– `ದಳಪತಿ’ ಬೆಂಬಲಕ್ಕೆ ನಿಲ್ಲುತ್ತಾ ಮೈತ್ರಿ ಪಕ್ಷಗಳು?
ಚೆನ್ನೈ: ಮುಖ್ಯಮಂತ್ರಿಯಾಗಲು ಬಹುಮತದ ಕೊರತೆ ಎದುರಿಸಿ ಕಡೆಗೂ ಹತ್ತಾರು ಸರ್ಕಸ್ ಮಾಡಿ ಸರ್ಕಾರ ರಚನೆ ಮಾಡಿದ್ದ ದಳಪತಿ ವಿಜಯ್‌ಗೆ (Vijay) ಇಂದು ನಿರ್ಣಾಯಕ ದಿನ. ತಮಿಳುನಾಡು ವಿಧಾನಸಭೆಯಲ್ಲಿ (Tamil Nadu Assembly) ಇಂದು ಬಹುಮತ ಸಾಬೀತು ಮಾಡಬೇಕಿದ್ದು, ಜನನಾಯಗನ್ ನಿಜಕ್ಕೂ ಇಂದು ರಾಜಕೀಯ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಮೂಲಕ ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ವಿಜಯ್‌ಗೆ ಇಂದು ಅತಂತ್ಯ ನಿರ್ಣಾಯಕ ದಿನ. ಹತ್ತಾರು ಸರ್ಕಸ್ ಮಾಡಿ ಸರ್ಕಾರ ರಚನೆ ಮಾಡಿದ್ದ ದಳಪತಿ ಈಗ ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸಾಬೀತು ಮಾಡಬೇಕಿದೆ. ಇದನ್ನೂ ಓದಿ: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಹೋದರ ಪ್ರತೀಕ್ ಯಾದವ್ ನಿಧನ
234 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ವಿಜಯ್ ಇಂದು ಬಹುಮತ ಸಾಬೀತು ಮಾಡಬೇಕಿದೆ. ಮ್ಯಾಜಿಕ್ ನಂಬರ್ 118 ಆಗಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಬೆಂಬಲ ಸಾಬೀತುಪಡಿಸಬೇಕಿತ್ತು. ವಿಜಯ್ ತಿರುಚಿ ಪಶ್ಚಿಮ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಹಿನ್ನೆಲೆ ಅದನ್ನು ಒಂದು ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತಿರುಪತ್ತೂರು ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ ವಿಧಾನಸಭೆಯ ಬಲ 232ಕ್ಕೆ ಇಳಿದಿದ್ದು, ಬಹುಮತಕ್ಕೆ 116 ಶಾಸಕರ ಬೆಂಬಲ ಅಗತ್ಯವಿದೆ. ಇದನ್ನೂ ಓದಿ: ದೇವಸ್ಥಾನದ ಕಾಂಪೌಂಡ್ ಗೋಡೆ ಕುಸಿದು 6 ಮಂದಿ ಸಾವು – 15 ಜನರಿಗೆ ಗಾಯ
ವಿಜಯ್ ಬಳಿ ಇರುವ ಶಾಸಕರ ಬಲ:
ಟಿವಿಕೆ – 106
ಕಾಂಗ್ರೆಸ್ – 05
ಎಡಪಕ್ಷಗಳು – 04
ವಿಸಿಕೆ – 02
ಮುಸ್ಲಿಂ ಲೀಗ್ – 02
ಎಐಎಡಿಎಂಕೆ – 30
ಅಲ್ಲಿಗೆ ವಿಜಯ್ 116ರ ಮ್ಯಾಜಿಕ್ ನಂಬರ್ ಅನ್ನು ಸುಲಭವಾಗಿ ಕ್ರಾಸ್ ಮಾಡಲಿದ್ದಾರೆ. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ಚಿನ್ನ, ಬೆಳ್ಳಿ – ಆಮದು ಸುಂಕ 15% ಏರಿಕೆ
ಟಿವಿಕೆಗೆ ಬೆಂಬಲ ಘೋಷಿಸಿದ ಅಣ್ಣಾ ಡಿಎಂಕೆ ಶಾಸಕರು:
ಈಗಾಗಲೇ ವಿಜಯ್ ಬಹುಮತ ಸಾಬೀತುಪಡಿಸಲು ಬೇಕಾದ ಶಾಸಕರ ಬೆಂಬಲ ಹೊಂದಿದ್ದಾರೆ. ಈ ನಡುವೆ ಬೋನಸ್ ಎನ್ನುವಂತೆ ಶಾಸಕರಾದ ವೇಲುಮಣಿ-ಷಣ್ಮುಗಂ ನೇತೃತ್ವದ ಎಐಎಡಿಎಂಕೆ (AIADMK) ಬಣವು ಆಡಳಿತಾರೂಢ ಟಿವಿಕೆ (TVK) ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿ.ವಿ. ಷಣ್ಮುಗಂ, ವಿಜಯ್ ಮುಖ್ಯಮಂತ್ರಿ ಆಗಬೇಕು ಎಂಬುದು ಜನಾದೇಶವಾಗಿದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಜನಾದೇಶವನ್ನು ನಾವು ಗೌರವಿಸುತ್ತೇವೆ. ಎಐಎಡಿಎಂಕೆ ಪಕ್ಷದ ಪರವಾಗಿ ನಾವು ಟಿವಿಕೆ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜ್ಯೋತಿಷಿಗೆ ಸರ್ಕಾರಿ ಹುದ್ದೆ – ದಳಪತಿ ವಿಜಯ್ ʻಸರ್ಕಾರ್ʼ ನಲ್ಲಿ ಬಿರುಕು, ಮಿತ್ರಪಕ್ಷಗಳ ಅಸಮಾಧಾನ!
47 ಅಣ್ಣಾ ಡಿಎಂಕೆ ಶಾಸಕರ ಪೈಕಿ ಸುಮಾರು 30 ಮಂದಿ ಶಾಸಕರು ಬೆಂಬಲ ನೀಡಲಿದ್ದಾರೆ ಎನ್ನಲಾಗಿದ್ದು, ಅಲ್ಲಿಗೆ ವಿಜಯ್ ಸರ್ಕಾರಕ್ಕೆ 149 ಶಾಸಕರ ಬೆಂಬಲ ಸಿಗಲಿದೆ. ಹೀಗಾಗೀ ದಳಪತಿ ವಿಜಯ್ ಆನೆ ಬಲದೊಂದಿಗೆ ಬಹುಮತ ಸಾಬೀತುಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಹುಮತದ ಅಗ್ನಿಪರೀಕ್ಷೆ ಮುಗಿದ ಬಳಿಕ ವಿಜಯ್ ಅಸಲಿ ಆಡಳಿತ ಶುರುವಾಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬ್ಯಾನರ್ ರಾಜಕೀಯಕ್ಕೆ ಬ್ರೇಕ್ ಹಾಕಿದ ಟಿವಿಕೆ – ಪಕ್ಷದ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ

