ಕನ್ನಡದ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ನಟಿಸಿದ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಸಕ್ಸಸ್ ನಂತರ ತೆಲುಗಿನಲ್ಲಿ ಬಂಪರ್ ಆಫರ್ಸ್ ಅರಸಿ ಬರುತ್ತಿವೆ. ಟಾಲಿವುಡ್ ನಟ ವಿಜಯ್ ದೇವರಕೊಂಡಗೆ (Vijay Devarakonda) ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ.
ವಿಜಯ್ ದೇವರಕೊಂಡ ಅವರು ಮೃಣಾಲ್ ಠಾಕೂರ್ ಜೊತೆ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ಗೌತಮ್ ತಿಣ್ಣನುರಿ ಜೊತೆಗಿನ ವಿಜಯ್ ಚಿತ್ರಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಚಿತ್ರ ಮುಹೂರ್ತ ಕೆಲ ತಿಂಗಳುಗಳ ಹಿಂದೆ ಅದ್ಧೂರಿಯಾಗಿ ನಡೆಯಿತು. ವಿಜಯ್ಗೆ ಶ್ರೀಲೀಲಾ (Sreeleela) ನಾಯಕಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಆ ಚಾನ್ಸ್ ನಟಿ ರುಕ್ಮಿಣಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.
`ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್ ಮೂಲಕ ಟಾಲಿವುಡ್ನಲ್ಲಿ ರುಕ್ಮಿಣಿ ವಸಂತ್ ಜನಪ್ರಿಯತೆ ಪಡೆದಿದ್ದಾರೆ. ಹಾಗಾಗಿ ಚಿತ್ರದ ನಿರ್ದೇಶಕ ಗೌತಮ್, ರುಕ್ಮಿಣಿ ಸಂಪರ್ಕಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸುವ ಅವಕಾಶ ರುಕ್ಮಿಣಿಗೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಚಿತ್ರತಂಡದಿಂದ ಅಧಿಕೃತ ಅಪ್ಡೇಟ್ ಸಿಗುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಹನುಮನ ಮಂದಿರ ಶುಚಿಗೊಳಿಸಿದ ಕಂಗನಾ
‘ಸಪ್ತಸಾಗರದಾಚೆ ಎಲ್ಲೋ’ ಸೈಡ್ ಎ & ಸೈಡ್ ಬಿ, ಬಾನದಾರಿಯಲಿ ಸಿನಿಮಾ ನಂತರ ವಿಜಯ್ ಸೇತುಪತಿ ಜೊತೆ ಶಿವಣ್ಣ ಜೊತೆ ‘ಭೈರತಿ ರಣಗಲ್’ ಚಿತ್ರದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ.