ಆಟಿಕೆ ಕೊಡಿಸುವುದಾಗಿ ಹೇಳಿ 9 ತಿಂಗಳ ಕಂದಮ್ಮನ ಮೇಲೆ ರೇಪ್

1 Min Read

ಕೋಲ್ಕತ್ತಾ: ಆಟಿಕೆ ಕೊಡಿಸುವುದಾಗಿ 9 ತಿಂಗಳ ಕಂದಮ್ಮ ಕರೆದೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಶ್ಯಾಂಪೂರ್ ತಾಲೂಕಿನಲ್ಲಿ ನಡೆದಿದೆ.

ಅತ್ಯಾಚಾರ ಎಸಗಿದ ಆರೋಪಿಯು ಬಾಲಕಿಯ ಸಂಬಂಧಿಯಾಗಿದ್ದಾನೆ. ಆರೋಪಿಯು ಬುಧವಾರವೇ ಕೃತ್ಯ ಎಸಗಿದ್ದ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಕ್ಕದ ಮನೆ ನಿವಾಸಿ ಹಾಗೂ ಸಂಬಂಧಿಯಾದ ಆರೋಪಿ ಬುಧವಾರ ಕಂದಮ್ಮನ ಮನೆಗೆ ಬಂದಿದ್ದ. ಈ ವೇಳೆ ಮಗುವಿಗೆ ಆಟಿಕೆ ಕೊಡಿಸುವುದಾಗಿ ಹೇಳಿ ಎತ್ತಿಕೊಂಡು ಹೋಗಿದ್ದ. ಬಳಿಕ ನಿರ್ಜನ ಪ್ರದೇಶದಲ್ಲಿ 9 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗುವನ್ನು ಮನೆಗೆ ತಂದು ಬಿಟ್ಟಾಗ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದರು.

ಈ ಸಂಬಂಧ ಶ್ಯಾಂಪೂರ್ ಪೊಲೀಸ್ ಠಾಣೆಗೆ ಮಗುವಿನ ಪೋಷಕರ ದೂರು ನೀಡಿದ್ದರು. ಸಂತ್ರಸ್ತೆಯ ಪೋಷಕರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *