DistrictsHassanKarnatakaLatestMain Post

ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು

ಹಾಸನ: ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಎದುರು ಮೂರು ಎಕರೆ, 24 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಟ್ರಕ್ ಟರ್ಮಿನಲ್ ವಿವಾದ ಶಾಸಕರಾದ ಪ್ರೀತಂಗೌಡ ಹಾಗೂ ಹೆಚ್.ಡಿ.ರೇವಣ್ಣ ನಡುವೆ ಪ್ರತಿಷ್ಠೆಯ ಸಮರವಾಗಿದೆ. ಈ ನಡುವೆ ಇದೇ ವಿಚಾರವಾಗಿ ಡಿಸಿಗೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿಯಿಂದ ಪತ್ರ ಬಂದಿದೆ. ಟ್ರಕ್ ಟರ್ಮಿನಲ್ ವಿರುದ್ಧ ಗ್ರಾಮಸ್ಥರು, ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Preetam Gowda, Hassan, JDS, BJP, Revanna,

ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಟ್ರಕ್ ಟರ್ಮಿನಲ್ ನಿರ್ಮಾಣ ವಿವಾದ ತಾರಕಕ್ಕೇರಿತ್ತು. ಇದು ಸರ್ಕಾರಿ ಗೋಮಾಳ ಜಾಗವಾಗಿ ಉಳಿಯಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಮುಂಭಾಗ ಹಾಗೂ ಮಹಿಳಾ ಹಾಸ್ಟೆಲ್ ಪಕ್ಕದಲ್ಲಿದ್ದು, ಇಂತಹ ಜಾಗದಲ್ಲಿ ನಿರ್ಮಾಣ ಮಾಡಬಾರದು ಎಂದು ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ಯಪಡಿಸಿದ್ದರು. ಇದನ್ನೂ ಓದಿ: ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ 

ಇದು ತೀವ್ರ ಸ್ವರೂಪ ಪಡೆದು ಮಾಜಿಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ಬಲ್ ರೇವಣ್ಣ, ಎಂಎಲ್‍ಸಿ ಸೂರಜ್ ರೇವಣ್ಣ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದ್ದರು. ಇನ್ನೊಂದೆಡೆ ಶಾಸಕ ಪ್ರೀತಂಗೌಡ ಬೆಂಬಲಿಗರು ಮುಂದೆ ನಿಂತು ಕಾಮಗಾರಿ ಆರಂಭಿಸಿದ್ದು, ಇದು ವಿಕೋಪಕ್ಕೆ ತಿರುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

Preetam Gowda, Hassan, JDS, BJP, Revanna, (2)

ಇದೀಗ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಡಬಲ್ ಬೆಂಚ್‍ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹೈಕೋರ್ಟ್‍ನಲ್ಲಿ ನಮಗೆ ನ್ಯಾಯ ದೊರಕಲಿದೆ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ಯಪಡಿಸಿದ್ದಾರೆ. ಇದರ ಮಧ್ಯೆ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಕವಿತರಾಣಿ ಮಂಗಳವಾರ ಆದೇಶ ಹೊರಡಿಸಿದ್ದರು.

ಗ್ರಾಮಸ್ಥರು ಹೇಳಿದ್ದೇನು?
ಟ್ರಕ್ ಟರ್ಮಿನಲ್ ಮಾಡಲು ಈಗಾಗಲೇ ನಮಗೆ ಜಾಗ ನೀಡಿದ್ದಾರೆ. ನಾವು ಟ್ರಕ್ ಟರ್ಮಿನಲ್ ನಿರ್ಮಿಸಲು ಈಗಾಗಲೇ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದೇವೆ. ಈಗ ನಮಗೆ ಬೇರೆ ಕಡೆ ಜಾಗ ನೀಡುತ್ತಾರೆ ಎಂದರೆ ಒಪ್ಪಲು ಸಾಧ್ಯವಿಲ್ಲ. ಸರ್ಕಾರ ಆ ಜಾಗವನ್ನು ಟ್ರಕ್‍ಟರ್ಮಿನಲ್‍ಗೆ ಈಗಾಗಲೇ ಮೀಸಲಿಟ್ಟಿದೆ ಎಂದು ಹೇಳುತ್ತಿರುವುದು ಸಂತಸ ತಂದಿದೆ. ನಮಗೆ ಯಾವ ರಾಜಕೀಯ ನಾಯಕರು, ರಾಜಕೀಯ ಮುಖ್ಯವಲ್ಲ. ಆದರೆ ನಮಗೆ ಅದೇ ಜಾಗದಲ್ಲಿ ಟ್ರಕ್‍ಟರ್ಮಿನಲ್ ನಿರ್ಮಾಣ ಆಗಬೇಕು ಎಂದು ಲಾರಿ ಚಾಲಕರು ಮತ್ತು ಮಾಲೀಕರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ:  ನೀಚರು, ನಿರ್ಲಜ್ಯರಿಂದ ಪಾಕಿಸ್ತಾನ ಪರ ಘೋಷಣೆ: ಮುತಾಲಿಕ್ 

ಒಟ್ಟಿನಲ್ಲಿ ಟ್ರಕ್ ಟರ್ಮಿನಲ್ ವಿವಾದ ಶಾಸಕರುಗಳಾದ ಎಚ್.ಡಿ.ರೇವಣ್ಣ ಹಾಗೂ ಪ್ರೀತಂಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದೀಗ ಈ ವಿವಾದ ಹೈಕೋರ್ಟ್ ಅಂಗಳದಲ್ಲಿದ್ದು, ತೀರ್ಪು ಯಾರ ಪರ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published.

Back to top button