ. ಪ್ರತಿನಿತ್ಯ 1.5 ಟನ್ ಹಸಿ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮನಗರದ ಪೂಲ್ಬಾಗ್ ಪ್ರದೇಶದಲ್ಲಿ 4 ಟನ್ ಸಾಮರ್ಥ್ಯದ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.

ವಿದ್ಯುತ್ ಉತ್ಪಾದನೆ ಹೇಗೆ?: ಹಸಿ ತ್ಯಾಜ್ಯವನ್ನು ವಿಂಗಡನೆ ಮಾಡಿ, ಬಯೋ ಗ್ಯಾಸ್ ತೊಟ್ಟಿಯಲ್ಲಿ ಸುರಿಯಲಾಗುವುದು. ಇದರಿಂದ ಮಿಥೇನ್ ಗ್ಯಾಸ್, ಇಂಗಾಲ ಡೈ ಆಕ್ಸೈಡ್ ಅನಿಲಗಳು ಹೊರಹೊಮ್ಮುತ್ತವೆ. ಮಿಥೇನ್ ಗ್ಯಾಸನ್ನು ಪ್ರತ್ಯೇಕಿಸಿ, ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಜನೆರೇಟರ್‍ಗೆ ಹಾಯಿಸುವ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜೊತೆಗೆ ಅನಿಲ ಘಟಕದಿಂದ ಹೊರ ಬರುವ ತ್ಯಾಜ್ಯ ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

rmg bio gas power 3

ಎಷ್ಟು ಉಳಿತಾಯ?: ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‍ನ್ನು ಆರ್ಥಿಕವಾಗಿ ಲೆಕ್ಕಾಚಾರ ಮಾಡುವುದಾದರೆ 10 ಕೆ.ವಿ. ವಿದ್ಯುತ್ ಬೆಲೆ ಪ್ರಸ್ತುತ ಮಾರುಕಟ್ಟೆ ದರ 1.20 ರೂ. ಆಗಲಿದೆ. ಅಲ್ಲದೇ ಗೃಹ ಬಳಕೆಗೆ ಬಳಸಬಹುದಾದರೆ ಸುಮಾರು 200 ಮನೆಗಳಿಗೆ ಬಳಸಬಹುದು. ಪ್ರತಿದಿನ ಒಂದು ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾದರೆ, ತಿಂಗಳಿಗೆ 30 ಸಾವಿರ, ವಾರ್ಷಿಕ 3.60 ಲಕ್ಷ ಉಳಿತಾಯ ಮಾಡಬಹುದಾಗಿದೆ.

ಒಟ್ಟಾರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಹಸಿರು ತ್ಯಾಜ್ಯ ಮತ್ತು ಮನೆ, ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಹಸಿ ಕಸ ನಗರದ ನೈರ್ಮಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ಈಗ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನದ ಮೂಲಕ ಹಸಿ ತ್ಯಾಜ್ಯಕ್ಕೆ ಮುಕ್ತಿ ಹಾಡಲು ಮುಂದಾಗಿರೋದು ಶ್ಲಾಘನೀಯವಾಗಿದೆ.

rmg bio gas power 2

rmg wet waste 2

rmg wet waste 3

rmg wet waste 4

rmg wet waste 5

rmg wet waste 6

 

TAGGED:City councilelectricityMithane Bio ElectricityPublic TVramanagarawet Wasteನಗರ ಸಭೆಪಬ್ಲಿಕ್ ಟಿವಿಮಿಥೇನ್ ಬಯೋ ಎಲೆಕ್ಟ್ರಿಸಿಟಿರಾಮನಗರವಿದ್ಯುತ್ಹಸಿ ತ್ಯಾಜ್ಯ
Share This Article
Facebook Whatsapp Whatsapp Telegram

Cinema news

Duniya Vijay 1
ಒಬ್ಬರ ಏಳಿಗೆಯನ್ನ ಇನ್ನೊಬ್ಬರು ಸಹಿಸಲ್ಲ : ದುನಿಯಾ ವಿಜಯ್
Cinema Latest Sandalwood Top Stories
Rishab Shetty Kantara
ಸಂಪ್ರದಾಯ ಮೀರಿ ನಡೀತಾ ಹರಕೆ ನೇಮೋತ್ಸವ? – ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಅಪಸ್ವರ
Cinema Dakshina Kannada Districts Latest Sandalwood Top Stories
abhishek
ಬಿಗ್‌ಬಾಸ್‌ಗೆ ಗಿಲ್ಲಿಯಂಥವ್ರು ಬೇಕು: ಅಭಿಷೇಕ್
Cinema Latest Sandalwood Top Stories
Toxic Rocky Bhai Yash
ಟಾಕ್ಸಿಕ್ ರಿಲೀಸ್‍ಗೆ 100 ದಿನ: ರಾಕಿಬಾಯ್ ಹೊಸ ಲುಕ್ ರಿವೀಲ್
Cinema Latest Sandalwood South cinema Top Stories

You Might Also Like

Siddaramaiah Khadi Nationala Flag Suvarna Soudha Belagavi
Belgaum

ತ್ರಿವರ್ಣ ಧ್ವಜ ಭಾರತದ ಹೆಮ್ಮೆ, ಸ್ವಾಭಿಮಾನದ ಸಂಕೇತ: ಸಿದ್ದರಾಮಯ್ಯ

Public TV
By Public TV
3 minutes ago
DK Shivakumar 3
Belgaum

ಸುವರ್ಣಸೌಧದಲ್ಲಿ ಬೃಹತ್ ತ್ರಿವರ್ಣ ಧ್ವಜ – ಮುಂದಿನ ಪೀಳಿಗೆಗೆ ದೇಶಭಕ್ತಿಯ ಸಂದೇಶ ರವಾನಿಸುವ ಕೆಲಸ: ಡಿಕೆಶಿ

Public TV
By Public TV
20 minutes ago
belagavi bjp protest
Belgaum

ಸುವರ್ಣ ಸೌಧ ಮುತ್ತಿಗೆಗೆ ಹೊರಟ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

Public TV
By Public TV
55 minutes ago
tipu sultan 1
Belgaum

ಸಿದ್ದರಾಮಯ್ಯ ಸರ್ಕಾರದಲ್ಲೇ ವಿವಾದಿತ ಟಿಪ್ಪು ಜಯಂತಿ ಮತ್ತೆ ಸದ್ದು; ಕಾಂಗ್ರೆಸ್-ಬಿಜೆಪಿ ವಾಗ್ದಾಳಿ

Public TV
By Public TV
2 hours ago
High Court
Bengaluru City

ಮಹಿಳಾ ನೌಕರರಿಗೆ ಋತುಚಕ್ರ ರಜೆ – ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Public TV
By Public TV
2 hours ago
DK Shivakumar 11
Bengaluru City

ಬೆಂಗಳೂರು ಐಟಿ ಕಾರಿಡಾರ್ ಅಭಿವೃದ್ಧಿಗೆ 400 ಕೋಟಿ ರೂ. – ಐಟಿ ವಲಯಕ್ಕೆ ಡಿಸಿಎಂ ಗುಡ್‌ನ್ಯೂಸ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?