ಬರ್ಮಿಂಗ್ಹ್ಯಾಮ್: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆಯಾಗಿದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕಾಮನ್ವೆಲ್ತ್ನಲ್ಲಿ ಚಿನ್ನ ಗೆದ್ದ ಸಾಧನೆಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಬ್ಯಾಡ್ಮಿಂಟನ್ನಲ್ಲಿ ಪಿ.ವಿ.ಸಿಂಧು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್
Advertisement
Well done @pvsindhu1 amazing achievement, complete. #gold #commgames https://t.co/U2xrEYqTQP
— David Warner (@davidwarner31) August 8, 2022
Advertisement
ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಸಿಂಧು ಅವರ ಈ ಸಾಧನೆಯನ್ನು ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್ವೆಲ್ತ್ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ
Advertisement
Advertisement
`ಸಿಂಧು ಅವರು ಪದಕ ಪಡೆದ ಚಿತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, `ವೆಲ್ಡನ್ ಪಿ.ವಿ.ಸಿಂಧು, ಕಾಮನ್ವೆಲ್ತ್ನಲ್ಲಿ ಚಿನ್ನಗೆದ್ದು ಅದ್ಭುತ ಸಾಧನೆ ಮಾಡಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.
ಪಿ.ವಿ.ಸಿಂಧು ಈ ಹಿಂದೆ 2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು. 2018 ರಲ್ಲಿ ಸೈನಾ ನೆಹ್ವಾಲ್ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದ ಸಿಂಧು, ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಕನಸು ನನಸು ಮಾಡಿದ್ದಾರೆ.